Radhe Trailer: ಮೊದಲ ಬಾರಿಗೆ ಹೀರೋಯಿನ್​ ತುಟಿಗೆ ಮುತ್ತಿಟ್ಟ ಸಲ್ಮಾನ್​ ಖಾನ್​; ಅಭಿಮಾನಿಗಳಿಗೆ ಶಾಕ್​

| Updated By: Digi Tech Desk

Updated on: Apr 22, 2021 | 2:36 PM

Radhe Hindi Movie Trailer: ಸಲ್ಮಾನ್​ ಖಾನ್ ಮತ್ತು ದಿಶಾ ಪಠಾಣಿ ನಟನೆಯ ರಾಧೆ ಸಿನಿಮಾ ಟ್ರೇಲರ್​ ಬಿಡುಗಡೆ ಆಗಿದೆ. ಅದರಲ್ಲಿನ ಒಂದು ಶಾಟ್​ ನೋಡಿ ಫ್ಯಾನ್ಸ್​ ಕಣ್ಣರಳಿಸಿದ್ದಾರೆ.

Radhe Trailer: ಮೊದಲ ಬಾರಿಗೆ ಹೀರೋಯಿನ್​ ತುಟಿಗೆ ಮುತ್ತಿಟ್ಟ ಸಲ್ಮಾನ್​ ಖಾನ್​; ಅಭಿಮಾನಿಗಳಿಗೆ ಶಾಕ್​
ದಿಶಾ ಪಠಾಣಿ ಜೊತೆ ಸಲ್ಮಾನ್​ ಖಾನ್​ ಲಿಪ್​ಲಾಕ್​
Follow us on

ಬಾಲಿವುಡ್​ ಸಿನಿಮಾಗಳಲ್ಲಿ ಕಿಸ್ಸಿಂಗ್​ ದೃಶ್ಯಗಳು ತುಂಬಾ ಕಾಮನ್​. ಲಿಪ್​ ಲಾಕ್​ ಮಾಡಲು ಯಾರೂ ಹಿಂಜರಿಯುವುದಿಲ್ಲ. ಇಂಟಿ​ಮೇಟ್​ ದೃಶ್ಯಗಳಲ್ಲಿ ಸಹ-ಕಲಾವಿದರ ತುಟಿಗೆ ಮುತ್ತಿಡುವುದು ದೊಡ್ಡ ವಿಷಯವೇ ಅಲ್ಲ. ಆದರೆ ಅದೇಕೋ ಗೊತ್ತಿಲ್ಲ, ನಟ ಸಲ್ಮಾನ್​ ಖಾನ್​ ಈ ವಿಚಾರದಲ್ಲಿ ಮಡಿವಂತಿಕೆ ಕಾಪಾಡಿಕೊಂಡು ಬಂದಿದ್ದರು. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಹೀರೋಯಿನ್​ಗಳಿಗೆ ಕಿಸ್​ ಮಾಡಲು ಹಿಂಜರಿಯುತ್ತಿದ್ದರು. ಆದರೆ ಈಗ ಅವರೂ ಬದಲಾಗಿದ್ದಾರೆ!

‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾದಲ್ಲಿ ಸಲ್ಮಾನ್ ಖಾನ್​ ಮತ್ತು ದಿಶಾ ಪಠಾಣಿ ಜೊತೆಯಾಗಿ ನಟಿದ್ದಾರೆ. ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲು ಗುರುವಾರ (ಏ.22) ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಲವು ಅಂಶಗಳು ಗಮನ ಸೆಳೆದಿವೆ. ಆದರೆ ಹೆಚ್ಚು ಹೈಲೈಟ್​ ಆಗುತ್ತಿರುವುದು ಒಂದು ಕಿಸ್ಸಿಂಗ್​ ದೃಶ್ಯ! ಹೌದು, ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರು ದಿಶಾ ಪಠಾಣಿ ತುಟಿಗೆ ಮುತ್ತಿಟ್ಟಿದ್ದಾರೆ.

ಟ್ರೇಲರ್​ನಲ್ಲಿ ಕೇವಲ ಒಂದು ಸೆಕೆಂಡ್​ ಕಾಣಿಸಿಕೊಂಡಿರುವ ಈ ಕಿಸ್ಸಿಂಗ್​ ಶಾಟ್​ ನೋಡಿ ಸಲ್ಮಾನ್ ಖಾನ್​ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಿಜಕ್ಕೂ ಸಲ್ಲು ಕಿಸ್​ ಮಾಡಿದ್ದಾರಾ ಎಂದು ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ಆಶ್ಚರ್ಯದ ಪ್ರಶ್ನೆ ಕೇಳುತ್ತಿದ್ದಾರೆ.

‘ಇಷ್ಟು ಖುಷಿ ನನಗೆ ಯಾವತ್ತೂ ಆಗಿರಲಿಲ್ಲ. ಕೊನೆಗೂ ಇಲ್ಲೊಂದು ಚುಂಬನ ಇದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ.

ಇಷ್ಟು ವರ್ಷಗಳ ಕಾಲ ‘ನೋ ಕಿಸ್’​ ನಿಯಮ ಪಾಲಿಸುತ್ತಿದ್ದ ಸಲ್ಮಾನ್​ ಖಾನ್​ ಈಗ ಯಾಕೆ ನಿಯಮ ಸಡಿಲಿಸಿದರು? ನಿಜಕ್ಕೂ ಅವರು ಲಿಪ್​ ಲಾಕ್​ ಮಾಡಿದ್ದಾರಾ? ಸದ್ಯಕ್ಕಂತೂ ಟ್ರೇಲರ್​​ನಲ್ಲಿ ಈ ಶಾಟ್​ ಅಸ್ಪಷ್ಟವಾಗಿದೆ. ಅದರ ಹಿಂದಿನ ಅಸಲಿಯತ್ತು ಏನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿಯಾದರೂ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರರಾಗಿದ್ದಾರೆ.

ಮೇ 13ರಂದು ಈ ಚಿತ್ರ ಓಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಡಿ2ಎಚ್​, ಓಟಿಟಿ ಪ್ಲಾಟ್​ಫಾರ್ಮ್​ ಮುಂತಾದ ವೇದಿಕೆಗಳಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

(ರಾಧೆ ಸಿನಿಮಾ ಟ್ರೇಲರ್​)

ಖಳನಟನಾಗಿ ರಣದೀಪ್​ ಹೂಡಾ ಅವರು ಸಲ್ಮಾನ್​ ಖಾನ್​​ ಎದುರು ಅಬ್ಬರಿಸಲಿದ್ದಾರೆ. ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್​ ಅಭಿನಯಿಸಿದ್ದಾರೆ. ರಾಧೆಗೆ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕಂತ ಚಿತ್ರದ ಟ್ರೇಲರ್​ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: Radhe Trailer: ರಾಧೆ ಟ್ರೇಲರ್ ಮೂಲಕ ಧೂಳೆಬ್ಬಿಸಿದ ಸಲ್ಮಾನ್ ಖಾನ್; ಹೇಗಿದ್ದಾನೆ ಮೋಸ್ಟ್ ವಾಂಟೆಡ್ ಭಾಯ್?

(Radhe Your Most Wanted Bhai Trailer witnesses Salman Khan first onscreen kiss with Disha Patani)

Published On - 2:30 pm, Thu, 22 April 21