
ರಾಜಮೌಳಿ-ಮಹೇಶ್ ಬಾಬು (Rajamouli-Mahesh Babu) ಸಿನಿಮಾದ ಬಗ್ಗೆ ವಿಶ್ವ ಸಿನಿಮಾ ಪ್ರೇಮಿಗಳಿಗೆ ನಿರೀಕ್ಷೆ, ಕುತೂಹಲಗಳಿವೆ. ‘ಎಸ್ಎಸ್ಎಂಬಿ29’ ಎಂಬ ತಾತ್ಕಾಲಿಕ ಹೆಸರಿನೊಂದಿಗೆ ಪ್ರಾರಂಭವಾದ ಸಿನಿಮಾಕ್ಕೆ ಆ ನಂತರ ‘ಗ್ಲೋಬ್ ಟ್ರೊಟ್ಟೆರ್’ ಎಂಬ ಮತ್ತೊಂದು ತಾತ್ಕಾಲಿಕ ಹೆಸರನ್ನು ಕೊಡಲಾಯ್ತು. ಆದರೆ ಇಂದು (ನವೆಂಬರ್ 15) ಸಿನಿಮಾದ ಅಧಿಕೃತ ಹೆಸರನ್ನು ಬಿಡುಗಡೆ ಮಾಡಲಾಗಿದೆ. ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾದ ಟೈಟಲ್ ಅನಾವರಣ ಮಾಡಲಾಗಿದ್ದು, ಜೊತೆಗೆ ಸಿನಿಮಾದ ಒಂದು ಸಣ್ಣ ಗ್ಲಿಂಪ್ಸ್ (ವಿಡಿಯೋ ತುಣುಕು) ಸಹ ಹಂಚಿಕೊಳ್ಳಲಾಗಿದೆ.
ರಾಜಮೌಳಿ ಈ ಹಿಂದೆಯೇ ಹೇಳಿದ್ದರು, ಭಾರತದ ಪೌರಾಣಿಕ ಕತೆಗಳನ್ನು ವಿಶ್ವಕ್ಕೆ ತೋರಿಸುವ ಗುರಿ ತಮಗೆ ಇದೆಯೆಂದು. ಅದರಂತೆ ಈಗ ಭಾರತದ ಪೌರಾಣಿಕ ಕತೆಗಳಲ್ಲಿ ವಿಶ್ವದ ಅತ್ಯಂತ ಪುರಾತನ ನಗರ ಎಂದೇ ಹೆಸರಾಗಿರುವ ವಾರಣಾಸಿಯ ಹೆಸರನ್ನು ರಾಜಮೌಳಿ ತಮ್ಮ ಸಿನಿಮಾಕ್ಕೆ ಇರಿಸಿದ್ದಾರೆ. ಆ ಮೂಲಕ ಸಿನಿಮಾದ ಕತೆ ಭಾರತದ ಸನಾತನ ಧರ್ಮ ಮತ್ತು ಪೌರಾಣಿಕ ಕತೆಗಳನ್ನು ಆಧರಿಸಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾಗಲ್ಲ, ರಾಜಮೌಳಿ ಮೊದಲು ಆಫರ್ ಕೊಟ್ಟಿದ್ದು ಐಶ್ವರ್ಯಾಗೆ
ಇಂದಿನ ಕಾರ್ಯಕ್ರದಲ್ಲಿ ಸಿನಿಮಾದ ಒಂದು ಸಣ್ಣ ವಿಡಿಯೋ ತುಣುಕನ್ನು ಸಹ ಬಿಡುಗಡೆ ಮಾಡಲಾಗಿದೆ. ಮಹೇಶ್ ಬಾಬು ಬಲಿಷ್ಠವಾದ ಒಂದು ಎತ್ತಿನ ಮೇಲೆ ಕೂತು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಮುನ್ನುಗ್ಗುತ್ತಿರುವ ವಿಡಿಯೋವನ್ನು ಅನ್ನು ರಾಜಮೌಳಿ ತೋರಿಸಿದ್ದಾರೆ. ಹಿನ್ನೆಲೆಯಲ್ಲಿ ಶ್ರುತಿ ಹಾಸನ್ ಹಾಡಿರುವ ‘ಸಂಚಾರಿ-ಸಂಚಾರಿ’ ಹಾಡು ಕೇಳಿ ಬರುತ್ತಿದೆ. ವಿಡಿಯೋ ನೋಡಿದರೆ ಅದು ಕ್ಲೈಮ್ಯಾಕ್ಸ್ ಫೈಟ್ನ ದೃಶ್ಯದಂತೆ ತೋರುತ್ತಿದೆ.
ರಾಜಮೌಳಿ-ಮಹೇಶ್ ಬಾಬು ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಅವರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ಮಾಧವನ್ ಸಹ ನಟಿಸಿದ್ದಾರೆ. ಜೊತೆಗೆ ಹಾಲಿವುಡ್ನ ಸ್ಟಾರ್ ನಟನೊಬ್ಬರು ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Sat, 15 November 25