ನಟನ ಮಾಜಿ ಪ್ರಿಯತಮೆ ವಿರುದ್ಧ ನಾಯಕಿ ದೂರು

|

Updated on: Jul 07, 2024 | 8:48 AM

ಟಾಲಿವುಡ್ ನಟ ರಾಜ್ ತರುಣ್ ಮಾಜಿ ಪ್ರೇಯಸಿ ಲಾವಣ್ಯ ವಿರುದ್ಧ ನಟಿ ಮಾಳವಿ ಮಲ್ಹೋತ್ರಾ ಹೈದರಾಬಾದ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಲಾವಣ್ಯಾ ನನ್ನ ಕುಟುಂಬದವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ನನ್ನ ಸಹೋದರನಿಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ನಟನ ಮಾಜಿ ಪ್ರಿಯತಮೆ ವಿರುದ್ಧ ನಾಯಕಿ ದೂರು
Follow us on

ಟಾಲಿವುಡ್ ನಟ ರಾಜ್ ತರುಣ್ ಪ್ರೇಮ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ರಾಜ್ ತರುಣ್​ರ ಮಾಜಿ ಪ್ರೇಯಸಿ ಎಂದು ಹೇಳಿಕೊಂಡಿರುವ ಲಾವಣ್ಯ ಎಂಬುವರು ನಟ ರಾಜ್ ತರುಣ್ ವಿರುದ್ಧ ದೂರು ನೀಡಿದ್ದಾರೆ. ರಾಜ್ ತರುಣ್​ಗೆ ಅವರು ನಟಿಸುತ್ತಿರುವ ಸಿನಿಮಾದ ನಾಯಕ ನಟಿಯೊಂದಿಗೆ ಸಂಬಂಧವಿದ್ದು ಆಕೆಯ ಕಾರಣಕ್ಕೆ ನನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈಗ ರಾಜ್ ತರುಣ್​ರ ಹೊಸ ಸಿನಿಮಾದ ನಾಯಕ ನಟಿ, ರಾಜ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದಾರೆ.

ರಾಜ್ ತರುಣ್ ನಟಿಸುತ್ತಿರುವ ಹೊಸ ಸಿನಿಮಾ ‘ತಿರಗಬಡರಾ ಸಾಮಿ’ ಸಿನಿಮಾನಲ್ಲಿ ಮುಂಬೈ ಮೂಲದ ಮಾಳವಿ ಮಲ್ಹೋತ್ರಾ ನಾಯಕಿಯಾಗಿ ನಟಿಸುತ್ತಿದ್ದು, ಈಗ ಇದೇ ಮಾಳವಿ ಅವರು ರಾಜ್ ತರುಣ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಹೈದರಾಬಾದ್​ ಡಿಸಿಪಿ ಅವರನ್ನು ಭೇಟಿ ಆಗಿರುವ ಮಾಳವಿ ಮಲ್ಹೋತ್ರಾ, ‘ಲಾವಣ್ಯ ತಮ್ಮ ಮಾನಹಾನಿಗೆ ಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಲಾವಣ್ಯ ಮಾಡಿರುವ ಆರೋಪ ಸುಳ್ಳು. ನಾನು ರಾಜ್ ತರುಣ್‌ ಜೊತೆಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಮತ್ತು ನಮ್ಮ ನಡುವೆ ಸ್ನೇಹವನ್ನು ಹೊರತುಪಡಿಸಿ ಯಾವುದೇ ಸಂಬಂಧ ಅಥವಾ ಯಾವುದೇ ರೀತಿಯ ವಿಷಯಗಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಚಿತ್ರಮಂದಿರಗಳ ಬಂದ್ ಬಗ್ಗೆ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್

ದೂರಿನಲ್ಲಿ ಲಾವಣ್ಯ ವಿರುದ್ಧ ಬೆದರಿಕೆ ಆರೋಪವನ್ನೂ ಸಹ ಮಾಳವಿ ಮಾಡಿದ್ದಾರೆ, ‘ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ನನ್ನ ಸಹೋದರನಿಗೂ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾಳೆ. ಲಾವಣ್ಯ ಹೇಗಿದ್ದಾಳೆ ಎಂದು ಸಹ ನನಗೆ ಗೊತ್ತಿಲ್ಲ. ನಾನು ಈ ವರೆಗೆ ಲಾವಣ್ಯಳನ್ನು ನೋಡಿಯೂ ಇಲ್ಲ. ಭೇಟಿ ಸಹ ಆಗಿಲ್ಲ. ಆದರೆ ರಾಜ್ ತರುಣ್, ಲಾವಣ್ಯ ತನ್ನ ಮಾಜಿ ಪ್ರೇಯಸಿ ಆಕೆಯಿಂದ ಎಚ್ಚರಿಕೆಯಿಂದಿರು ಎಂದು ಹೇಳಿದ್ದರು ಹಾಗಾಗಿ ಆಕೆಯ ನಂಬರ್ ಅನ್ನು ನಾನು ಬ್ಲಾಕ್ ಮಾಡಿದ್ದೇನೆ’ ಎಂದಿದ್ದಾರೆ.

‘ರಾಜ್ ತರುಣ್ ಬಳಿ ಸಹ ನನ್ನ ತಂದೆ, ತಾಯಿಯ ಮೊಬೈಲ್ ಸಂಖ್ಯೆ ಇಲ್ಲ. ಆದರೆ ಲಾವಣ್ಯಗೆ ಅದು ಹೇಗೆ ನಂಬರ್ ಸಿಕ್ಕಿತು. ನನ್ನ ಖಾಸಗಿ ಜೀವನದ ಮೇಲೆ ಆಕೆ ನಿಗಾ ಇರಿಸಿದ್ದಾಳೆ. ನನ್ನ ಖಾಸಗಿ ಜೀವನದಲ್ಲಿ ಮೂಗು ತೂರಿಸಿದ್ದಾಳೆ ಅದು ಅಪರಾಧ. ಪೊಲೀಸರು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಲಾವಣ್ಯ ಬಿಡುಗಡೆ ಮಾಡಿರುವ ಆಡಿಯೋನಲ್ಲಿಯೂ ಸಹ ನಾನು ಸ್ಪಷ್ಟಪಡಿಸಿದ್ದೇನೆ ನನಗೂ ರಾಜ್​ಗೂ ಯಾವುದೇ ಸಂಬಂಧವಿಲ್ಲವೆಂದು ಎಂದು ನಟಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ