ಕನ್ನಡ ಬಿಗ್ ಬಾಸ್​ನಿಂದ ಹೊರ ಬಂದ ರಘು ಗೌಡ ಗತಿ ನೋಡಿ ನಕ್ಕ ಶೈನ್​ ಶೆಟ್ಟಿ

ರಘು ಗೌಡ ಹೊಸ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಘು ಮುಖಕ್ಕೆ ಏಟುಗಳು ಬಿದ್ದಿವೆ.

ಕನ್ನಡ ಬಿಗ್ ಬಾಸ್​ನಿಂದ ಹೊರ ಬಂದ ರಘು ಗೌಡ ಗತಿ ನೋಡಿ ನಕ್ಕ ಶೈನ್​ ಶೆಟ್ಟಿ
ವಿದ್ಯಶ್ರೀ ಜತೆ ರಘು ಗೌಡ

Updated on: May 14, 2021 | 7:19 PM

ರಘು ಗೌಡ-ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಒಳ್ಳೆಯ ಗೆಳೆಯರಾಗಿದ್ದರು. ಇದೇ ವಿಚಾರ ಇಟ್ಟುಕೊಂಡು ಕಿಚ್ಚ ಸುದೀಪ್​ ಹಾಗೂ ಕಣ್ಮಣಿ ಕಾಲೆಳೆದಿದ್ದರು. ಬಿಗ್​ ಬಾಸ್​ ಮನೆಯಲ್ಲಿ ರಘು ಕ್ಯಾಪ್ಟನ್​ ಆದಾಗ ಅವರ ಪತ್ನಿ ವಿದ್ಯಶ್ರೀ ವಾಯ್ಸ್​ನೋಟ್ ಬಂದಿತ್ತು. ಈ ವಾಯ್ಸ್​ ನೋಟ್​ನಲ್ಲಿ ರಘುಗೆ ಹಿತವಾದ ಎಚ್ಚರಿಕೆಯೂ ಇತ್ತು. ಹಾಗಾದರೆ, ಬಿಗ್​ ಬಾಸ್​ ಮನೆಯಿಂದ ಹೊರ ಬಂದಮೇಲೆ ರಘು ಗೌಡ ಕಥೆ ಏನಾಯ್ತು? ಈ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

ವೈಷ್ಣವಿ ಜತೆ ಸಲಿಗೆಯಿಂದ ಇರೋದಕ್ಕೆ ರಘುಗೆ ಅವರ ಹೆಂಡತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಮನೆ ಮಂದಿ ಮಾತನಾಡಿಕೊಂಡಿದ್ದರು. ಕೆಲವರು, ರಘು ಅವರನ್ನು ಹೆಂಡತಿ ಮನೆ ಒಳಗೇ ಬಿಟ್ಟುಕೊಳ್ಳುವುದಿಲ್ಲ ಎಂದು ಬಣ್ಣಿಸಿದ್ದರು. ಆದರೆ, ಅದೃಷ್ಟವಶಾತ್​ ಆರೀತಿ ಏನು ಆಗಿಲ್ಲ ಎಂದು ಕಲರ್ಸ್​ ಕನ್ನಡ ವಾಹಿನಿ ಲೈವ್​ನಲ್ಲಿ ರಘು ಹೇಳಿದ್ದರು. ಇದಾದ ಮರುದಿನವೇ ರಘು ಮುಖದ ಶೇಪ್​ ಬದಲಾಗಿದೆ!

ರಘು ಗೌಡ ಹೊಸ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಘು ಮುಖಕ್ಕೆ ಏಟುಗಳು ಬಿದ್ದಿವೆ. ವಿದ್ಯಾಶ್ರೀ ಕೈನಲ್ಲಿ ಸೌಟು ಹಾಗೂ ಲಟ್ಟಣಿಗೆ ಹಿಡಿದು ನಿಂತಿದ್ದಾರೆ. ಇದಕ್ಕೆ ರಘು, ನಾನು ಸೇಫ್​ ಆಗಿದ್ದೇನೆ. ಅವಳು ಎಲ್ಲವನ್ನೂ ಸ್ಪೋರ್ಟಿವ್​ ಆಗಿ ತೆಗೆದುಕೊಂಡಿದ್ದಾಳೆ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನು ನೋಡಿ ಸಾಕಷ್ಟು ಜನರು ಕಮೆಂಟ್​ ಮಾಡಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 7 ವಿನ್ನರ್ ಶೈನ್​ ಶೆಟ್ಟಿ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಇದೇ ರೀತಿ ಗಂಡ-ಹೆಂಡತಿ ಸ್ಪೋರ್ಟಿವ್​ ಆಗಿರಿ’ ಎಂದು ನಕ್ಕಿದ್ದಾರೆ. ‘ವಿದ್ಯಾ ಸ್ಪೋರ್ಟಿವ್​ ಆಗೇ ತಗೊಂಡಿದಾರೆ’ ಎಂದು ನಟಿ, ಬಿಗ್​ ಬಾಸ್​ ಸೀಸನ್​ 8 ಸ್ಪರ್ಧಿ ನಿಧಿ ಸುಬ್ಬಯ್ಯ ಕಮೆಂಟ್​ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಕ್ಯಾಪ್ಟನ್​ ಆಗಿದ್ದರು. ಈ ವೇಳೆ ರಘು ಪತ್ನಿ ಅವರ ವಾಯ್ಸ್​ ಮೆಸೇಜ್​ ಬಂದಿತ್ತು. ‘ಹಾಯ್ ರಘು ಹೇಗಿದ್ದೀಯಾ? ತುಂಬಾ ಚೆನ್ನಾಗಿ ಆಡುತ್ತಾ ಇದೀಯಾ. ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ಖುಷಿ ಆಯ್ತು. ನಿನ್ನ ಜತೆ ಜಗಳ ಆಡೋದನ್ನು ನಾನು ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದನ್ನು ನಾನು ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಮಜಾ ಮಾಡು. ಹಾಯಾಗಿರು. ಬೇರೆಯವರನ್ನು ನಗಿಸು’ ಎಂದು ರಘುಗೆ ಹೇಳಿದ್ದರು. ಇದನ್ನು ರಘು ಕಾಲೆಳೆಯಲು ಮನೆ ಮಂದಿ ಬಳಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada: ಇನ್ನೂ ಮುಗಿದಿಲ್ಲ ಬಿಗ್​ ಬಾಸ್ ಮನರಂಜನೆ; ವೀಕೆಂಡ್​ನಲ್ಲಿ ಪ್ರೇಕ್ಷಕರಿಗಾಗಿ ಕಾದಿದೆ ಸ್ಪೆಷಲ್​ ಎಪಿಸೋಡ್​

Published On - 7:11 pm, Fri, 14 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us