AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೆಸ್ಟ್​ ಆಗಿದ್ದ ‘ಪುಷ್ಪ 2’ ಚಿತ್ರದ ನಟ ಜಗದೀಶ್​ ಮತ್ತೆ ಶೂಟಿಂಗ್​ ಸೆಟ್​ಗೆ ಹಾಜರಿ

2023ರ ಡಿಸೆಂಬರ್​ನಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಜಗದೀಶ್​ ಪ್ರತಾಪ್​ ಭಂಡಾರಿ ಮೇಲೆ ಗಂಭೀರ ಆರೋಪಗಳು ಇವೆ. ಸಹ-ನಟಿಗೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಅಂಥ ಕಲಾವಿದನಿಗೆ ‘ಪುಷ್ಪ 2’ ಸಿನಿಮಾದಲ್ಲಿ ಅವಕಾಶ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ಈ ನಡುವೆ ಜಗದೀಶ್​ ಜಾಮೀನು ಪಡೆದು ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ಅರೆಸ್ಟ್​ ಆಗಿದ್ದ ‘ಪುಷ್ಪ 2’ ಚಿತ್ರದ ನಟ ಜಗದೀಶ್​ ಮತ್ತೆ ಶೂಟಿಂಗ್​ ಸೆಟ್​ಗೆ ಹಾಜರಿ
ಜಗದೀಶ್​, ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: Feb 01, 2024 | 3:33 PM

Share

ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಚಿತ್ರಕ್ಕೆ ಹಲವು ಅಡೆತಡೆಗಳು ಉಂಟಾಗಿವೆ. ಅದೆಲ್ಲವನ್ನೂ ನಿವಾರಿಸಿಕೊಂಡು ತಂಡ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಕಥಾನಾಯಕನ ಗೆಳೆಯನ ಪಾತ್ರ ಮಾಡುತ್ತಿರುವ ಜಗದೀಶ್​ ಪ್ರತಾಪ್​ ಭಂಡಾರಿ (Jagadeesh Prathap Bandari) ಬಂಧನಕ್ಕೆ ಒಳಗಾದ ಬಳಿಕ ಶೂಟಿಂಗ್​ಗೆ ತೊಂದರೆ ಆಗಿತ್ತು. ಸಹ-ನಟಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲಿದೆ. ನಟಿಯ ಆತ್ಮಹತ್ಯೆ ಬಳಿಕ ಜಗದೀಶ್​ ಬಂಧನವಾಗಿತ್ತು. ಈಗ ಜಗದೀಶ್​ಗೆ ಜಾಮೀನು ಸಿಕ್ಕಿದೆ. ಕೂಡಲೇ ಅವರು ‘ಪುಷ್ಪ 2’ ಸಿನಿಮಾದ ಶೂಟಿಂಗ್​ಗೆ ಹಾಜರಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ (Allu Arjun) ಜೊತೆ ಜಗದೀಶ್​ ಅವರ ಅನೇಕ ದೃಶ್ಯಗಳು ಇರುವುದರಿಂದ ಜಾಮೀನು ಸಿಕ್ಕ ಕೂಡಲೇ ತರಾತುರಿಯಲ್ಲಿ ಶೂಟಿಂಗ್​ ಮಾಡಲಾಗುತ್ತಿದೆ.

ಕಳೆದ ಡಿಸೆಂಬರ್​ನಲ್ಲಿ ಜಗದೀಶ್​ ಅವರ ಬಂಧನ ಆಗಿತ್ತು. ಆ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ತೊಂದರೆ ಆಗಿತ್ತು. ಮೂಲಗಳ ಪ್ರಕಾರ ‘ಪುಷ್ಪ 2’ ತಂಡದವರು ಜಗದೀಶ್​ಗೆ ಜಾಮೀನು ಕೊಡಿಸಲು ಸಹಾಯ ಮಾಡಿದ್ದಾರೆ. ಈಗ ಜಾಮೀನು ಸಿಕ್ಕಿದ್ದು, ಹೈದರಾಬಾದ್​ನಲ್ಲಿ ಗಂಗಮ್ಮ ಜಾತ್ರೆಯ ದೃಶ್ಯಗಳನ್ನು ಈಗ ಚಿತ್ರಿಸಲಾಗುತ್ತಿದೆ. ಅದರಲ್ಲಿ ಜಗದೀಶ್​ ಭಾಗವಹಿಸಿದ್ದಾರೆ. ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​

ನಟ ಜಗದೀಶ್​ ಮೇಲೆ ಗಂಭೀರ ಆರೋಪಗಳು ಇವೆ. ಹಾಗಾಗಿ ಅಂಥ ಕಲಾವಿದನಿಗೆ ‘ಪುಷ್ಪ 2’ ಸಿನಿಮಾದಲ್ಲಿ ಅವಕಾಶ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ಹಾಗಂತ ಈಗ ಚಿತ್ರತಂಡದವರು ಆ ನಟನನ್ನು ಹೊರಗಿಡಲು ಸಾಧ್ಯವಿಲ್ಲ. ಯಾಕೆಂದರೆ, ಇದು ‘ಪುಷ್ಪ’ ಚಿತ್ರದ ಮುಂದುವರಿದ ಭಾಗ. ಕಥೆ ಕೂಡ ಮುಂದುವರಿದಿದ್ದು, ಅದರಲ್ಲಿ ಜಗದೀಶ್​ ಮಾಡಿರುವ ಕೇಶವ ಎಂಬ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ. ಆ ಪಾತ್ರವನ್ನು ಮಧ್ಯದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಜಗದೀಶ್​ ಅವರು ಚಿತ್ರತಂಡದಲ್ಲಿ ಮುಂದುವರಿಯುತ್ತಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಬಗ್ಗೆ ಗಾಸಿಪ್​ ಮಾಡುವವರ ಬಾಯಿ ಮುಚ್ಚಿಸಲು ಈ ಒಂದು ಪೋಸ್ಟರ್​ ಸಾಕು

‘ಪುಷ್ಪ 2’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಲಿದೆ ಎಂದು ಇತ್ತೀಚೆಗೆ ಗಾಸಿಪ್​ ಹಬ್ಬಿತ್ತು. ಆದರೆ ಅದನ್ನು ಚಿತ್ರತಂಡದವರು ತಳ್ಳಿ ಹಾಕಿದ್ದಾರೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದುಕೊಂಡ ದಿನಾಂಕದಲ್ಲೇ ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ ಎಂಬುದನ್ನು ತಿಳಿಸುವ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಆಗಸ್ಟ್​ 15ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ತೆರೆಕಾಣಲಿದೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್​, ಡಾಲಿ ಧನಂಜಯ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್