ಅಲ್ಲು ಅರ್ಜುನ್ ‘ಪುಷ್ಪಾ’ ಚಿತ್ರಕ್ಕೆ ಮತ್ತೆ ಅಡ್ಡಿ, ಚಿತ್ರತಂಡದಲ್ಲಿ ಕೆಲವರಿಗೆ ಕೊರೊನಾ ಸೋಂಕು?

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಲಾಕ್‌ಡೌನ್ ನಂತ್ರ ಪುಷ್ಪಾ ಸಿನಿಮಾಗಾಗಿ ಮೇಕಪ್ ಹಾಕಿ ಮತ್ತೆ ಆ್ಯಕ್ಟ್ ಮಾಡ್ತಿದ್ದಾರೆ. ಕೆಲವು ತಿಂಗಳು ಎಲ್ಲದಕ್ಕೂ ಬ್ರೇಕ್ ಹಾಕಿದ್ದ ಚಿತ್ರತಂಡ ಈಗ ಭರದಿಂದ ಶೂಟಿಂಗ್ ಶುರು ಮಾಡಿತ್ತು. ಆದ್ರೆ ಸದ್ಯ ಪುಷ್ಪ ಚಿತ್ರತಂಡದ ಶೂಟಿಂಗ್‌ಗೆ ಮಹಾಮಾರಿ ಬ್ರೇಕ್ ಹಾಕಿದೆಯಂತೆ.

  • Ayesha Banu
  • Published On - 7:08 AM, 4 Dec 2020
ಅಲ್ಲು ಅರ್ಜುನ್ ‘ಪುಷ್ಪಾ’ ಚಿತ್ರಕ್ಕೆ ಮತ್ತೆ ಅಡ್ಡಿ, ಚಿತ್ರತಂಡದಲ್ಲಿ ಕೆಲವರಿಗೆ ಕೊರೊನಾ ಸೋಂಕು?
ಅಲ್ಲು ಅರ್ಜುನ್

ಲಾಕ್‌ಡೌನ್‌ ನಂತ್ರ ಸ್ಟಾರ್‌ಗಳು ಮೈ ಕೊಡವಿ ಮೇಕಪ್ ಹಾಕಿ ಅರ್ಧಕ್ಕೆ ನಿಂತಿದ್ದ ಸಿನಿಮಾಗಳಿಗೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ನವೆಂಬರ್‌ ಮೊದಲ ವಾರದಿಂದ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಕೂಡ ಮೇಕಪ್ ಹಾಕಿ ಪುಷ್ಪ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ಚಿತ್ರತಂಡ ಕೂಡ ರಾಜಮಂಡ್ರಿ ಪ್ರದೇಶದಲ್ಲಿ ಶೂಟಿಂಗ್‌ ಮಾಡ್ತಿತ್ತು.

ಅಂದಹಾಗೆ ಸುಕುಮಾರ್‌ ಆ್ಯಕ್ಷನ್‌ ಕಟ್ ಹೇಳ್ತಿರೋ ಪುಷ್ಪ ಚಿತ್ರಕ್ಕೆ ಒಂದೊಂದೇ ಘಟನೆ ತಲೆ ಬಿಸಿ ಮಾಡ್ತಿದೆ. ಈಗಾಗಲೇ ಅಲ್ಲು ಅರ್ಜುನ್‌ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ವೇಳೆ ಅಲ್ಲು ಅರ್ಜುನ್‌ ರಗಡ್‌ ಲುಕ್‌ ಫೋಟೋವೊಂದು ರಿಲೀಸ್ ಆಗಿದ್ದಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿತ್ತು. ಈ ಘಟನೆ ನಂತ್ರ ಕೆಲವು ಬಂದೋಬಸ್ತ್‌ ಕ್ರಮಕೈಗೊಂಡು ಶೂಟಿಂಗ್‌ ಮುಂದುವರೆಸಿದ್ದ ಚಿತ್ರತಂಡ, ಈಗ ಬ್ರೇಕ್‌ ತೆಗೆದುಕೊಂಡು ಹೈದರಾಬಾದ್‌ಗೆ ವಾಪಸ್ಸಾಗಿದ್ಯಂತೆ.

ಚಿತ್ರೀಕರಣದ ಯೂನಿಟ್‌ನಲ್ಲಿನ ಕೆಲವರಿಗೆ ಕೊರೊನಾ:
ಸದ್ಯ ಚಿತ್ರತಂಡ ರಾಜಮಂಡ್ರಿಯಲ್ಲಿ ಶೂಟಿಂಗ್‌ ಪ್ಯಾಕಪ್‌ ಮಾಡಿ ವಾಪಸ್ಸಾಗೋಕೆ ಕಾರಣ, ಚಿತ್ರೀಕರಣದ ಯೂನಿಟ್‌ನಲ್ಲಿನ ಕೆಲವರಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ ಅನ್ನೋ ಮಾಹಿತಿ ಹರಿದಾಡ್ತಿದೆ. ಹೀಗಾಗಿ ಶೂಟಿಂಗ್‌ನಲ್ಲಿದ್ದ ಅದ್ಯಾರಿಗೆ ಕೊರೊನಾ ಬಂದಿದೆ. ಇದ್ದಕ್ಕಿದ್ದಂತೆ ಶೂಟಿಂಗ್‌ಗೆ ಬ್ರೇಕ್‌ ಹಾಕೋಕೆ ಕಾರಣ ಆಗಿರೋದು ಕೊರೊನಾ ಅನ್ನೋದು ನಿಜವಾ ಅನ್ನೋದನ್ನ ಚಿತ್ರತಂಡವೇ ಬಹಿರಂಗಪಡಿಸಬೇಕಿದೆ.

ಒಟ್ನಲ್ಲಿ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್‌ ಹಾಗೂ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ವಿಭಿನ್ನ ಶೇಡ್‌ನಲ್ಲಿ ಕಮಾಲ್‌ ಮಾಡೋಕೆ ರೆಡಿಯಾಗಿದ್ದಾರೆ. ಆದ್ರೆ ಪದೇಪದೆ ಒಂದಲ್ಲಾ ಒಂದು ಕಾರಣದಿಂದ ಶೂಟಿಂಗ್‌ಗೆ ಬ್ರೇಕ್‌ ಬಿದ್ರೆ ಅಂದುಕೊಂಡಿದ್ದಕ್ಕಿಂತ ಇನ್ನೂ ಕೆಲ ದಿನ ಅಲ್ಲು ಅಭಿಮಾನಿಗಳು ಕಾಯಲೇಬೇಕು. ಸದ್ಯ ಕೊರೊನಾ ಲಕ್ಷಣ ಕೇವಲ ಪುಷ್ಪ ಚಿತ್ರತಂಡದ ಬೇರೆ ಬೇರೆ ಕಾರ್ಮಿಕರಿಗೆ ಕಾಣಿಸಿದ್ಯಾ, ಅಥವಾ ಕಲಾವಿದರಿಗೇನಾದ್ರೂ ವೈರಸ್ ಹಬ್ಬಿದ್ಯಾ ಅನ್ನೋದನ್ನ ಕಾದುನೋಡ್ಬೇಕಿದೆ.