ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಘೋಷಣೆ ಆಯ್ತು ಹೊಸ ವೆಬ್​ ಸೀರಿಸ್ Love, Scandal and Doctors.. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್. ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ.ಅಧಿಕಾರ, ರಾಜಕೀಯ, ಸ್ವಜನಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ.

Skanda

| Edited By: sadhu srinath

Dec 03, 2020 | 5:14 PM

ಮುಂಬೈ: ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಚಿತ್ರಮಂದಿರಗಳು ಮುಚ್ಚಿದ್ದವು. ಈಗ ಥಿಯೇಟರ್​​ಗಳು ಮತ್ತೆ ತೆರೆದಿವೆಯಾದರೂ ಜನರು ಮೊದಲಿನಷ್ಟು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಅವಧಿಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ಗಳು ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿವೆ. ಅಲ್ಲದೆ, ಹೊಸ ಹೊಸ ವೆಬ್ ಸೀರಿಸ್​​ಗಳನ್ನು ಕೂಡ ಪರಿಚಯ ಮಾಡುತ್ತಿವೆ. ಈಗ ಒಟಿಟಿ ವೇದಿಕೆಗಳಾದ ಎಎಲ್​ಟಿ ಬಾಲಾಜಿ ಮತ್ತು ಜೀ5 ಗುರುವಾರ ‘ಎಲ್ಎಸ್​​​ಡಿ- ಲವ್, ಸ್ಕ್ಯಾಂಡಲ್ ಮತ್ತು ಡಾಕ್ಟರ್ಸ್ LSD- Love Scandal and Doctors ಹೆಸರಿನ ಹೊಸ ವೆಬ್ ಸಿರೀಸ್ ಘೋಷಣೆ ಮಾಡಿದೆ.

ರಾಹುಲ್ ದೇವ್ ಈ ವೆಬ್ ಸೀರಿಸ್​​ನ ಮುಖ್ಯ ಪಾತ್ರಧಾರಿ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ವೆಬ್ ಸೀರಿಸ್ ಮೂಡಿ ಬರುತ್ತಿದೆ. ಅಧಿಕಾರ, ರಾಜಕೀಯ, ಸ್ವಜನ ಪಕ್ಷಪಾತದಂತಹ ವಿಚಾರಗಳನ್ನು ಎಲ್ಎಸ್​​​ಡಿಯಲ್ಲಿ ಹೇಳಲಾಗುತ್ತಿದೆ. ಸಾವಿನ ಸುತ್ತ ಈ ವೆಬ್ ಸೀರಿಸ್​​ನ ಕತೆ ಸಾಗಲಿದೆ. ಇದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚುವುದೇ ಚಿತ್ರದ ಮುಖ್ಯ ಎಳೆ.

ಜೀ5ನಲ್ಲಿ ಪ್ರಸಾರವಾದ ‘ಹೂ ಈಸ್ ಯುವರ್ ಡ್ಯಾಡಿ’ಯಲ್ಲಿ ನಟಿಸಿದ್ದ ದೇವ್, ಈ ವೆಬ್ ಸೀರಿಸ್ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಷ್ಟೇ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. “ಈ ವೆಬ್ ಸಿರೀಸ್ ಪಾತ್ರಕ್ಕಾಗಿ ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೇನೆ. ಎಲ್ಎಸ್​​ಡಿ ಉತ್ತಮವಾಗಿ ಮೂಡಿ ಬರುವ ನಿರೀಕ್ಷೆ ಇದೆ,” ಎಂದು ದೇವ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಡಾ. ರಾಣಾ ಹೆಸರಿನ ಪಾತ್ರದಲ್ಲಿ ದೇವ್ ಕಾಣಿಸಿಕೊಳ್ಳಲಿದ್ದಾರೆ.

ಕಾರ್ವಾನ್ ಸಿನಿಮಾದಲ್ಲಿ ನಟಿಸಿದ್ದ ಸಿದ್ಧಾರ್ಥ್ ಮೆನನ್ ಈ ಸರಣಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ಪಾಠಕ್, ಶೃತಿ ರಿಂಧಾನಿ, ತಾನ್ಯಾ ಸಚ್ದೇವ ಮತ್ತು ಪುಲ್ಕಿತ್ ಈ ವೆಬ್ ಸಿರೀಸ್ನಲ್ಲಿ ನಟಿಸುತ್ತಿದ್ದಾರೆ. ಸೇಕ್ರೇಡ್ ಗೇಮ್ಸ್​​ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದ ಸಕೀಬ್ ಪಂಡೋರ್ ಎಲ್ಎಸ್​​ಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು

Follow us on

Related Stories

Most Read Stories

Click on your DTH Provider to Add TV9 Kannada