ಬಿಗ್ ಬಾಸ್ ಮನೆ ಒಳಗೆ ಬಂದ ನಂತರದಲ್ಲಿ ಎಲ್ಲಾ ಸ್ಪರ್ಧಿಗಳು ಗೆಲ್ಲಬೇಕು ಎಂದು ಕನಸು ಇಟ್ಟುಕೊಂಡಿರುತ್ತಾರೆ. ಇದರ ಜತೆಗೆ ಪ್ರತೀ ಸ್ಪರ್ಧಿಗೆ ಒಂದಲ್ಲಾ ಒಂದು ಆಸೆ ಇದ್ದೇ ಇರುತ್ತದೆ. ದಿವ್ಯಾ ಸುರೇಶ್ಗೆ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇತ್ತು. ಆದರೆ, ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಈಗ ಮನೆಯವರೆಲ್ಲರೂ ಸೇರಿ ರಘು ಗೌಡ ಅವರ ಆಸೆಯನ್ನು ಈಡೇರಿಸಿದ್ದಾರೆ. ಅಷ್ಟಕ್ಕೂ ರಘು ಇಟ್ಟುಕೊಂಡಿದ್ದ ಆಸೆ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬಿಗ್ ಬಾಸ್ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಎನ್ನುವ ಪಟ್ಟವನ್ನು ಪ್ರತಿ ವಾರವೂ ನೀಡಲಾಗುತ್ತದೆ. ಉತ್ತಮ ಎನಿಸಿಕೊಂಡವರಿಗೆ ಪದಕ ಸಿಗುತ್ತದೆ. ಕಳಪೆ ಪಟ್ಟ ಪಡೆದುಕೊಂಡವರು ಕೈದಿಯಂತೆ ಒಂದು ದಿನ ಜೈಲಿನಲ್ಲಿ ಕಳೆಯಬೇಕು. ಪ್ರಶಾಂತ್ ಸಂಬರಗಿ, ಶಮಂತ್ ಸೇರಿ ಅನೇಕರು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಆದರೆ, ರಘು ಗೌಡ ಒಮ್ಮೆಯೂ ಕಳಪೆ ಎನಿಸಿಕೊಂಡಿರಲಿಲ್ಲ.
ಆರಂಭದಲ್ಲಿ ತುಂಬಾನೇ ಸೈಲೆಂಟ್ ಇದ್ದ ರಘು ನಂತರ ಸುದೀಪ್ ಕಿವಿಮಾತು ಹೇಳಿದ ನಂತರದಲ್ಲಿ ಬದಲಾಗಿದ್ದರು. ಮನೆಯಲ್ಲಿ ಸಾಕಷ್ಟು ಆ್ಯಕ್ಟಿವ್ ಇದ್ದಿದ್ದರಿಂದ ಅವರಿಗೆ ಕಳಪೆ ಪಟ್ಟ ಸಿಕ್ಕಿರಲಿಲ್ಲ. ಹೀಗಾಗಿ, ಕೆಲ ವಾರಗಳ ಹಿಂದೆ ಪ್ರತಿಯೊಬ್ಬ ಸ್ಪರ್ಧಿಯ ಬಳಿಯೂ ಹೋಗಿ, ನನಗೆ ಕಳಪೆ ನೀಡಿ. ಜೈಲು ವಾಸ ಹೇಗಿರುತ್ತದೆ ಎಂದು ನೋಡಿಬರಬೇಕು ಎಂದು ಹೇಳಿದ್ದರು. ಅದು ಕೊನೆಯ ವಾರ ಈಡೇರಿದಂತಾಗಿದೆ.
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಒಂದನ್ನು ನೀಡಿದ್ದರು. ನಿಯಮದ ಪ್ರಕಾರ ಟಾಸ್ಕ್ ಮುಗಿದ ಮೇಲೆ ಐಟಮ್ಗಳನ್ನು ಯಾರೂ ಮುಟ್ಟುವಂತಿರಲಿಲ್ಲ. ಈ ಸೂಚನೆ ಗೊತ್ತಿದ್ದೂ ರಘು ಹೋಗಿ ಟಾಸ್ಕ್ ಉಪಕರಣಗಳನ್ನು ಮುಟ್ಟಿದ್ದರು. ಹೀಗಾಗಿ, ಮನೆಯವರಿಗೆ ಟೀ-ಕಾಫಿ ನೀಡುವುದನ್ನು ನಿಲ್ಲಿಸಲಾಗಿತ್ತು. ಎಲ್ಲರೂ ಕಳಪೆ ಪಟ್ಟವನ್ನು ರಘು ಗೌಡ ಅವರಿಗೆ ನೀಡಿದ್ದರಿಂದ ಕೊನೆಯ ವಾರ ಅವರು ಜೈಲಿಗೆ ಹೋದರು. ಈ ಮೂಲಕ ಅವರ ಆಸೆ ಈಡೇರಿದೆ.
ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಇದರ ತಡೆಗೆ ಸರ್ಕಾರ ನಾನಾ ಕ್ರಮ ಕೈಗೊಂಡಿದೆ. ಅದೇ ರೀತಿ ಧಾರಾವಾಹಿ, ಸಿನಿಮಾ ಹಾಗೂ ರಿಯಾಲಿಟಿ ಶೋ ಶೂಟಿಂಗ್ಗೆ ಸರ್ಕಾರ ಬ್ರೇಕ್ ಹಾಕಿದೆ. ಪರಿಣಾಮ ಬಿಗ್ ಬಾಸ್ ಶೋ ಅರ್ಧಕ್ಕೆ ನಿಲ್ಲುತ್ತಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ರದ್ದಾಗಿದ್ದು ಯಾಕೆ? ಟ್ರೋಲ್ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ
Kichcha Sudeep: ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್