AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ; ರೊಚ್ಚಿಗೆದ್ದ ಅಭಿಮಾನಿಗಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ತಲುಪಿರುವ ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಗಿಲ್ಲಿ ನಟ ಗೆಲ್ಲಬೇಕು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ವಿಶೇಷವಾಗಿ ಆಟೋ ಚಾಲಕರು ಗಿಲ್ಲಿ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಗಿಲ್ಲಿ ನಟ ಅವರಿಗೆ ಅಶ್ವಿನಿ ಗೌಡ ಅವರು ಮೊದಲಿನಿಂದಲೂ ಟಕ್ಕರ್ ಕೊಡುತ್ತಿದ್ದಾರೆ. ಅಭಿಮಾನಿಗಳು ಆ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಕನ್ನಡ: ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ; ರೊಚ್ಚಿಗೆದ್ದ ಅಭಿಮಾನಿಗಳು
Gilli Nata, Ashwini Gowda
Malatesh Jaggin
| Edited By: |

Updated on: Jan 14, 2026 | 6:18 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12 Finale) ಫಿನಾಲೆ ಹತ್ತಿರ ಆಗಿದೆ. ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಗಿಲ್ಲಿ ನಟ (Gilli Nata) ಗೆಲ್ಲುತ್ತಾರೆ ಎಂದು ಇಡೀ ರಾಜ್ಯದಲ್ಲಿ ಅಭಿಪ್ರಾಯ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾಡುತ್ತಿರುವ ಕಮೆಂಟ್ ಸುರಿಮಳೆಯೇ ಅದಕ್ಕೆ ಸಾಕ್ಷಿಯಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರ ಅಭಿಮಾನಿಗಳು ಅಶ್ವಿನಿ ಗೌಡ ವಿರುದ್ಧ ಕೊಂಚ ಗರಂ ಆಗಿದ್ದಾರೆ. ಕನ್ನಡ ಪರ ಹೋರಾಟಗಾರ್ತಿ ಎನ್ನುವ ಅಶ್ವಿನಿ ಗೌಡ (Ashwini Gowda) ಅವರು ಹೆಚ್ಚು ಇಂಗ್ಲಿಷ್ ಬಳಸುವುದೇ ವೀಕ್ಷಕರು ಕೋಪಕ್ಕೆ ಕಾರಣ ಆಗಿದೆ.

‘ಗಿಲ್ಲಿ ನಟ ಹಳ್ಳಿಯ ಪ್ರತಿಭೆ. ಬರೀ ಮಾಯಿ ಮಾತಲ್ಲಿ ಹೇಳಬಾರದು. ಇಡೀ ಕರ್ನಾಟಕದ ಜನರು ಅವನಿಗೆ ವೋಟ್ ಮಾಡಿ ಗೆಲ್ಲಿಸಬೇಕು. ಯಾರೋ ಹೇಳುತ್ತಾರೆ ಅಂತ ನಾವು ಮನಸ್ಸು ಬದಲಾಯಿಸಬಾರದು. ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಸರಿಯಾಗಿ ಕನ್ನಡ ಬಳಸುತ್ತಿಲ್ಲ. ಬರೀ ಇಂಗ್ಲಿಷ್ ಬಳಸುತ್ತಾರೆ. ಅವರಿಗೆ ನಾವು ಧಿಕ್ಕಾರ ಕೂಗಬೇಕಾಗಯತ್ತದೆ’ ಎಂದು ಗಿಲ್ಲಿ ನಟನ ಅಭಿಮಾನಿಯೊಬ್ಬರು ಹೇಳಿದ್ದಾರೆ.

‘ಹೋರಾಟಗಾರ್ತಿಯಾಗಿ ಹೆಣ್ಮಕ್ಕಳ ಪರ ನಿಲ್ಲುತ್ತೇನೆ ಅಂತ ಅಶ್ವಿನಿ ಗೌಡ ಹೇಳುತ್ತಾರೆ. ಆದರೆ ಒಬ್ಬ ಹೆಣ್ಮಗಳನ್ನು ಅವರು ಹೀಯಾಳಿಸುತ್ತಾರೆ. ಅಶ್ವಿನಿ ಗೌಡ ಬದಲು ಗಿಲ್ಲಿ ನಟ ಅವರಿಗೆ ವೋಟ್ ಮಾಡಿ ಗೆಲ್ಲಿಸಿ’ ಎಂದು ಅಭಿಮಾನಿಯೊಬ್ಬರು ಟಿವಿ9 ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಇರುವ ಗಿಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಜೋರಾಗಿ ಮಾಡುತ್ತಿದ್ದಾರೆ.

‘ಗಿಲ್ಲಿ ತುಂಬಾ ಕಷ್ಟಪಟ್ಟು ಬಂದಿದ್ದಾನೆ. ಎಲ್ಲರ ಜೊತೆ ಮಾತನಾಡುತ್ತಾನೆ. ಗಿಲ್ಲಿ ಬಡವರ ಮಗ. ಹಾಗಾಗಿ ಅವನು ಗೆಲ್ಲಬೇಕು. ಅವನೇ ಗೆಲ್ಲುತ್ತಾನೆ ಎಂಬ ನಂಬಿಕೆ ಶೇಕಡ 100ರಷ್ಟು ಇದೆ. ಮೊದಲ ಸೀಸನ್​ನಿಂದ 12ನೇ ಸೀಸನ್ ತನಕ ಈ ಪರಿ ಕ್ರೇಜ್ ಯಾರಿಗೂ ಬಂದಿಲ್ಲ. ಗಿಲ್ಲಿಗೆ 1 ಮಿಲಿಯನ್ ಫಾಲೋವರ್​ಸ್ ಆಗಿದ್ದಾರೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು

‘ನಾವು ಯಾರೂ ಕೂಡ ದುಡ್ಡು ತೆಗೆದುಕೊಂಡಿಲ್ಲ. ಅವನ ಪ್ರತಿಭೆ ನೋಡಿ ಸ್ವಇಚ್ಛೆಯಿಂದ ಪ್ರಚಾರ ಮಾಡುತ್ತಿದ್ದೇವೆ. ರೈತನ ಮಗ ಅವನು ಗೆಲ್ಲುತ್ತಾನೆ’ ಎಂದು ಟಿವಿ9 ಜೊತೆ ಮಾತನಾಡಿದ ಅಭಿಮಾನಿಗಳು ಹೇಳಿದ್ದಾರೆ. ಗಿಲ್ಲಿ ಗೆದ್ದರೆ ಕೆಲವು ಆಟೋ ಚಾಲಕರು ಉಚಿತ ಸೇವೆ ನೀಡುವುದಾಗಿಯೂ ಹೇಳಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಮೇಲೆ ಜನರು ತೋರಿಸುತ್ತಿರುವ ಪ್ರೀತಿ ದೊಡ್ಡದಾಗಿದೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕೈ ಮುಖಂಡ, ಕಣ್ಣೀರಿಟ್ಟ ಕಮಿಷನರ್
ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕೈ ಮುಖಂಡ, ಕಣ್ಣೀರಿಟ್ಟ ಕಮಿಷನರ್
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ!
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ!
ರಾಹುಲ್​​ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಹೇಳಿದ್ದೇನು ನೋಡಿ
ರಾಹುಲ್​​ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಹೇಳಿದ್ದೇನು ನೋಡಿ
ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು ಅಧಿಕಾರಿಗಳೇ ದಂಗು
ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು ಅಧಿಕಾರಿಗಳೇ ದಂಗು
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ
ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​