ಚಿತ್ರರಂಗದ ರೂಪುರೇಷೆ ಬದಲಾಗುತ್ತಿದೆ. ಈಗ ಇಂಡಸ್ಟ್ರಿಯಲ್ಲಿರುವ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆಯಾಗುತ್ತಿವೆ. ಮೊದಲು 100 ಕೋಟಿ ರೂಪಾಯಿ ಗಳಿಸಿದರೆ ಹೆಚ್ಚು ಎಂಬ ಕಾಲ ಇತ್ತು. ಆದರೆ, ಈಗಿನ ಸಿನಿಮಾಗಳು ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೊಸ ದಾಖಲೆ ಸೃಷ್ಟಿಸುತ್ತಿವೆ. ಆದರೆ ಈಗ ಪುಷ್ಪ 2 ಚಿತ್ರ ಎಲ್ಲಾ ದಾಖಲೆಗಳನ್ನು ಮುರಿಯಲಿದೆ.
ಆಮಿರ್ ಖಾನ್ ನಟನೆಯ ‘ದಂಗಲ್’ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ. ಈ ಸಿನಿಮಾ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರ ವಿಶ್ವದಾದ್ಯಂತ ರೂ. 2024.6 ಕೋಟಿ ಸಂಗ್ರಹಿಸಿದೆ. ಈ ದಾಖಲೆಯನ್ನು ಯಾವ ಸಿನಿಮಾದಿಂದ ಈವರೆಗೆ ಮುರಿಯಲಾಗಿಲ್ಲ.
‘ಬಾಹುಬಲಿ 2’ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿತ್ತು. ‘ಬಾಹುಬಲಿ 2’ ಚಿತ್ರ ವಿಶ್ವದಾದ್ಯಂತ ರೂ. 1742.3 ಕೋಟಿ ಗಳಿಸಿದೆ. ಈ ಮೂಲಕ ದಾಖಲೆ ಬರೆದಿತ್ತು. ಇದನ್ನು ‘ಪುಷ್ಪ 2’ ಮುರಿಯಲು ರೆಡಿ ಆಗಿದೆ.
ಇದನ್ನೂ ಓದಿ:‘ಪುಷ್ಪ 2’ ಹಾಡಿಗೆ ಅದ್ವಿತಿ ಶೆಟ್ಟಿ ಮಸ್ತ್ ಡ್ಯಾನ್ಸ್
‘ಪುಷ್ಪ 2’ ಈಗ ಮೂರನೇ ಸ್ಥಾನದಲ್ಲಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಭರ್ಜರಿ ಕಮಾಯಿ ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ಇಂದಿಗೂ ಮಿಂಚುತ್ತಿದೆ. ಈ ಚಿತ್ರ ಈಗಾಗಲೇ ರೂ. 1719.5 ಕೋಟಿ ಸಂಗ್ರಹಿಸಿದೆ. ಶೀಘ್ರದಲ್ಲೇ ‘ಪುಷ್ಪ 2’ ಚಿತ್ರವು ‘ಬಾಹುಬಲಿ 2’ ದಾಖಲೆಯನ್ನು ಮುರಿಯಲಿದೆ.
ನಾಲ್ಕನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಇದೆ. ರಾಮ್ ಚರಣ್ ಮತ್ತು ಎನ್ಟಿಆರ್ ಅಭಿನಯದ RRR ಚಿತ್ರ ವಿಶ್ವಾದ್ಯಂತ ರೂ. 1250.9 ಕೋಟಿ ಸಂಗ್ರಹಿಸಲಾಗಿದೆ. ಈ ಸಿನಿಮಾದ ನಂತರ ಯಶ್ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರ ರೂ. 1176.5 ಕೋಟಿ ಸಂಗ್ರಹಿಸಿದೆ. ಈಗ ಎಲ್ಲ ದಾಖಲೆಗಳನ್ನು ‘ಪುಷ್ಪ 2’ ಉಡೀಸ್ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ