ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ

Box Office collection: ಸಿನಿಮಾ ಬಿಡುಗಡೆ ಆದ ಮರು ದಿನ ಕಲೆಕ್ಷನ್ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಕತೆ, ನಟನೆ, ಸಂಗೀತದ ಬಗ್ಗೆ ಮಾತನಾಡಬೇಕಾದ ಸಾಮಾನ್ಯ ಪ್ರೇಕ್ಷಕ ಸಹ ಸಿನಿಮಾಗಳ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಕೆಲವು ಸಿನಿಮಾ ಮಂದಿಯೇ ಕಳವಳ ವ್ಯಕ್ತಪಡಿಸಿದ್ದೂ ಸಹ ಇದೆ. ಆದರೆ ಸಿನಿಮಾ ತಂಡಗಳು ಹೇಳುವ ಕಲೆಕ್ಷನ್ ವಿಚಾರ ಬಹುತೇಕ ಸುಳ್ಳೆ ಆಗಿರುತ್ತದೆ. ಈ ಬಗ್ಗೆ ಸ್ವತಃ ನಿರ್ಮಾಪಕರೇ ಒಬ್ಬರು ಹೇಳಿಕೊಂಡಿದ್ದಾರೆ.

ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ
Box Office

Updated on: Jan 14, 2026 | 5:23 PM

ಮೊದಲೆಲ್ಲ ಸಿನಿಮಾಗಳು (Cinema) ಬಿಡುಗಡೆ ಆದ ಮರು ದಿನ, ಕತೆ ಹೇಗಿದೆ? ಹಾಡುಗಳು ಹೇಗಿವೆ, ಕಾಮಿಡಿ ಚೆನ್ನಾಗಿದೆಯಾ? ಫೈಟ್ ಎಷ್ಟು ಇವೆ? ಐಟಂ ಹಾಡು ಇವೆಯಾ? ಫ್ಯಾಮಿಲಿ ನೋಡಬಹುದಾ? ಹೀಗೆಲ್ಲ ಚರ್ಚೆ ಆಗುತ್ತಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಆದ ಮರು ದಿನ ಕಲೆಕ್ಷನ್ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಕತೆ, ನಟನೆ, ಸಂಗೀತದ ಬಗ್ಗೆ ಮಾತನಾಡಬೇಕಾದ ಸಾಮಾನ್ಯ ಪ್ರೇಕ್ಷಕ ಸಹ ಸಿನಿಮಾಗಳ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಕೆಲವು ಸಿನಿಮಾ ಮಂದಿಯೇ ಕಳವಳ ವ್ಯಕ್ತಪಡಿಸಿದ್ದೂ ಸಹ ಇದೆ. ಆದರೆ ಸಿನಿಮಾ ತಂಡಗಳು ಹೇಳುವ ಕಲೆಕ್ಷನ್ ವಿಚಾರ ಬಹುತೇಕ ಸುಳ್ಳೆ ಆಗಿರುತ್ತದೆ. ಈ ಬಗ್ಗೆ ಸ್ವತಃ ನಿರ್ಮಾಪಕರೇ ಒಬ್ಬರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡಗಳೇ ತಮ್ಮ ಮೊದಲ ದಿನದ ಕಲೆಕ್ಷನ್ ಅನ್ನು ಘೋಷಿಸಲು ಆರಂಭಿಸಿವೆ. ಸಿನಿಮಾ ಒಂದು ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆಯೆಂದರೆ ಅದು ಸಾಧನೆಯ ವಿಷಯವಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ ಹೀಗೆ ಘೋಷಿಸುವ ಅಂಕಿ-ಅಂಶಗಳು ಸುಳ್ಳು ಎಂದು ಇದೀಗ ಹಿರಿಯ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಒಂದು 100 ಕೋಟಿ ಗಳಿಕೆ ಮಾಡಿದರೆ ಅದರ ಅರ್ಧದಷ್ಟು ಸಹ ನಿರ್ಮಾಪಕನಿಗೆ ಬರುವುದಿಲ್ಲ ಎಂದು ಲೆಕ್ಕಾಚಾರ ನೀಡಿದ್ದಾರೆ.

ಅನಿಲ್ ಸುಂಕರ, ತೆಲುಗು ಚಿತ್ರರಂಗದ ಯಶಸ್ವಿ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕ. ಮಹೇಶ್ ಬಾಬುಗಾಗಿ ನಾಲ್ಕು ಸಿನಿಮಾಗಳು ಸೇರಿದಂತೆ, ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ತೆಲುಗು ಸ್ಟಾರ್ ನಟರುಗಳಿಗೆ ಸಿನಿಮಾಗಳನ್ನು ನಿರ್ಮಿಸಿರುವ ಅನಿಲ್ ಸುಂಕರ ಅವರು, ಇದೀಗ ಸಿನಿಮಾಗಳ ಕಲೆಕ್ಷನ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಎರಡೇ ದಿನಕ್ಕೆ 100 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ; ದೊಡ್ಡ ಕಂಬ್ಯಾಕ್

ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ‘ದೂಕುಡು’ ಸಿನಿಮಾವನ್ನು ಅನಿಲ್ ನಿರ್ಮಾಣ ಮಾಡಿದ್ದರು. ಅದೇ ಸಿನಿಮಾದ ಉದಾಹರಣೆ ನೀಡಿದ ಅನಿಲ್ ಅವರು, ‘ನಾವು ‘ದೂಕುಡು’ ಸಿನಿಮಾದ ಸಕ್ಸಸ್ ಮೀಟ್ ಸಮಯದಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದೆವು. ಆದರೆ ಅಸಲಿಗೆ ಆ ಸಿನಿಮಾ ಅಷ್ಟು ಗಳಿಕೆ ಮಾಡಿರಲಿಲ್ಲ. ಆ ನೂರು ಕೋಟಿ ಮೊತ್ತದಲ್ಲಿ ನಿರ್ಮಾಪಕರಿಗೆ ಸೇರಿದ್ದು 40 ಕೋಟಿ ಅಷ್ಟೆ ಅದೂ ತೆರಿಗೆಗೆ ಮುಂಚೆ’ ಎಂದಿದ್ದಾರೆ ಅನಿಲ್.

‘ಹಲವು ನಿರ್ಮಾಪಕರು ಕಲೆಕ್ಷನ್ ಪೋಸ್ಟರ್​​ಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸುತ್ತಾರೆ. ಅಸಲಿ ಕಲೆಕ್ಷನ್​​ಗೂ ಪೋಸ್ಟರ್​ಗೂ ಬಹಳ ದೊಡ್ಡ ಅಂತರ ಇರುತ್ತದೆ. ಈ ರೀತಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡುವುದು ಸಿನಿಮಾಗಳಿಗೆ ಆರಂಭದಲ್ಲಿ ಸಹಾಯ ಮಾಡಬಹುದು ಆದರೆ ಅವು ಸಿನಿಮಾವನ್ನು ಯಶಸ್ವಿ ಗೊಳಿಸುವುದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ. ಬದಲಿಗೆ ಇದರಿಂದ ಕೆಲವೊಮ್ಮೆ ಸಿನಿಮಾ ನಿರ್ಮಾಪಕರಿಗೆ ಸಮಸ್ಯೆ ಸಹ ಆಗುತ್ತದೆ. ಇಂಥಹಾ ಪೋಸ್ಟರ್​​ಗಳಿಂದ ನಿರ್ಮಾಪಕರಿಗೆ ಸಮಸ್ಯೆ ಆದ ಉದಾಹರಣೆಯೂ ಇದೆ’ ಎಂದಿರುವ ಅನಿಲ್, ‘ಇದೇ ಕಾರಣಕ್ಕೆ ನನ್ನ ಯಾವುದೇ ಸಿನಿಮಾಕ್ಕೂ ಇಂಥಹ ಪೋಸ್ಟರ್​​ಗಳನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ