Updated on: Mar 29, 2024 | 2:32 PM
ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆಯನ್ನು ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ. ಅವರೇ ಇದನ್ನು ಅನಾವರಣ ಮಾಡಿದ್ದಾರೆ ಅನ್ನೋದು ವಿಶೇಷ. ಈ ಫೋಟೋ ವೈರಲ್ ಆಗಿದೆ.
ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ವಿಶೇಷ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ದಕ್ಷಿಣದ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಕೂಡ ನಿರ್ಮಾಣ ಆಗಿದೆ.
ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಕೋಟ್ ಧರಿಸಿ ಸ್ಟೈಲಿಶ್ ಆಗಿ ಬರುತ್ತಾರೆ. ಅದೇ ಗೆಟಪ್ನಲ್ಲಿ ಈ ಮೇಣದ ಪ್ರತಿಮೆ ಇದೆ.
ಮೇಣದ ಪ್ರತಿಮೆ ಎದುರು ಅಲ್ಲು ಅರ್ಜುನ್ ಅವರು ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಯಾರು, ಮೇಣದ ಪ್ರತಿಮೆ ಯಾರು ಎಂದು ಗೊಂದಲ ಮೂಡುವಷ್ಟು ಪರ್ಫೆಕ್ಟ್ ಆಗಿ ಈ ಪ್ರತಿಮೆ ಮೂಡಿದೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಅವರು ಈ ಕಾರ್ಯಕ್ರಮಕ್ಕೆ ತೆರಳೋ ಉದ್ದೇಶದಿಂದ ಅವರು ಶೂಟಿಂಗ್ಗೆ ಬ್ರೇಕ್ ನೀಡಿದ್ದರು.