Pooja Hegde: ಪೂಜಾ ಹೆಗ್ಡೆಗೆ ಕಳೆಯಿತು ಕೊರೊನಾ ಕಂಟಕ; ನಿಟ್ಟುಸಿರು ಬಿಟ್ಟ ಅಭಿಮಾನಿಗಳು

| Updated By: ರಾಜೇಶ್ ದುಗ್ಗುಮನೆ

Updated on: May 06, 2021 | 3:21 PM

Coronavirus: ನಿಮ್ಮೆಲ್ಲರ ಹಾರೈಕೆಯಿಂದ ಚಮತ್ಕಾರ ಆಗಿದೆ ಎನಿಸುತ್ತದೆ. ಅದಕ್ಕಾಗಿ ಸದಾ ಋಣಿ ಆಗಿರುತ್ತೇನೆ. ಎಲ್ಲರೂ ಸೇಫ್​ ಆಗಿರಿ ಎಂದು ನಟಿ ಪೂಜಾ ಹೆಗ್ಡೆ ಹೇಳಿದ್ದಾರೆ.

Pooja Hegde: ಪೂಜಾ ಹೆಗ್ಡೆಗೆ ಕಳೆಯಿತು ಕೊರೊನಾ ಕಂಟಕ; ನಿಟ್ಟುಸಿರು ಬಿಟ್ಟ ಅಭಿಮಾನಿಗಳು
ಕೊರೊನಾದಿಂದ ಚೇತರಿಸಿಕೊಂಡ ಪೂಜಾ ಹೆಗ್ಡೆ
Follow us on

ಸದಾ ಕಾಲ ಸಿನಿಮಾ ಚಟುವಟಿಕೆಗಳ ಸಲುವಾಗಿ ಹೊರಗಡೆ ಸುತ್ತಾಡುವ ಸೆಲೆಬ್ರಿಟಿಗಳಿಗೆ ಕೊರೊನಾ ವೈರಸ್​ ಹೆಚ್ಚು ಕಾಟ ಕೊಡುತ್ತಿದೆ. ಟಾಲಿವುಡ್​ನ ಅನೇಕ ಕಲಾವಿದರಿಗೆ ಕೊವಿಡ್​ ಪಾಸಿಟಿವ್​ ಆಗಿದೆ. ಒಂದು ವಾರದ ಹಿಂದೆ ನಟಿ ಪೂಜಾ ಹೆಗ್ಡೆ ಕೂಡ ಕೊರೊನಾ ಸೋಂಕು ತಗುಲಿಸಿಕೊಂಡಿದ್ದರು. ಆದರೆ ಈಗ ಅವರಿಗೆ ನೆಗೆಟಿವ್​ ವರದಿ ಬಂದಿದೆ. ಆ ಸಿಹಿ ಸುದ್ದಿಯನ್ನು ಅವರು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

‘ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಚೆನ್ನಾಗಿ ಚೇತರಿಸಿಕೊಂಡಿದ್ದೇನೆ. ಕೊನೆಗೂ ನೆಗೆಟಿವ್​ ರಿಪೋರ್ಟ್​ ಬಂದಿದೆ. ಕೊರೊನಾದ ಹಿಂಬದಿಗೆ ಒದ್ದು ಕಳಿಸಿದ್ದೇನೆ. ನಿಮ್ಮೆಲ್ಲರ ಹಾರೈಕೆಯಿಂದ ಚಮತ್ಕಾರ ಆಗಿದೆ ಎನಿಸುತ್ತದೆ. ಅದಕ್ಕಾಗಿ ಸದಾ ಋಣಿ ಆಗಿರುತ್ತೇನೆ. ಎಲ್ಲರೂ ಸೇಫ್​ ಆಗಿರಿ’ ಎಂದು ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಪೂಜಾ ಹೆಗ್ಡೆ ಹೇಳಿದ್ದಾರೆ.

ಕರ್ನಾಟಕ ಮೂಲದವರಾದ ಪೂಜಾ ಹೆಗ್ಡೆ ಬಹುಭಾಷೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಟಾಲಿವುಡ್​ ಮತ್ತು ಬಾಲಿವುಡ್​ನಲ್ಲಿ ಅವರು ಮಿಂಚುತ್ತಿದ್ದಾರೆ. ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಚಿತ್ರಕ್ಕೆ ಪೂಜಾ ನಾಯಕಿ. ಆಚಾರ್ಯ, ಸರ್ಕಸ್​, ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ. ಸದ್ಯ ಕೊರೊನಾ ಕಾರಣದಿಂದ ಅವರು ಗ್ಯಾಪ್​ ತೆಗೆದುಕೊಂಡಿದ್ದಾರೆ.

ಅನೇಕ ಸೆಲೆಬ್ರಿಟಿಗಳು ಕೊರೊನಾದಿಂದ ಮೃತರಾಗುತ್ತಿದ್ದಾರೆ. ಎಷ್ಟೇ ಹಣ, ಪ್ರಭಾವ ಇದ್ದರೂ ಕೊವಿಡ್​ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಕಿತ್ಸೆಗಾಗಿ ಎಲ್ಲರೂ ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಪೂಜಾ ಹೆಗ್ಡೆಗೆ ಕೊರೊನಾ ಪಾಸಿಟಿವ್​ ಆಗಿದೆ ಎಂದು ಗೊತ್ತಾದ ತಕ್ಷಣ ಅವರ ಅಭಿಮಾನಿಗಳು ತುಂಬ ಆತಂಕಗೊಂಡಿದ್ದರು. ಪ್ರತಿ ದಿನ ಪೂಜಾ ಅವರ ಹೆಲ್ತ್​ ಅಪ್​ಡೇಟ್​ ತಿಳಿದುಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದರು. ಅಂತಿಮವಾಗಿ ಎಲ್ಲರಿಗೂ ಪೂಜಾ ಗುಡ್​ ನ್ಯೂಸ್​ ನೀಡಿದ್ದಾರೆ.

ಕೆ.ವಿ. ಆನಂದ್​, ಕೋಟಿ ರಾಮು, ರೇಣುಕಾ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೊರೊನಾದಿಂದ ಮೃತರಾಗಿದ್ದಾರೆ. ಪ್ರತಿದಿನ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಮತ್ತು ವೆಂಟಿಲೇಟರ್​ಗಳ ಕೊರತೆ ಕೂಡ ಇದೆ. ಹಾಗಾಗಿ ಆದಷ್ಟು ಮನೆಯಲ್ಲೇ ಇದ್ದುಕೊಂಡು ಸೇಫ್​ ಆಗಿರಿ ಎಂದು ಬಹುತೇಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳುತ್ತಿದ್ದಾರೆ.

ಇದನ್ನೂ ಓದಿ:

ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ

ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ