ಮಗ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವೆ ಎಂದ ಅಲ್ಲು ಅರವಿಂದ್

ದುಲ್ಕರ್ ಸಲ್ಮಾನ್, ಸಾತ್ವಿಕಾ ಮತ್ತು ಶೃತಿ ಹಾಸನ್ ನಟನೆ ಮಾಡಿರುವ ಈ ಸಿನಿಮಾ ಅನ್ನು ಪವನ್ ಸದಿನೇನಿ ನಿರ್ದೇಶಿಸಿದ್ದು, ಗೀತಾ ಆರ್ಟ್ಸ್ ಹಾಗೂ ಇತರೆ ಕೆಲವರು ಒಟ್ಟಿಗೆ ನಿರ್ಮಾಣ ಮಾಡಿದ್ದು, ಸಿನಿಮಾ ಇದೇ ನವೆಂಬರ್ 20ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರವಿಂದ್ ಸಹ ಭಾಗಿ ಆಗಿದ್ದಾರೆ. ಇತ್ತೀಚೆಗಷ್ಟೆ ತೆಲುಗಿನ ಜನಪ್ರಿಯ ನಿರೂಪಕಿ ಸುಮಾ ಕನಗಾಲ ಅವರು ಅಲ್ಲು ಅರವಿಂದ್, ದುಲ್ಕರ್ ಸಲ್ಮಾನ್ ಮತ್ತು ನಾಯಕಿ ಸಾತ್ವಿಕಾ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಅವರೊಟ್ಟಿಗೆ ಸಿನಿಮಾದ ಬಗ್ಗೆ ಮಾತನಾಡಿದ್ದರು. ಈ ವೇಳೆ ಅಲ್ಲು ಅರವಿಂದ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಮಗ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವೆ ಎಂದ ಅಲ್ಲು ಅರವಿಂದ್
Allu Arjun Allu Aravind

Updated on: Nov 17, 2026 | 7:10 PM

ಮುಖ್ಯಾಂಶಗಳು

  • ಅಲ್ಲು ಅರ್ಜುನ್ ಜೊತೆ ತಂದೆ ಅಲ್ಲು ಅರವಿಂದ್ ಸಿನಿಮಾ
  • ಮುಂದಿನ ವರ್ಷ ಮಗನ ಜೊತೆ ಸಿನಿಮಾ ಎಂದ ಅಲ್ಲು ಅರವಿಂದ್
  • ಅಲ್ಲು ಅರ್ಜುನ್ ಕೈಯಲ್ಲಿರುವ ಸಿನಿಮಾಗಳು ಯಾವುವು?

ಅಲ್ಲು ಅರವಿಂದ್, ದಕ್ಷಿಣದ ಸ್ಟಾರ್ ನಿರ್ಮಾಪಕ. ಅಲ್ಲು ಅರ್ಜುನ್ ಅವರ ತಂದೆಯೂ ಆಗಿರುವ ಅಲ್ಲು ಅರವಿಂದ್ ಅವರು ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆ ಹೊಂದಿದ್ದು, ಹಲವಾರು ಸಿನಿಮಾಗಳನ್ನು ದಶಕಗಳಿಂದಲೂ ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ಅಲ್ಲು ಅರ್ಜುನ್ ನಟಿಸಿರುವ ಕೆಲವಾರು ಸಿನಿಮಾಗಳನ್ನು ಸಹ ಅಲ್ಲು ಅರವಿಂದ್ ಈಗಾಗಲೇ ನಿರ್ಮಾಣ ಮಾಡಿದ್ದು, ತೆಲುಗು ಮಾತ್ರವೇ ಅಲ್ಲದೆ ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಿನಿಮಾಗಳನ್ನು ಸಹ ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಅವರದ್ದೇ ನಿರ್ಮಾಣದ ‘ಆಕಾಶಂಲೊ ಒಕ ತಾರಾ’ ಸಿನಿಮಾ ರಿಲೀಸ್ ಆಗುತ್ತಿದೆ.

ದುಲ್ಕರ್ ಸಲ್ಮಾನ್, ಸಾತ್ವಿಕಾ ಮತ್ತು ಶೃತಿ ಹಾಸನ್ ನಟನೆ ಮಾಡಿರುವ ಈ ಸಿನಿಮಾ ಅನ್ನು ಪವನ್ ಸದಿನೇನಿ ನಿರ್ದೇಶಿಸಿದ್ದು, ಗೀತಾ ಆರ್ಟ್ಸ್ ಹಾಗೂ ಇತರೆ ಕೆಲವರು ಒಟ್ಟಿಗೆ ನಿರ್ಮಾಣ ಮಾಡಿದ್ದು, ಸಿನಿಮಾ ಇದೇ ನವೆಂಬರ್ 20ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರವಿಂದ್ ಸಹ ಭಾಗಿ ಆಗಿದ್ದಾರೆ. ಇತ್ತೀಚೆಗಷ್ಟೆ ತೆಲುಗಿನ ಜನಪ್ರಿಯ ನಿರೂಪಕಿ ಸುಮಾ ಕನಗಾಲ ಅವರು ಅಲ್ಲು ಅರವಿಂದ್, ದುಲ್ಕರ್ ಸಲ್ಮಾನ್ ಮತ್ತು ನಾಯಕಿ ಸಾತ್ವಿಕಾ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಅವರೊಟ್ಟಿಗೆ ಸಿನಿಮಾದ ಬಗ್ಗೆ ಮಾತನಾಡಿದ್ದರು. ಈ ವೇಳೆ ಅಲ್ಲು ಅರವಿಂದ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

Loading...

ಅಲ್ಲು ಅರ್ಜುನ್ ಜೊತೆಗೆ ಮುಂದಿನ ವರ್ಷ ಸಿನಿಮಾ ಮಾಡುವುದಾಗಿ ಅಲ್ಲು ಅರವಿಂದ್ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಕೊಟ್ಟಿಲ್ಲವಾದರೂ ಮಗ ಅಲ್ಲು ಅರ್ಜುನ್ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ಅವನೊಟ್ಟಿಗೆ (ಅಲ್ಲು ಅರ್ಜುನ್) ಮುಂದಿನ ವರ್ಷ ಸಿನಿಮಾ ಮಾಡುತ್ತೇನೆ. ಆಗ ಸಂದರ್ಶನಕ್ಕೆ ಬಂದಾಗ ಇದಕ್ಕೆ ಉತ್ತರ ಕೊಡುತ್ತೇನೆ’ ಎಂದರು. ಆ ಮೂಲಕ ಮುಂದಿನ ವರ್ಷ ಅಲ್ಲು ಅರ್ಜುನ್ ಜೊತೆಗೆ ತಾವು ಸಿನಿಮಾ ಮಾಡುತ್ತಿರುವುದಾಗಿ ಪರೋಕ್ಷವಾಗಿ ಅಲ್ಲು ಅರವಿಂದ್ ಹೇಳಿದ್ದಾರೆ.

ಇದನ್ನೂ ಓದಿ:ತಾಯಿ ಕಳೆದುಕೊಂಡು ದುಃಖದಲ್ಲಿರುವ ಅಲ್ಲು ಅರವಿಂದ್​ಗೆ ಮತ್ತೊಂದು ಶಾಕ್

ಅಲ್ಲು ಅರವಿಂದ್ ಅವರು ಅಲ್ಲು ಅರ್ಜುನ್ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಕೆಲ ಸಿನಿಮಾಗಳನ್ನು ನಿರ್ಮಿಸಿದ್ದು, ನಿರ್ಮಿಸಿರುವ ಎಲ್ಲ ಸಿನಿಮಾಗಳು ಹಿಟ್ ಆಗಿವೆ. ಅಲ್ಲು ಅರ್ಜುನ್ ನಟನೆಯ ‘ಹ್ಯಾಪಿ’, ‘ಸರೈನೋಡು’, ‘ಬದ್ರಿನಾಥ್’ ಮತ್ತು ‘ಅಲಾ ವೈಕುಂಟಪುರಂಲೊ’ ಸಿನಿಮಾಗಳನ್ನು ಅಲ್ಲು ಅರವಿಂದ್ ಅವರೇ ನಿರ್ಮಾಣ ಮಾಡಿದ್ದಾರೆ. ಮಗನಿಗೆ ಪೂರ್ಣ ಸಂಭಾವನೆ ಕೊಟ್ಟೇ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡುತ್ತಾರಂತೆ. ವರ್ಷದಿಂದ ವರ್ಷಕ್ಕೆ ಮಗನ ಸಂಭಾವನೆ ಏರುತ್ತಿರುವುದು ಖುದ್ದು ನಿರ್ಮಾಪಕರಾಗಿ ಅಲ್ಲು ಅರವಿಂದ್ ಅವರಿಗೆ ಕಸಿವಿಸಿ ಸಹ ಉಂಟು ಮಾಡಿದೆ ಎಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇನ್ನು ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಅದಾದ ಬಳಿಕ ಅವರು ಮಲಯಾಳಂನ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ. ಅದಾದ ಬಳಿಕವಷ್ಟೆ ಅವರು ತಂದೆ ಅಲ್ಲು ಅರವಿಂದ್ ಅವರಿಗೆ ಕಾಲ್ ಶೀಟ್ ಕೊಡಲು ಸಾಧ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us