ಕೀನ್ಯಾದಲ್ಲಿ ಯಾವುದೂ ಸರಿ ಇಲ್ಲ; ರಾಜಮೌಳಿ-ಮಹೇಶ್ ಬಾಬು ಸಿನಿಮಾ ಶೂಟ್ ಕ್ಯಾನ್ಸಲ್?
SS Rajamouli: ರಾಜಮೌಳಿ ನಿರ್ದೇಶನದ SSMB29 ಚಿತ್ರದ ಕೀನ್ಯಾ ಶೂಟಿಂಗ್ ರದ್ದಾಗಿದೆ. ಕೀನ್ಯಾದ ರಾಜಕೀಯ ಅಶಾಂತಿ ಇದಕ್ಕೆ ಕಾರಣ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಅಭಿನಯದ ಈ ಆಕ್ಷನ್ ಅಡ್ವೆಂಚರ್ ಚಿತ್ರದ ಚಿತ್ರೀಕರಣಕ್ಕೆ ಪರ್ಯಾಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. 2026ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ರಾಜಮೌಳಿ, ಪ್ರಿಯಾಂಕಾ ಚೋಪ್ರಾ ಹಾಗೂ ಮಹೇಶ್ (Mahesh Babu) ನಾನು ‘SSMB29’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಮುಂದಿನ ತಿಂಗಳು ಇವರು ಆಫ್ರಿಕಾದ ಕೀನ್ಯಾಗೆ ತೆರಳಿ ಶೂಟ್ ಮಾಡಬೇಕಿತ್ತು. ಆದರೆ, ಈಗ ಶೂಟ್ ಕ್ಯಾನ್ಸಲ್ ಆಗುವ ಸೂಚನೆ ಸಿಕ್ಕಿದೆ. ಸದ್ಯದ ಮಟ್ಟಿಗೆ ಪ್ಲ್ಯಾನ್ ಬದಲಾಯಿಸಿಕೊಳ್ಳಲು ತಂಡದವರು ಚಿಂತಿಸಿದ್ದಾರೆ ಎಂದು ವರದಿ ಆಗಿದೆ. ಇದಕ್ಕೆ ಕಾರಣ ಕೀನ್ಯಾದ ರಾಜಕೀಯ ಪರಿಸ್ಥಿತಿ.
ರಾಜಮೌಳಿ ಅವರು ಜುಲೈ ವೇಳೆಗೆ ಕೀನ್ಯಾಗೆ ತೆರಳಿ ಪ್ರಮುಖ ದೃಶ್ಯಗಳ ಶೂಟ್ ಮಾಡಲು ಯೋಜಿಸಿದ್ದರು. ಆಫ್ರಿಕಾದ ದಟ್ಟಾರಣ್ಯದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡುವ ಆಲೋಚನೆ ಇತ್ತು. ಆದರೆ, ಕೀನ್ಯಾದಲ್ಲಿ ರಾಜಕೀಯ ತಿಕ್ಕಾಟ ನಡೆಯುತ್ತಿದ್ದು, ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ, ಇಲ್ಲಿ ಶೂಟ್ ಮಾಡೋದು ಅನುಮಾನ ಎನ್ನಲಾಗುತ್ತಿದೆ.
ಪ್ಲ್ಯಾನ್ ಬಿ
ರಾಜಮೌಳಿ ಅವರು ಯಾವಾಗಲೂ ಹೆಚ್ಚು ಆಲೋಚಿಸುತ್ತಾರೆ. ಅವರ ಬಳಿ ಹಲವು ಪ್ಲ್ಯಾನ್ಗಳು ರೆಡಿ ಇರುತ್ತವೆ. ಈಗ ಪ್ಲ್ಯಾನ್ ಎ ಕೈ ಕೊಡುವ ಸೂಚನೆ ಇದೆ. ಹೀಗಿರುವಾಗ ಪ್ಲ್ಯಾನ್ ಬಿ ಬಗ್ಗೆ ಅವರು ಆಲೋಚಿಸುವ ಸಾಧ್ಯತೆ ಇದೆ. ಇದೇ ಶೂಟ್ನ ಬೇರೆ ಎಲ್ಲಾದರೂ ಪ್ಲ್ಯಾನ್ ಮಾಡಬಹುದು ಅಥವಾ ಈಗ ಬೇರೆ ದೃಶ್ಯಗಳ ಶೂಟ್ ನಡೆಸಿ ಆ ಬಳಿಕ ಕೀನ್ಯಾಗೆ ತೆರಳಬಹುದು ಎನ್ನಲಾಗುತ್ತಿದೆ.
ಮಹೇಶ್ ಬಾಬು ಅವರು ಇದೇ ಮೊದಲ ಬಾರಿಗೆ ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಇದು ಆ್ಯಕ್ಷನ್ ಅಡ್ವೆಂಚರ್ ಡ್ರಾಮಾ ಆಗಿರಲಿದೆ.
ಇದನ್ನೂ ಓದಿ: ರಾಜಮೌಳಿ ಕುಟುಂಬದಲ್ಲಿ ಶೋಕ, ಕೀರವಾಣಿ ತಂದೆ ಶಿವಶಕ್ತಿ ದತ್ತ ನಿಧನ
ರಾಜಮೌಳಿ ಜೊತೆ ಸಿನಿಮಾ ಮಾಡಬೇಕು ಎಂದರೆ ಒಂದಷ್ಟು ವರ್ಷ ಸಮಯವನ್ನು ಮೀಸಲು ಇಡಲು ರೆಡಿ ಇರಬೇಕು. ಈಗ ಮಹೇಶ್ ಬಾಬು ಕೂಡ ಅದೇ ಬದ್ಧತೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2026ರ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:39 pm, Wed, 9 July 25








