- TV9 Kannada Photo gallery ದಕ್ಷಿಣ ಭಾರತದ ಈ ನಟಿಯರನ್ನು ಮೇಕಪ್ ಇಲ್ಲದೆ ನೋಡಿದ್ದೀರಾ? ಇಲ್ಲಿವೆ ವಿತೌಟ್ ಮೇಕಪ್ ಫೋಟೋಗಳು
ದಕ್ಷಿಣ ಭಾರತದ ಈ ನಟಿಯರನ್ನು ಮೇಕಪ್ ಇಲ್ಲದೆ ನೋಡಿದ್ದೀರಾ? ಇಲ್ಲಿವೆ ವಿತೌಟ್ ಮೇಕಪ್ ಫೋಟೋಗಳು
ಸೆಲೆಬ್ರಿಟಿಗಳು ಮೇಕಪ್ ಇಲ್ಲದೆ ಮನೆಯಿಂದ ಹೊರ ಬೀಳೋದು ತುಂಬಾನೇ ಕಡಿಮೆ. ಆದರೆ, ಕೆಲವೊಮ್ಮೆ ಮೇಕಪ್ ಇಲ್ಲದೆಯೇ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದಿದೆ. ಈ ರೀತಿ ಮೇಕಪ್ ಇಲ್ಲದೆ ಕಾಣಿಸಿಕೊಂಡ ಕೆಲ ದಕ್ಷಿಣ ಭಾರತದ ಹೀರೋಯಿನ್ಗಳ ಫೋಟೋ ಇಲ್ಲಿದೆ.
Updated on:May 14, 2021 | 8:34 PM

South Actress Rashmika Mandanna and other actress without makeup photos

ಸಮಂತಾ ಅಕ್ಕಿನೇನಿ: ಸಮಂತಾ ಅಕ್ಕಿನೇನಿ ಮದುವೆ ಆದ ನಂತರವೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ಕೆಲವು ವಿತೌಟ್ ಮೇಕಪ್ ಫೋಟೋಗಳು ಈ ಮೊದಲು ವೈರಲ್ ಆಗಿದ್ದವು.

ರಶ್ಮಿಕಾ ಮಂದಣ್ಣ: ನಟಿ ರಶ್ಮಿಕಾ ಮಂದಣ್ಣ ಮೇಕಪ್ ಇಲ್ಲದೆ ಕೆಲವೊಮ್ಮೆ ಕಾಣಿಸಿಕೊಂಡಿದ್ದಿದೆ. ಅವರು ಮುಖಕ್ಕೆ ಬಣ್ಣ ಹಾಕದಿದ್ದರೂ ಸಾಕಷ್ಟು ಕ್ಯೂಟ್ ಆಗಿ ಕಾಣುತ್ತಾರೆ ಎಂಬುದು ಅಭಿಮಾನಿಗಳ ಮಾತು.

ಪ್ರಿಯಾ ವಾರಿಯರ್: ನಟಿ ಪ್ರಿಯಾ ವಾರಿಯರ್ ಮಲಯಾಳಂ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಅವರ ವಿತೌಟ್ ಮೇಕಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಯನತಾರಾ: ನಯನತಾರಾ ದಕ್ಷಿಣ ಭಾರತದಲ್ಲಿ ಖ್ಯಾತಿ ಹೆಚ್ಚಿಸಿಕೊಂಡವರು. ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಆರಂಭದಲ್ಲಿ ಹೇಗಿದ್ದರು ಎನ್ನುವುದಕ್ಕೆ ಈ ಫೋಟೋ ಸಾಕ್ಷಿ.

ಕಾಜಲ್ ಅಗರ್ವಾಲ್: ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಮದುವೆ ಆಗಿದ್ದರು. ಅವರ ಮೇಕಪ್ ಇಲ್ಲದ ಫೋಟೋ ಇದು.

ಇಲಿಯಾನಾ ಡಿಕ್ರೂಜ್: ಇಲಿಯಾನಾ ಡಿಕ್ರೂಜ್ ಬಾಲಿವುಡ್ ಜತೆಗೆ ಟಾಲಿವುಡ್ನಲ್ಲೂ ಗುರುತಿಸಿಕೊಂಡಿದ್ದಾರೆ. ಅವರ ವಿತೌಟ್ ಮೇಕಪ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.

ಅನುಷ್ಕಾ ಶೆಟ್ಟಿ: ಅನುಷ್ಕಾ ಶೆಟ್ಟಿ ವಯಸ್ಸು 40 ಸಮೀಪಿಸಿದರೂ ಗ್ಲಾಮರ್ ಕಳೆದುಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಅವರ ಲೇಟೆಸ್ಟ್ ಲುಕ್ ವೈರಲ್ ಆಗಿತ್ತು. ಅದರಲ್ಲಿ ಅನುಷ್ಕಾ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು.
Published On - 4:33 pm, Fri, 14 May 21

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



