ಕನ್ನಡ ಬಿಗ್ ಬಾಸ್ ಸೀಸನ್ 8 ಮೊದಲ ಇನ್ನಿಂಗ್ಸ್ನಲ್ಲಿ ರಘು ಗೌಡ ಅವರು ತುಂಬಾನೇ ವಿಚಿತ್ರವಾಗಿದ್ದರು. ಅಷ್ಟೇ ಅಲ್ಲ, ಅವರು ನಡೆದುಕೊಳ್ಳುತ್ತಿದ್ದ ರೀತಿ ಅವರಿಗೇ ಇಷ್ಟವಾಗುತ್ತಿರಲಿಲ್ಲ. ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ರಘು ಗೌಡ ಸಾಕಷ್ಟು ಜೋಶ್ನೊಂದಿಗೆ ಮನೆ ಒಳಗೆ ಬಂದಿದ್ದಾರೆ. ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಂತೆ.
ಆರಂಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಸೈಲೆಂಟ್ ಆಗಿದ್ದ ವ್ಯಕ್ತಿ ಎಂದರೆ ಅದು ರಘು ಗೌಡ. ತುಂಬಾನೇ ಎಮೋಷನಲ್ ಆಗುತ್ತಿದ್ದ ಅವರು, ಟಾಸ್ಕ್ಗಳಲ್ಲಿ ಹಿಂದೆ ಬಿದ್ದಿದ್ದರು. ನಂತರ ವೇಗ ಪಡೆದುಕೊಂಡಂತೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ಕೊನೆಯ ಅವಧಿಯಲ್ಲಿ ಮತ್ತೆ ಮಂಕಾದರು. ಸಣ್ಣ ವಿಚಾರವನ್ನೂ ದೊಡ್ಡ ಮಟ್ಟದಲ್ಲಿ ಚಿಂತೆ ಮಾಡುತ್ತಿದ್ದರು.
ವೈಷ್ಣವಿ ಹಾಗೂ ರಘು ಒಟ್ಟಿಗೆ ಇರುತ್ತಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೂ ಕೂಡ ರಘು ದೊಡ್ಡ ಮಟ್ಟದಲ್ಲಿ ತಲೆಕೆಡಿಸಿಕೊಂಡಿದ್ದರು. ಆದರೆ, ಈಗ ಈ ಆಲೋಚನೆಗಳನ್ನು ಅವರು ಬದಿಗಿಟ್ಟಿದ್ದಾರೆ.
ಎರಡನೇ ಇನ್ನಿಂಗ್ಸ್ಗಾಗಿ ಬಿಗ್ ಬಾಸ್ ವೇದಿಕೆ ಏರಿದ ರೌಘು, ‘ನಾನು ಅನಾವಶ್ಯಕ ಡೌಟ್ ಪಡೋದಿಲ್ಲ. ಹಳೆಯ ಎಪಿಸೋಡ್ಗಳನ್ನು ನೋಡುವಾಗ ಹೆಂಡತಿ ನನಗೆ ಬೈದಿದ್ದರು. ಸುಮ್ಮನೆ ಅಳ್ತೀಯಲ್ಲ ಎಂದಿದ್ದರು. ಈ ಬಾರಿ ಸ್ಯಾಡ್ ಸಂತೋಷ್ ಆಗೋ ಸೀನ್ ಇಲ್ಲ. ಪಾಸಿಟಿವ್ ಅಂಶಗಳನ್ನು ಮಾತ್ರ ತೆಗೆದುಕೊಂಡು, ಕೆಟ್ಟ ಅಂಶಗಳನ್ನು ಬಿಟ್ಟು ಬಿಡ್ತೀನಿ’ ಎಂದರು.
ಬಿಗ್ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್ 23) ಮರಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.
ಇದನ್ನೂ ಓದಿ: ಕೊವಿಡ್ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್ ಬಾಸ್ ಮನೆಯಲ್ಲಿ ಭಾವುಕ ನುಡಿ
Published On - 9:33 pm, Wed, 23 June 21