ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ತೆರೆಕಂಡಿದೆ. ಈದ್ ಹಬ್ಬದ ಪ್ರಯುಕ್ತ ಮೇ 13ರಂದು ವಿಶ್ವಾದ್ಯಂತ ಇರುವ ಸಲ್ಮಾನ್ ಖಾನ್ ಫ್ಯಾನ್ಸ್ಗೆ ಮನರಂಜನೆ ನೀಡುವ ಸಲುವಾಗಿ ರಾಧೆ ರಿಲೀಸ್ ಆಗಿದೆ. ಲಾಕ್ಡೌನ್ ಇಲ್ಲದೇ ಇರುವ ದೇಶ, ನಗರಗಳ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇನ್ನುಳಿದಂತೆ ಓಟಿಟಿ ಪ್ಲಾಟ್ಫಾರ್ಮ್ಗಳ ಮೂಲಕ ಪ್ರೇಕ್ಷಕರು ರಾಧೆ ಸಿನಿಮಾವನ್ನು ನೋಡುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆಯನ್ನೂ ಜನರು ತಿಳಿಸುತ್ತಿದ್ದಾರೆ.
ದೊಡ್ಡ ಪರದೆಯಲ್ಲಿ ರಿಲೀಸ್ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡೇ ಈ ಸಿನಿಮಾ ತಯಾರಾಗಿತ್ತು. ಆದರೆ ಲಾಕ್ಡೌನ್ನಿಂದಾಗಿ ಓಟಿಟಿ ಮೊರೆ ಹೋಗಬೇಕಾಯಿತು. ಸಲ್ಮಾನ್ ಖಾನ್ಗೆ ಜೋಡಿಯಾಗಿ ದಿಶಾ ಪಠಾಣಿ ಅಭಿನಯಿಸಿದ್ದು, ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಈ ಮೊದಲೇ ಬಿಡುಗಡೆಯಾದ ಟ್ರೇಲರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಪೂರ್ತಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಚಿತ್ರದ ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚು ಪ್ರಶಂಸೆ ಸಿಗುತ್ತಿದೆ.
ಈ ಚಿತ್ರ ದುಬೈನಲ್ಲಿ ಪ್ರೀಮಿಯರ್ ಆಗಿದೆ. ಅಲ್ಲಿರುವ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಸಲ್ಮಾನ್ ಖಾನ್ ಅತ್ಯುತ್ತಮವಾಗಿ ಮಾಡಿದ್ದಾರೆ. ಈ ಸಿನಿಮಾದ ಸೆಕೆಂಡ್ ಹಾಫ್ ತುಂಬ ಸಸ್ಪನ್ಸ್ ಆಗಿದೆ’ ಎಂದು ದುಬೈನಲ್ಲಿರುವ ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
Radhe Review : from an insider in Dubai premiere -Nikhila Garz
Movie is full paced with high octane scenes … Salman khan at its best.. One big suspense in the second half … Movie time is just 1 hr and 45 minutes..Full review cumin soon..#SalmanKhan #Radhe #RadheReview
— Being SUMAN (@suman_being) May 12, 2021
‘ಬಾಡಿಗಾರ್ಡ್, ಕಿಕ್, ವಾಂಡೆಟ್ ಸಿನಿಮಾಗಳಿಗಿಂತಲೂ ರಾಧೆ ಚೆನ್ನಾಗಿದೆ. ಈಗ ಆಯ್ಕೆ ನಿಮ್ಮದು. ದ್ವೇಷಿಸುವವರ ಮಾತು ಕೇಳಬೇಡಿ. ನೀವೇ ಒಮ್ಮೆ ನೋಡಿ. ಖಂಡಿತಾ ರಾಧೆ ಇಷ್ಟವಾಗಲಿದೆ’ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
#RadheReview : If I have to rate it in order then #Radhe > Wanted > Kick> Bodyguard. Salman’s stylish action movies .Now choice is yours ,dont go by haters review ,start exploring on your own interest ,you would end up loving #Radhe pic.twitter.com/bP4gLToKKf
— S ͣⓜ️ ͤ ͤ ͬ (@Sallustan) May 12, 2021
‘ಸಲ್ಮಾನ್ ಖಾನ್ ಫ್ಯಾನ್ಸ್ ಅಲ್ಲದವರಿಗೂ ಈ ಚಿತ್ರ ಇಷ್ಟ ಆಗುತ್ತದೆ. ಯಾಕೆಂದರೆ ಇದು ರೇಸ್ 3 ಅಥವಾ ದಬಂಗ್ 3 ಚಿತ್ರಗಳ ರೀತಿ ಇಲ್ಲ. ಇದು ವಾಡೆಂಟ್ ಮತ್ತು ರೆಡಿ ಸಿನಿಮಾಗಳ ಕಾಂಬಿನೇಷನ್ ರೀತಿ ಇದೆ. ಸಿನಿಮಾದ ಅವಧಿ ಕಡಿಮೆ ಇರುವುದು ಬೆಸ್ಟ್ ವಿಷಯ ಆಗಿದೆ’ ಎಂಬ ವಿಮರ್ಶೆ ಟ್ವಿಟರ್ನಲ್ಲಿ ವ್ಯಕ್ತವಾಗಿದೆ. ಇದೊಂದು ಪಕ್ಕಾ ಮಸಾಲಾ ಸಿನಿಮಾ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಲ್ಮಾನ್ ನಟನೆಯ ಸಿನಿಮಾಗಳಲ್ಲಿ ಅಭಿಮಾನಿಗಳು ಬಯಸಬಹುದಾದ ಎಲ್ಲ ಅಂಶಗಳನ್ನು ರಾಧೆ ಒಳಗೊಂಡಿದೆ.
Even if they are not die hard #SalmanKhan fans..they are ought to love #Radhe…because it is not like #Race3, #Dabangg3 etc.
It is a combo of #Wanted, #Ready with amazing music and the best thing is the short length of the film.#RadheReview #RadheDay https://t.co/bZ70f6pkst
— Nishit Shaw (@NishitShawHere) May 13, 2021
#OneWordReview#Radhe: BAAP of MaSS ENTERTAINER
Rating: ? ? ? ?
Action-packed entertainer with powerful dialogue… #SalmanKhan terrific,#RandeepHooda impactful, #sangay, #Ggulati superb… First hour razor-sharp, second half Mass ending… super entertainer!
#RadheReview— Mass ? (@dhonism_77) May 12, 2021
‘ಇದು ಮಾಸ್ ಮನರಂಜನೆ ನೀಡುವ ಸಿನಿಮಾ. ಭರ್ಜರಿ ಆ್ಯಕ್ಷನ್ ಜೊತೆಗೆ ಪವರ್ಫುಲ್ ಆದಂತಹ ಡೈಲಾಗ್ಗಳಿವೆ. ಸಲ್ಮಾನ್ ಖಾನ್ ಮತ್ತು ವಿಲನ್ ರಣದೀಪ್ ಹೂಡ ನಟನೆ ಪರಿಣಾಮಕಾರಿ ಆಗಿದೆ. ಸೆಕೆಂಡ್ ಹಾಫ್ ತುಂಬ ಮಾಸ್ ಆಗಿದೆ. ಸೂಪರ್ ಮನರಂಜನೆ ನೀಡುತ್ತದೆ’ ಎಂದು ಸಲ್ಲು ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ. ಡ್ರಗ್ ಮಾಫಿಯಾದ ಕುರಿತ ಕಥೆ ಈ ಚಿತ್ರದಲ್ಲಿದೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಜಾಕಿ ಶ್ರಾಫ್ ಅಭಿನಯಿಸಿದ್ದಾರೆ.
ಇದನ್ನೂ ಓದಿ:
Salman Khan: ರಾಧೆ ಚಿತ್ರಕ್ಕೆ 21 ಕಡೆ ಕತ್ತರಿ; ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಂಥದ್ದೇನಿದೆ?
ರಾಧೆ ನಿಮ್ಮನ್ನು ರಂಜಿಸೋದು ಕೇವಲ 114 ನಿಮಿಷ; ಇದು ಸಲ್ಮಾನ್ ನಟನೆಯ ಅತಿ ಸಣ್ಣ ಚಿತ್ರ!