ರಘುಗೆ ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡ್ಕೊಂಡಿದ್ದಾನೆ; ನೊಂದ ಮನಸ್ಸಿಗೆ ಮತ್ತೊಂದಷ್ಟು ಘಾಸಿ

ರಘು ಗೌಡ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ತಾಯಿ ಜತೆಯೇ ವಾಸವಾಗಿದ್ದರು. ಆದರೆ, ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಘುಗೆ ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡ್ಕೊಂಡಿದ್ದಾನೆ; ನೊಂದ ಮನಸ್ಸಿಗೆ ಮತ್ತೊಂದಷ್ಟು ಘಾಸಿ
ರಘು ಗೌಡ - ಬಿಗ್​ ಬಾಸ್
Edited By:

Updated on: Apr 03, 2021 | 9:37 PM

ಬಿಗ್​ ಬಾಸ್​ ಮನೆ ಸೇರಿರುವ ರಘು ಗೌಡ ಅವರು ತಮ್ಮ ಜೀವನದಲ್ಲಿ ತುಂಬಾನೇ ನೊಂದಿದ್ದಾರೆ. ಇದನ್ನು ಬಿಗ್​ ಬಾಸ್​ ಮನೆಯಲ್ಲಿ ಅನೇಕರ ಬಾರಿ ಹೇಳಿಕೊಂಡಿದ್ದಾರೆ. ಇದು ಮಾರ್ಕೆಟಿಂಗ್​ ತಂತ್ರ ಎಂದು ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಅಭಿಪ್ರಾಯಪಟ್ಟಿದ್ದಾರೆ.

ರಘು ಗೌಡ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ತಾಯಿ ಜತೆಯೇ ವಾಸವಾಗಿದ್ದರು. ಆದರೆ, ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಅವರಿಗೆ ಆಘಾತ ತಂದಿತ್ತು. ಆರಂಭದಲ್ಲಿ ಈ ವಿಚಾರದ ಬಗ್ಗೆ ರಘು ಹೇಳಿ ಅತ್ತುಕೊಂಡಿದ್ದಾರೆ. ಶುಕ್ರವಾರ (ಮಾರ್ಚ್​ 3) ವೈಷ್ಣವಿಯಲ್ಲಿ ರಘು ತಾಯಿಯನ್ನು ಕಂಡಿದ್ದರು. ಅಷ್ಟೇ ಅಲ್ಲ, ಕೆಲವೇ ಹೊತ್ತಿನಲ್ಲಿ ಗಳಗಳನೆ ಅತ್ತಿದ್ದರು. ಇದೊಂದು ಮಾರ್ಕೆಟಿಂಗ್​ ತಂತ್ರ ಎನ್ನುವ ಮಾತು ಕೇಳಿ ಬಂದಿದೆ.

ಪ್ರಶಾಂತ್ ಹಾಗೂ ಚಂದ್ರಚೂಡ್​ ತಮ್ಮ ತಂಡಕ್ಕೆ ಕೆಲ ಸದಸ್ಯರನ್ನು ಸೇರಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾರ ಯಾವ ಟೀಂ ಎನ್ನುವ ಬಗ್ಗೆ ಚಂದ್ರಚೂಡ್​ಗೆ ಪ್ರಶಾಂತ್ ಲೆಕ್ಕಾಚಾರ ಒಪ್ಪಿಸಿದ್ದಾರೆ. ಆಗ ರಘು ಬಗ್ಗೆ ಚಂದ್ರಚೂಡ್​ ಮಾತನಾಡಿದ್ದಾರೆ.

ರಘು ಒಳ್ಳೆಯ ವ್ಯಕ್ತಿ. ಆದರೆ, ಅವರು ತಮ್ಮ ನೋವು ಹಾಗೂ ದುಃಖವನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. ತಮ್ಮ ನೋವನ್ನು ಮಾರ್ಕೆಟಿಂಗ್​ ತಂತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಹೊರ ಬರಬೇಕಿದೆ ಎಂದು ಚಂದ್ರಚೂಡ್​ ಅಭಿಪ್ರಾಯಪಟ್ಟರು. ಅದೇನೆ ಇರಲಿ, ಆತ ನನ್ನ ಪಾಲಿಗೆ ಒಳ್ಳೆಯ ಹುಡುಗ. ಅವನಿಗೆ ನಮ್ಮ ಟೀಂಗೆ ಬರಬೇಕೆಂದಿದೆ. ಆದರೆ, ಒಮ್ಮೊಮ್ಮೆ ಅವರು ತಮ್ಮ ನಿರ್ಧಾರ ಬದಲಿಸುತ್ತಾರೆ. ಆದರೆ, ಆತ ಎಲ್ಲವನ್ನೂ ನೇರ ನೇರ ಹೇಳ್ತಾರೆ ಎಂದರು.

ಇದನ್ನೂ ಓದಿ: ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

Published On - 9:36 pm, Sat, 3 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us