
ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಅವರು ಸಿನಿಮಾ ಮಾಡಲು ಒಂದು ಪ್ಯಾಟರ್ನ್ ಇಟ್ಟುಕೊಂಡಿದ್ದಾರೆ. ಅವರು ತಂತ್ರಜ್ಞರನ್ನು ಬದಲಿಸುವುದಿಲ್ಲ. ಅವರು ಕೆಲಸ ಮಾಡಿದವರ ಜೊತೆಗೆ ಕೆಲಸ ಮಾಡುತ್ತಾರೆ. ಇದಕ್ಕೆ ಕಾರಣ ಅವರ ಅಂಡರ್ಸ್ಟ್ಯಾಂಡಿಂಗ್. ಈಗ ಅವರು ಛಾಯಾಗ್ರಹಕ ಸೇಂದಿಲ್ ಕುಮಾರ್ ಅವರನ್ನು ಹೊರಕ್ಕೆ ಇಟ್ಟಿದ್ದಾರೆ. ‘SSMB19’ ಚಿತ್ರದ ಶೂಟಿಂಗ್ನ ಅವರು ಮಾಡುತ್ತಿಲ್ಲ. ‘ಆರ್ಆರ್ಆರ್’ ಹಾಗೂ ‘ಬಾಹುಬಲಿ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು. ಅವರು ಹೊರ ಬಂದ ವಿಚಾರವನ್ನು ಸೇಂದಿಲ್ ಕುಮಾರ್ ಖಚಿತಪಡಿಸಿದರು.
‘ಇದು ರಾಜಮೌಳಿ ಅವರು ತೆಗೆದುಕೊಂಡ ನಿರ್ಧಾರ. ಅವರಿಗೆ ಬೇರೆಯವರನ್ನು ಹುಡುಕಬೇಕಂತೆ. ಭಿನ್ನ ಸಿನಿಮಾಗಳನ್ನು ಭಿನ್ನ ವ್ಯಕ್ತಿಗಳ ಜೊತೆ ಮಾಡಲು ನಿರ್ದೇಶಕರು ಇಷ್ಟಪಡುತ್ತಾರೆ. ಇದೊಂದು ಒಳ್ಳೆಯ ಬ್ರೇಕ್’ ಎಂದು ಸೇಂದಿಲ್ ಅವರು ಹೇಳಿದ್ದಾರೆ. ‘ನಾವು 2003ರಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿಲ್ಲ. ಈ ರೀತಿಯ ಬ್ರೇಕ್ ಈ ಮೊದಲು ಕೂಡ ಸಿಕ್ಕಿದೆ. ನನಗೆ ರಾಜಮೌಳಿ ಅವರ ಮರ್ಯಾದ ರಾಮಣ್ಣ ಹಾಗೂ ವಿಕ್ರಮಾರ್ಕುಡು ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ಆಗ ನಾನು ಬೇರೆ ಪ್ರಾಜೆಕ್ಟ್ ಮಾಡುತ್ತಿದ್ದೆ. ಈ ರೀತಿಯ ಗ್ಯಾಪ್ ಈ ಮೊದಲು ಆಗಿದೆ. ಆದರೆ ಸಂಬಂಧ ಮುಂದುವರಿಯುತ್ತದೆ’ ಎಂದಿದ್ದಾರೆ ಸೇಂದಿಲ್ ಅವರು.
ಇದನ್ನೂ ಓದಿ:ಕೀನ್ಯಾದಲ್ಲಿ ಯಾವುದೂ ಸರಿ ಇಲ್ಲ; ರಾಜಮೌಳಿ-ಮಹೇಶ್ ಬಾಬು ಸಿನಿಮಾ ಶೂಟ್ ಕ್ಯಾನ್ಸಲ್?
SSMB29 ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಹಲವು ವರ್ಷಗಳ ಬಳಿಕ ಭಾರತದ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಇದೊಂದು ಆ್ಯಕ್ಷನ್ ಅಡ್ವೆಂಚರ್ ಡ್ರಾಮಾ ಅನ್ನೋದು ಮಾತ್ರ ತಿಳಿದಿದೆ. ಈ ಚಿತ್ರಕ್ಕೆ ರಾಜಮೌಳಿ ತಂದೆ ಹಾಗೂ ಚಿತ್ರಕಥೆ ಬರಹಗಾರ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.
ಈ ಚಿತ್ರದಿಂದ ಸೇಂದಿಲ್ ಅವರು ಇಲ್ಲ ಎಂಬುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈಗ ಆ ಚರ್ಚೆಗೆ ತೆರೆ ಬಿದ್ದಂತೆ ಆಗಿದೆ. ರಾಜಮೌಳೀ ಕೀನ್ಯಾದಲ್ಲಿ ಸಿನಿಮಾದ ಶೂಟ್ ಮಾಡಬೇಕಿತ್ತು. ಆದರೆ, ಅಲ್ಲಿ ರಾಜಕೀಯ ಸ್ಥಿತಿ ಸರಿ ಇಲ್ಲದ ಕಾರಣ ಸಿನಿಮಾದ ಶೂಟ್ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ. 2026ರಲ್ಲಿ ಸಿನಿಮಾ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ