ಸಲ್ಮಾನ್ ಖಾನ್ ಸಿನಿಮಾ ಎಂದಮೇಲೆ ಅಲ್ಲಿ ಆ್ಯಕ್ಷನ್ಗಳಿಗೆ ಬರ ಇರುವುದಿಲ್ಲ. ಅವರ ಪ್ರತಿ ಸಿನಿಮಾದಲ್ಲೂ ತೂಕ ಇರುವ ವಿಲನ್ ಹುಡುಕಿ ತರಲಾಗುತ್ತದೆ. ಇದು ರಾಧೆ ಚಿತ್ರದಲ್ಲೂ ಮುಂದುವರಿದಿದೆ. ಸಾಕಷ್ಟು ಆ್ಯಕ್ಷನ್ಗಳಿಂದ ಕೂಡಿರುವ ರಾಧೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಲನ್ ಪಾತ್ರ ಮಾಡಿದ ಸಂಗಯ್. ರಣದೀಪ್ ಹೂಡಾ ಜತೆ ಇವರು ನಟಿಸಿದ್ದರು. ಸಂಗಯ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರು. ಬಾಡಿ ಬಿಲ್ಡರ್, ಮಿಸ್ಟರ್ ಭೂತಾನ್, ರಿಯಲ್ ಎಸ್ಟೇಟ್ ಉದ್ಯಮಿ ಕೂಡ ಹೌದು. ಈಗ ಬಾಲಿವುಡ್ ಖಳನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.
ಸಂಗಯ್ ಮೂಲತಃ ಭೂತಾನ್ ಅವರು. ಅವರು ರಾಧೆ ಸಿನಿಮಾ ಆಫರ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ. 2019ರಲ್ಲಿ ದಬಾಂಗ್ 3 ಸಿನಿಮಾ ರಿಲೀಸ್ ಟೈಮ್ನಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಸಂಗಯ್ ಭೇಟಿ ಮಾಡಿದ್ದರು.
ನಾನು ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು ಗಂಭೀರವಾಗಿ ಪರಿಗಣಿಸಿದೆ. 2013ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದೆ. ನಂತರ ಬಾಡಿ ಬಿಲ್ಡಿಂಗ್ಗೆ ಸೇರಿಕೊಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ಮಕಾವುದಲ್ಲಿ ನಡೆದ ಏಷಿಯನ್ ಬಾಡಿಬಿಲ್ಡ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದೆ. ಉಜಬೇಕಿಸ್ತಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದೆ. ಇದೇ ರೀತಿಯ ಸಾಕಷ್ಟು ಪದಕ ಗೆದ್ದೆ ಎಂದಿದ್ದಾರೆ.
‘ದಬಾಂಗ್ 3 ಸಿನಿಮಾ ರಿಲೀಸ್ ಸಮಯದಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದೆ. ಎರಡು ತಿಂಗಳ ನಂತರದಲ್ಲಿ ನನಗೆ ಅವರಿಂದ ಕರೆ ಬಂತು ರಾಧೆ ಸಿನಿಮಾದಲ್ಲಿ ನೀವು ವಿಲನ್ ಆಗಿ ನಟಿಸಬಹುದೇ ಎಂದು ಕೇಳಿದರು. ನಾನು ಆಫರ್ ಒಪ್ಪಿಕೊಂಡೆ. ಈ ಮೂಲಕ ಬಾಲಿವುಡ್ಗೆ ಬಂದೆ’ ಎಂದಿದ್ದಾರೆ.
ಇದನ್ನೂ ಓದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್ ಮಾಡೋಕೆ ಮುಂದಾದ ಸಲ್ಲು