ಅಲ್ಲು ಅರ್ಜುನ್​ ರೀತಿ ‘ತಗ್ಗೆದೆಲೇ’ ಎನ್ನುತ್ತಿರುವ ‘ಪುಷ್ಪ’ ಗಣಪ: ಕೆಲವರಿಂದ ಕೇಳಿಬಂತು ಟೀಕೆ

| Updated By: ಮದನ್​ ಕುಮಾರ್​

Updated on: Aug 31, 2022 | 9:58 AM

Ganesh Chaturthi 2022: ‘ತಗ್ಗೆದೆಲೇ..’ ರೀತಿಯ ಗಣಪನ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ.

ಅಲ್ಲು ಅರ್ಜುನ್​ ರೀತಿ ‘ತಗ್ಗೆದೆಲೇ’ ಎನ್ನುತ್ತಿರುವ ‘ಪುಷ್ಪ’ ಗಣಪ: ಕೆಲವರಿಂದ ಕೇಳಿಬಂತು ಟೀಕೆ
‘ತಗ್ಗೆದೆಲೇ..’ ಗಣಪ, ಅಲ್ಲು ಅರ್ಜುನ್
Follow us on

ವಿಘ್ನ ವಿನಾಶಕ ಗಣೇಶನಿಗೆ ಅಸಂಖ್ಯಾತ ರೂಪ. ಎಲ್ಲ ರೀತಿಯಲ್ಲೂ ಗಣಪನ (Lord Ganesha) ಮೂರ್ತಿ ಸಿದ್ಧಗೊಳ್ಳುತ್ತದೆ. ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ವಿಧವಿಧವಾದ ಗಣಪನ ವಿಗ್ರಹಗಳ ರಾರಾಜಿಸುತ್ತವೆ. ಸಿನಿಮಾಗಳ ಶೈಲಿಯಲ್ಲೂ ಗಣೇಶನ ಮೂರ್ತಿಯನ್ನು ತಯಾರಿಸಲಾಗುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಪುನೀತ್​ ರಾಜ್​ಕುಮಾರ್​ ಅವರ ರೀತಿಯಲ್ಲಿ ವಿನಾಯಕನ ಮೂರ್ತಿ ಸಿದ್ಧವಾದ ಬೆನ್ನಲ್ಲೇ ‘ಪುಷ್ಪ’ (Pushpa Movie) ಸಿನಿಮಾದ ಸ್ಟೈಲ್​ನಲ್ಲೂ ಗಣಪನನ್ನು ತಯಾರಿಸಲಾಗಿದೆ. ಅಲ್ಲು ಅರ್ಜುನ್​ (Allu Arjun) ಅವರು ‘ತಗ್ಗೆದೆಲೇ..’ ಎಂದು ಡೈಲಾಗ್​ ಹೊಡೆದ ರೀತಿಯಲ್ಲೇ ಈ ಗಣೇಶ ಮೂಡಿಬಂದಿದ್ದಾನೆ. ಆ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಲ್ಲು ಅರ್ಜುನ್​ ಅಭಿಮಾನಿಗಳು ಇದನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಒಂದು ವರ್ಗದ ಜನರಿಂದ ಟೀಕೆ ವ್ಯಕ್ತವಾಗಿದೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದ ಈ ಚಿತ್ರವನ್ನು ಹಿಂದಿ ಪ್ರೇಕ್ಷಕರು ಕೂಡ ಮೆಚ್ಚಿಕೊಂಡರು. ಅದರ ಕ್ರೇಜ್​ ಇನ್ನೂ ನಿಂತಿಲ್ಲ. ಗಣಪತಿ ಹಬ್ಬದ ಸಂದರ್ಭದಲ್ಲೂ ‘ಪುಷ್ಪ’ ಚಿತ್ರದ ಛಾಯೆ ಪಸರಿಸಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮಾಡಿದ ಪುಷ್ಪ ರಾಜ್​ ಎಂಬ ಪಾತ್ರದ ರೀತಿಯಲ್ಲಿ ಗಣೇಶನ ಮೂರ್ತಿ ತಯಾರಿಸಿ, ಪೂಜೆ ಮಾಡಲಾಗುತ್ತಿದೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರು ‘ತಗ್ಗೆದೆಲೇ..’ ಎಂದು ಡೈಲಾಗ್​ ಹೊಡಿದಿದ್ದು ಸಖತ್​ ಫೇಮಸ್​ ಆಗಿತ್ತು. ತೆಲುಗು ಮಂದಿ ಮಾತ್ರವಲ್ಲದೇ ವಿದೇಶದ ಕೆಲವು ಸೆಲೆಬ್ರಿಟಿಗಳು ಕೂಡ ಅದೇ ರೀತಿ ರೀಲ್ಸ್​ ಮಾಡಿ ಗಮನ ಸೆಳೆದಿದ್ದರು. ಅನೇಕ ಸಂದರ್ಭದಲ್ಲಿ ಆ ಶೈಲಿಯಲ್ಲಿ ಸೆಲೆಬ್ರಿಟಿಗಳು ಪೋಸ್​ ನೀಡಿದ್ದುಂಟು. ಈಗ ಗಣಪನ ಮೂರ್ತಿಯನ್ನು ಕೂಡ ‘ತಗ್ಗೆದಲೇ..’ ಶೈಲಿಯಲ್ಲಿ ತಯಾರಿಸಲಾಗಿದೆ.

ಇದನ್ನೂ ಓದಿ
Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
Puneeth Rajkumar: ಪುನೀತ್ ರಾಜ್​ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
Puneeth Rajkumar: ಕಲಾವಿದನ ಕಲ್ಪನೆಯಲ್ಲಿ ಪುನೀತ್​-ಗಣಪ; ‘ನಮ್ಮ ಪಾಲಿಗೆ ದೇವರು ಇಲ್ಲ’ ಎಂದ ಫ್ಯಾನ್ಸ್​

ಈ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ. ‘ಓರ್ವ ನಟನ ಮೇಲೆ ಅಭಿಮಾನ ಇರುವುದು ಸಹಜ. ಆದರೆ ಗಣೇಶನಿಗೆ ಈ ರೂಪ ನೀಡಿರುವುದು ಸರಿಯಲ್ಲ. ನೀವು ಗಣಪನನ್ನು ಪೂಜಿಸುತ್ತಿದ್ದೀರೋ ಅಥವಾ ಅಣಕಿಸುತ್ತಿದ್ದೀರೋ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

2021ರ ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಕಂಡಿತು. ಸುಕುಮಾರ್​ ನಿರ್ದೇಶನ ಮಾಡಿದ ಆ ಚಿತ್ರಕ್ಕೆ ಈಗ ಎರಡನೇ ಪಾರ್ಟ್​ ಸಿದ್ಧವಾಗುತ್ತಿದೆ. ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಇತ್ತೀಚೆಗೆಷ್ಟೇ ಆರಂಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:58 am, Wed, 31 August 22