Priyanka Timmesh: ‘ಎಲ್ಲೇ ಹೋದರೂ ನಾವು ನಾವಾಗಿರಬೇಕು’; ಬಿಗ್​ ಬಾಸ್​ ಜರ್ನಿ ಬಗ್ಗೆ ಪ್ರಿಯಾಂಕಾ ತಿಮ್ಮೇಶ್​ ಮಾತು

| Updated By: ಮದನ್​ ಕುಮಾರ್​

Updated on: May 14, 2021 | 3:28 PM

ನಾನು ಬಿಗ್​ ಬಾಸ್​ ಅಷ್ಟೂ ಎಪಿಸೋಡ್​ಗಳನ್ನು ನೋಡಿ ಹೋಗಿದ್ದೇನೆ. ಹೀಗಾಗಿ, ನಾನು ಪ್ರೀಪ್ಲ್ಯಾನ್​ ಮಾಡಿ ಮನೆ ಒಳಗೆ ಹೋಗಬಹುದಿತ್ತು. ಆದರೆ, ನಾನು ಆ ರೀತಿ ಮಾಡಲೇ ಇಲ್ಲ ಎಂದಿದ್ದಾರೆ ಪ್ರಿಯಾಂಕಾ.

Priyanka Timmesh: ‘ಎಲ್ಲೇ ಹೋದರೂ ನಾವು ನಾವಾಗಿರಬೇಕು’; ಬಿಗ್​ ಬಾಸ್​ ಜರ್ನಿ ಬಗ್ಗೆ ಪ್ರಿಯಾಂಕಾ ತಿಮ್ಮೇಶ್​ ಮಾತು
ಪ್ರಿಯಾಂಕಾ ತಿಮ್ಮೇಶ್​
Follow us on

ಪ್ರಿಯಾಂಕಾ ತಿಮ್ಮೇಶ್​ ಬಿಗ್​ ಬಾಸ್ ಮನೆಯಲ್ಲಿ ಇರುವಷ್ಟು ದಿನ ರೆಬೆಲ್​ ಆಗಿದ್ದರು. ಅವರು ಅಲ್ಲಿ ಯಾರಿಗೂ ಕೇರ್​ ಮಾಡುತ್ತಿರಲಿಲ್ಲ. ತಾವು ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ನೇರವಾಗಿ ಹೇಳಿದ್ದರು. ಇದು ಮನೆಯ ಅನೇಕ ಸದಸ್ಯರಿಗೆ ಇಷ್ಟವಾಗಿಲ್ಲ. ಹಾಗಂತ ಪ್ರಿಯಾಂಕಾ ಆ ಬಗ್ಗೆ ತಲೆಕೆಡಸಿಕೊಂಡಿಲ್ಲ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಅವರು ತಮ್ಮ ಜರ್ನಿ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಅನುಭವ ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್ ಸೀಸನ್​ 8 ಅರ್ಧಕ್ಕೆ​ ನಿಲ್ಲುತ್ತಿದೆ ಎಂಬುದನ್ನು ಮನೆಯಲ್ಲಿ ಏಕಾಏಕಿ ಘೋಷಣೆ ಮಾಡಿದರು. ಈ ವಿಚಾರದ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ. ‘ನನಗೆ ಬಿಗ್​ ಬಾಸ್​ ನಿಲ್ಲುತ್ತದೆ ಎನ್ನುವ ಊಹೆ ಇರಲಿಲ್ಲ. ನಾನು ಕೇವಲ 30 ದಿನದ ಹಿಂದೆ ಬಿಗ್​ ಬಾಸ್​ ಮನೆ ಒಳಗೆ ಹೋದವಳು. ನಾನು ಹೋಗುವಾಗ ಎಲ್ಲವೂ ಸರಿಯಾಗೇ ಇತ್ತು. ಹೀಗಾಗಿ ಒಂದು ಪಾಸಿಟಿವಿಟಿಯಿಂದಲೇ ಮನೆ ಒಳಗೆ ಹೋದೆ. ಆದರೆ ಒಂದೇ ತಿಂಗಳಲ್ಲಿ ಇಷ್ಟೆಲ್ಲ ಬದಲಾಗಿತ್ತು. ಅದು ನನಗೆ ಸ್ವಲ್ಪ ಶಾಕ್​ ನೀಡಿತ್ತು’ ಎಂದಿದ್ದಾರೆ ಪ್ರಿಯಾಂಕಾ.

ಸೀಸನ್ 8​ ಮತ್ತೆ ಆರಂಭವಾಗುವ ಸೂಚನೆಯನ್ನು ಬಿಗ್​ ಬಾಸ್​ ನೀಡಿದ್ದರು. ಈ ಬಗ್ಗೆ ಉತ್ತರಿಸಿದ ಪ್ರಿಯಾಂಕಾ, ‘ಆ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಒಂದೊಮ್ಮೆ ಮತ್ತೆ ಮನೆ ಒಳಗೆ ಹೋಗೋಕೆ ಕರೆದರೆ ಆ ಸಂದರ್ಭ ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಬಿಗ್​ ಬಾಸ್​ ಮನೆಯಿಂದ ಒಮ್ಮೆ ಹೊರ ಬಂದ ನಂತರ ಯಾರು ಹೇಗೆ, ಅವರ ಮೈನಸ್​ ಪಾಯಿಂಟ್​ಗಳು ಏನು ಎಂಬುದು ತಿಳಿದಿದೆ. ನಮ್ಮ ನಡುವೆ ಒಂದು ಗ್ಯಾಪ್​ ಸೃಷ್ಟಿಯಾಗಿಬಿಡುತ್ತದೆ. ಆಗ ಮನೆ ಒಳಗೆ ಹೋಗಿ ಮತ್ತೆ ಅವರ ಜತೆ ಆಡೋದು ಕಷ್ಟ’ ಎಂದಿದ್ದಾರೆ.

‘ನಾನು ಬಿಗ್​ ಬಾಸ್​ ಅಷ್ಟೂ ಎಪಿಸೋಡ್​ಗಳನ್ನು ನೋಡಿ ಹೋಗಿದ್ದೇನೆ. ಹೀಗಾಗಿ, ನಾನು ಪ್ರೀಪ್ಲ್ಯಾನ್​ ಮಾಡಿ ಮನೆ ಒಳಗೆ ಹೋಗಬಹುದಿತ್ತು. ಆದರೆ, ನಾನು ಆ ರೀತಿ ಮಾಡಲೇ ಇಲ್ಲ. ಆದಾಗ್ಯೂ ಕೆಲವರು ಮನೆಯಲ್ಲಿ ನನ್ನನ್ನು ನೋಡಿ ಅಷ್ಟೊಂದು ಉರಿದುಕೊಂಡಿದ್ದಾರೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ ನಾನು ನಾನಾಗಿದ್ದೆ ಎನ್ನುವ ಖುಷಿ ಇದೆ. ಅವರಾಗೇ ಬಂದು ಪ್ರಶ್ನೆ ಕೇಳಿದಾಗ ಮಾತ್ರ ನಾನು ಉತ್ತರಿಸಿದ್ದೇನೆ. ನಾನಾಗಿಯೇ ಹೋಗಿ ಮಾತುಕತೆ ನಡೆಸಿಲ್ಲ. ಮನೆಯವರಿಗೆ ಹಾಗೂ ಜನರಿಗೆ ನಾನು ಏನು ಎಂಬುದು ಗೊತ್ತಾಗಿದೆ. ಎಲ್ಲೇ ಇದ್ದರೂ ನಾವು ನಾವಾಗಿರಬೇಕು’ ಎಂದರು ಅವರು.

‘ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ನನಗೆ ಸ್ವಲ್ಪ ರಿಯಲ್​ ಅನಿಸಿದರು. ಅವರು ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದರು. ನನಗೆ ಒಳ್ಳೆ ಸ್ಥಾನ ಕೊಟ್ಟು ನಮ್ಮವ್ರು ಎಂದು ಫೀಲ್​ ಆಗಿದ್ದು ಅವರು ಮಾತ್ರ. ಆದರೆ, ಕೆಲ ವಿಚಾರಗಳು ಇಷ್ಟವಾಗಿಲ್ಲ. ಅದನ್ನು ನೇರವಾಗಿ ಅದರ ಎದುರೇ ಹೇಳಿದ್ದೇನೆ’ ಎಂದರು ಪ್ರಿಯಾಂಕಾ.

‘ಟಾಸ್ಕ್​ ನಡೆಯುವಾಗ ನಾನು ಪ್ರತಿಭಟನೆಗೆ ಕುಳಿತಾಗ ಯಾರೂ ಸಪೋರ್ಟ್​ ಮಾಡಿರಲಿಲ್ಲ. ನಾನೇ ತಪ್ಪು ಮಾಡ್ತಿದೀನಾ ಎಂದು ಒಮ್ಮೆ ಅನಿಸಿತ್ತು. ಆದರೂ ನನ್ನ ನಿಲುವನ್ನು ನಾನು ಬಿಡಲಿಲ್ಲ. ನಾನು ನ್ಯಾಯ ಕೇಳಿದ್ದಕ್ಕೆ ಕಳಪೆ ಹಾಕಿದ್ದರು. ಅದು ನನಗೆ ಬೇಸರ ಮೂಡಿಸಿತ್ತು. ಆದರೆ, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ನನಗೆ ಸಾಕಷ್ಟು ಜನರು ಬೆಂಬಲ ಸೂಚಿಸಿದ್ದು ಗೊತ್ತಾಯ್ತು. ಆ ವಿಚಾರ ತಿಳಿದು ತುಂಬಾನೇ ಖುಷಿಪಟ್ಟೆ’ ಎಂದಿದ್ದಾರೆ ಪ್ರಿಯಾಂಕಾ.

ಇದನ್ನೂ ಓದಿ: ಮಂಜು ಕೇವಲ ಕಾಮಿಡಿಯನ್​, ಹೀರೋ ಆಗಲ್ಲ; ಮನೆಯಿಂದ ಹೊರ ಬಂದ ಸಂಬರಗಿ ಮಾತು