
ನಟ ಅಲ್ಲು ಅರ್ಜುನ್ ಅವರು ‘ಪುಷ್ಪ 2’ (Pushpa 2) ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಕೆಲಸಗಳನ್ನು ಬೇಗ ಮುಗಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದರೆ ಅಲ್ಲು ಅರ್ಜುನ್ (Allu Arjun) ಅವರು ಶೂಟಿಂಗ್ಗೆ ಬ್ರೇಕ್ ನೀಡಿ ವಿದೇಶಕ್ಕೆ ಹಾರಿದ್ದಾರೆ. ಹಾಗಂತ ಅವರು ಫಾರಿನ್ ಟ್ರಿಪ್ ಎಂಜಾಯ್ ಮಾಡಲು ತೆರಳಿಲ್ಲ. ಬದಲಿಗೆ, ಒಂದು ಪ್ರಮುಖ ಕೆಲಸದ ಸಲುವಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಹೌದು, ಬರ್ಲಿನ್ನಲ್ಲಿ ನಡೆಯುತ್ತಿರುವ 74ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ (74th Berlin International Film Festival) ಭಾಗಿಯಾಗಲು ಅವರು ತೆರಳಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳು ಕೂಡ ಈ ಚಿತ್ರೋತ್ಸವಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ.
ಫೆಬ್ರವರಿ 15ರಂದು ಬೆಳಗ್ಗೆ ಅಲ್ಲು ಅರ್ಜುನ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. 74ನೇ ಸಾಲಿನ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿ ಆಗಿದೆ. ‘ಪುಷ್ಪ 2’ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಆದರೆ ಸಿನಿಮೋತ್ಸವದ ಕಾರಣದಿಂದ ಅಲ್ಲು ಅರ್ಜುನ್ ಅವರು ಚಿಕ್ಕ ಬ್ರೇಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಶೂಟಿಂಗ್ ಮಧ್ಯೆ ರಶ್ಮಿಕಾ ಮಂದಣ್ಣ ಮಾಡಿದ ಕೆಲಸ ಇದು
ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಮಾಡಬೇಕಿರುವುದರಿಂದ ವೇಗವಾಗಿ ಚಿತ್ರೀಕರಣ ಮುಗಿಸಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಇದೆ.
ಇದನ್ನೂ ಓದಿ: ಅರೆಸ್ಟ್ ಆಗಿದ್ದ ‘ಪುಷ್ಪ 2’ ಚಿತ್ರದ ನಟ ಜಗದೀಶ್ ಮತ್ತೆ ಶೂಟಿಂಗ್ ಸೆಟ್ಗೆ ಹಾಜರಿ
‘ಪುಷ್ಪ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿನ ನಟನೆಗೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಆ ಕಾರಣದಿಂದ ಇದರ ಸೀಕ್ವೆಲ್ ಮೇಲೆ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಬಹುದು ಎಂದು ಕೆಲವೇ ದಿನಗಳ ಹಿಂದೆ ಗಾಸಿಪ್ ಹಬ್ಬಿತ್ತು. ಆದರೆ ಆ ಗಾಳಿಸುದ್ದಿಯನ್ನು ನಿರ್ಮಾಪಕರು ತಳ್ಳಿಹಾಕಿದ್ದಾರೆ. ‘ಪುಷ್ಪ 2’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಮತ್ತು ಪೋಸ್ಟರ್ನಿಂದ ಭಾರಿ ಹೈಪ್ ಕ್ರಿಯೇಟ್ ಆಗಿದೆ. ಆಗಸ್ಟ್ 15ರಂದು ದೊಡ್ಡ ಪರದೆಯಲ್ಲಿ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ