ಯಾವಾಗ ಬರಲಿದೆ ‘ಪುಷ್ಪ 2’ ಸಿನಿಮಾ ಟೀಸರ್​? ಕೆಲವೇ ದಿನಗಳು ಮಾತ್ರ ಬಾಕಿ

|

Updated on: Mar 29, 2024 | 8:41 PM

ಶೀಘ್ರದಲ್ಲೇ ‘ಪುಷ್ಪ 2’ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಏ.8ರಂದು ಈ ಸಿನಿಮಾದ ಟೀಸರ್​ ಅನಾವರಣ ಆಗಲಿದೆ. ಅಂದು ನಟ ಅಲ್ಲು ಅರ್ಜುನ್​ ಜನ್ಮದಿನ. ಹಾಗಾಗಿ ಆ ವಿಶೇಷ ದಿನವೇ ಟೀಸರ್​ ಬಿಡುಗಡೆ ಮಾಡಿದರೆ ರೀಚ್​ ಚೆನ್ನಾಗಿ ಇರುತ್ತದೆ ಎಂಬುದು ‘ಪುಷ್ಪ 2’ ತಂಡದ ಲೆಕ್ಕಾಚಾರ.

ಯಾವಾಗ ಬರಲಿದೆ ‘ಪುಷ್ಪ 2’ ಸಿನಿಮಾ ಟೀಸರ್​? ಕೆಲವೇ ದಿನಗಳು ಮಾತ್ರ ಬಾಕಿ
ಅಲ್ಲು ಅರ್ಜುನ್​
Follow us on

ಭಾರಿ ಹೈಪ್​ ಸೃಷ್ಟಿ ಮಾಡಿರುವ ‘ಪುಷ್ಪ 2’ (Pushpa 2) ಸಿನಿಮಾದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ (Allu Arjun) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶೂಟಿಂಗ್ ನಡುವೆ ಬಿಡುವು ಪಡೆದು ಅವರು ಇತ್ತೀಚೆಗೆ ದುಬೈಗೆ ತೆರಳಿದ್ದರು. ಅಲ್ಲಿನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ಅವರ ಮೇಣದ ಪ್ರತಿಮೆ ಅನಾವರಣ ಮಾಡಲಾಗಿದೆ. ಆ ಪ್ರತಿಮೆಯು ತಗ್ಗೆದೆಲೇ ಸ್ಟೈಲ್​ನಲ್ಲಿ ಇದೆ. ಇಂಥ ಬೆಳವಣಿಗೆಗಳಿಂದ ‘ಪುಷ್ಪ 2’ ಸಿನಿಮಾಗೆ ಭರ್ಜರಿ ಪ್ರಚಾರ ಸಿಗಲಿದೆ. ಈ ನಡುವೆ ಟೀಸರ್​ (Pushpa 2 Teaser) ಯಾವಾಗ ಬರಲಿದೆ ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಎದ್ದಿದೆ.

ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಶೀಘ್ರದಲ್ಲೇ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಏಪ್ರಿಲ್​ 8ರಂದು ‘ಪುಷ್ಪ 2’ ಟೀಸರ್​ ಅನಾವರಣ ಆಗಲಿದೆ. ಅಂದು ಅಲ್ಲು ಅರ್ಜುನ್​ ಅವರ ಜನ್ಮದಿನ. ಹಾಗಾಗಿ ಆ ವಿಶೇಷ ದಿನದಂದು ಟೀಸರ್​ ರಿಲೀಸ್​ ಮಾಡಿದರೆ ಖಂಡಿತವಾಗಿಯೂ ರೀಚ್​ ಚೆನ್ನಾಗಿ ಇರುತ್ತದೆ ಎಂಬುದು ಚಿತ್ರತಂಡದವರ ಲೆಕ್ಕಾಚಾರ. ತಮ್ಮ ನೆಚ್ಚಿನ ನಟನ ಬರ್ತ್​ಡೇ ದಿನ ಸಿಗಲಿರುವ ಆ ವಿಶೇಷ ಗಿಫ್ಟ್​ಗಾಗಿ ಅಲ್ಲು ಅರ್ಜುನ್​ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್​ ಬಂಧನವಾಯ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಅಲ್ಲು ಅರ್ಜುನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕ ಕಳೆದಿದೆ. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಗಂಗೋತ್ರಿ’ 2003ರ ಮಾರ್ಚ್​ 28ರಂದು ಬಿಡುಗಡೆ ಆಗಿತ್ತು. ಆ ಸಿನಿಮಾ ತೆರೆಕಂಡು 21 ವರ್ಷ ಕಳೆದಿರುವ ಪ್ರಯುಕ್ತ ಅಲ್ಲು ಅರ್ಜುನ್​ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಭಿಮಾನಿಗಳಿಗೆ ಇನ್ನೂ ಹೆಮ್ಮೆ ಆಗುವ ರೀತಿಯಲ್ಲಿ ಕೆಲಸ ಮಾಡಲಿರುವುದಾಗಿ ಅವರು ಹೇಳಿದ್ದಾರೆ. ಆ ಮೂಲಕ ‘ಪುಷ್ಪ 2’ ಸಿನಿಮಾ ಭರ್ಜರಿಯಾಗಿ ಇರಲಿದೆ ಎಂಬುದರ ಸುಳಿವನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: Allu Arjun: ತಮ್ಮ ಮೇಣದ ಪ್ರತಿಮೆ ಪಕ್ಕ ನಿಂತು ಪೋಸ್ ಕೊಟ್ಟ ಅಲ್ಲು ಅರ್ಜುನ್

ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಇನ್ನು ಉಳಿದಿರುವುದು ನಾಲ್ಕೂವರೆ ತಿಂಗಳು ಮಾತ್ರ. ಸಿನಿಮಾದ ಕೆಲಸಗಳು ಇನ್ನೂ ಬಾಕಿ ಇದೆ. ಅದನ್ನೆಲ್ಲ ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳಬೇಕಿದೆ. ಪ್ರಚಾರಕ್ಕಾಗಿ ಚಿತ್ರತಂಡ ಹೆಚ್ಚು ಒತ್ತು ನೀಡಬೇಕಿದೆ. ಟೀಸರ್​ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುವುದು. ವಿದೇಶದಲ್ಲಿಯೂ ‘ಪುಷ್ಪ 2’ ಶೂಟಿಂಗ್​ ನಡೆಯಲಿದೆ. ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಟೀಸರ್​ನಲ್ಲಿ ಯಾವ ಅಂಶ ಹೈಲೈಟ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.