AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ತಮ್ಮದೇ ಮೇಣದ ಪ್ರತಿಮೆ ಅನಾವರಣ ಮಾಡಿದ ‘ಪುಷ್ಪ 2’ ನಟ ಅಲ್ಲು ಅರ್ಜುನ್​

‘ಇಂದು ಮೇಣದ ಪ್ರತಿಮೆ ಅನಾವರಣ. ಪ್ರತಿಯೊಬ್ಬ ನಟನಿಗೂ ಇದು ಮೈಲುಗಲ್ಲಿನ ಕ್ಷಣ. ಇದಕ್ಕಾಗಿ ಧನ್ಯವಾದಗಳು’ ಎಂಬ ಕ್ಯಾಪ್ಷನ್​ ಜೊತೆ ನಟ ಅಲ್ಲು ಅರ್ಜುನ್​ ಅವರು ಮೇಣದ ಪ್ರತಿಮೆಯ ಫೋಟೋ ಹಂಚಿಕೊಂಡಿದ್ದಾರೆ. ಇಂಥ ಗೌರವ ಪಡೆದ ಅವರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ದುಬೈನಲ್ಲಿ ತಮ್ಮದೇ ಮೇಣದ ಪ್ರತಿಮೆ ಅನಾವರಣ ಮಾಡಿದ ‘ಪುಷ್ಪ 2’ ನಟ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: Mar 28, 2024 | 5:16 PM

Share

ನಟ ಅಲ್ಲು ಅರ್ಜುನ್​ (Allu Arjun) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ‘ಪುಷ್ಪ’ ಸಿನಿಮಾ ಬಿಡುಗಡೆ ಆದ ಬಳಿಕ ಅವರ ಬಗ್ಗೆ ಜನರಿಗೆ ಇರುವ ಕ್ರೇಜ್​ ಜಾಸ್ತಿ ಆಗಿದೆ. ಆ ಸಿನಿಮಾದ ನಟನೆಗಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದ ನಂತರವಂತೂ ಜನಪ್ರಿಯತೆ ಹೆಚ್ಚಾಗಿದೆ. ಈಗ ಅಲ್ಲು ಅರ್ಜುನ್​ ಅವರ ಮುಡಿಗೆ ಇನ್ನೊಂದು ಗರಿ ಸೇರ್ಪಡೆ ಆಗಿದೆ. ದುಬೈನಲ್ಲಿ ಅವರ ಮೇಣದ ಪ್ರತಿಮೆಯನ್ನು (Allu Arjun Wax Statue) ಅನಾವರಣ ಮಾಡಲಾಗಿದೆ. ಸ್ವತಃ ಅಲ್ಲು ಅರ್ಜುನ್​ ಅವರು ದುಬೈನ ಮೇಡಂ ಟುಸ್ಸಾಡ್ಸ್​ (Madame Tussauds) ಮ್ಯೂಸಿಯಂಗೆ ತೆರಳಿ ತಮ್ಮದೇ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ. ಅದರ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಗಣ್ಯರಿಗೆ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂ ಕಡೆಯಿಂದ ಮೇಣದ ಪ್ರತಿಮೆಯ ಗೌರವ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಸಾಧನೆ ಮಾಡಿದ ಅನೇಕ ಸೆಲೆಬ್ರಿಟಿಗಳನ್ನು ಈ ರೀತಿ ಗೌರವಿಸಲಾಗಿದೆ. ಈಗ ಅಲ್ಲು ಅರ್ಜುನ್​ ಅವರಿಗೂ ಮೇಣದ ಪ್ರತಿಮೆಯ ಗೌರವ ಸಿಕ್ಕಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಅಲ್ಲು ಅರ್ಜುನ್​ ಹಂಚಿಕೊಂಡ ಫೋಟೋ ಎಲ್ಲ ಕಡೆ ವೈರಲ್​ ಆಗಿದೆ.

‘ಅಲಾ ವೈಕುಂಠಪುರಮುಲೋ’ ಸಿನಿಮಾದ ರೀತಿಯಲ್ಲಿ ಅಲ್ಲು ಅರ್ಜುನ್​ ಅವರ ಈ ಪ್ರತಿಮೆ ನಿರ್ಮಾಣ ಆಗಿದೆ. ಕುಟುಂಬ ಸಮೇತರಾಗಿ ದುಬೈಗೆ ತೆರಳಿರುವ ಅವರು ತಮ್ಮದೇ ಪ್ರತಿಮೆಯ ಪಕ್ಕದಲ್ಲಿ ನಿಂತು ಅದೇ ರೀತಿ ಪೋಸ್​ ನೀಡಿದ್ದಾರೆ. ಸದ್ಯಕ್ಕೆ ಪ್ರತಿಮೆಯ ಹಿಂಬದಿ ಫೋಟೋ ಮಾತ್ರ ಅನಾವರಣ ಆಗಿದೆ. ಮುಂಬದಿಯ ಫೋಟೋಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಅದು ಕೂಡ ಶೀಘ್ರವೇ ರಿವೀಲ್​ ಆಗಲಿದೆ.

‘ಮೇಡಂ ಟುಸ್ಸಾಡ್ಸ್​ನಲ್ಲಿ ಇಂದು ಮೇಣದ ಪ್ರತಿಮೆಯ ಅನಾವರಣ. ಪ್ರತಿ ಕಲಾವಿದರಿಗೂ ಇದು ಮೈಲುಗಲ್ಲಿನ ಕ್ಷಣ. ಧನ್ಯವಾದಗಳು’ ಎಂಬ ಕ್ಯಾಪ್ಷನ್​ನೊಂದಿಗೆ ಅಲ್ಲು ಅರ್ಜುನ್​ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಇಂಥ ಅಪರೂಪದ ಗೌರವ ಪಡೆದಿರುವ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಈ ಪ್ರತಿಮೆಯಿಂದಾಗಿ ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ.

ಇದನ್ನೂ ಓದಿ: ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್​ ಬಂಧನವಾಯ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಅಲ್ಲು ಅರ್ಜುನ್​ ಅವರು ಈಗ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರ ನಡುವೆ ಬ್ರೇಕ್​ ಪಡೆದುಕೊಂಡು ಅವರು ದುಬೈಗೆ ಹೋಗಿದ್ದಾರೆ. ಅವರಿಗೆ ಪತ್ನಿ ಅಲ್ಲು ಸ್ನೇಹಾ ರೆಡ್ಡಿ, ಮಕ್ಕಳಾದ ಅಲ್ಲು ಅರ್ಹಾ ಹಾಗೂ ಅಲ್ಲು ಅಯಾನ್​ ಕೂಡ ಸಾಥ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More