AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ ವೈರಲ್

ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಅವರ ನಡುವಿನ ಪ್ರೇಮ ಸಂಬಂಧವು ಇತ್ತೀಚೆಗೆ ವೈರಲ್ ಆಗಿರುವ ಫೋಟೋಗಳಿಂದ ಖಚಿತವಾಗಿದೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು, ಹತ್ತಿರದಿಂದ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇದು ಅವರ ಸಂಬಂಧವನ್ನು ಸ್ಪಷ್ಟಪಡಿಸಿದೆ. ಆದರೂ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.

ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ ವೈರಲ್
ಸಮಂತಾ
ರಾಜೇಶ್ ದುಗ್ಗುಮನೆ
|

Updated on: Jul 09, 2025 | 6:58 AM

Share

ನಟಿ ಸಮಂತಾ (Samantha)  ಹಾಗೂ ನಿರ್ದೇಶಕ ರಾಜ್ ನಿಧಿಮೋರು ಮಧ್ಯೆ ಪ್ರೀತಿ ಮೂಡಿದೆ ಎಂಬ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಇದನ್ನು ಅವರು ಇಷ್ಟು ದಿನ ಖಚಿತಪಡಿಸಿರಲಿಲ್ಲ. ಆದರೆ, ಈಗ ಇವರು ಇದನ್ನು ಬಹುತೇಕ ಒಪ್ಪಿಕೊಂಡಿದ್ದಾರೆ. ಸಮಂತಾ ಹೆಗಲಮೇಲೆ ಕೈ ಹಾಕಿ ರಾಜ್ ಬರುತ್ತಿದ್ದರೆ, ಅವರನ್ನು ಸಮಂತಾ ತಮ್ಮ ಕೈ ಮೂಲಕ ಹಿಡಿದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಅಮೆರಿಕದ ಮಿಚಿಗನ್​ನ ಡೆಟ್ರಾಯ್ಟ್​ನಲ್ಲಿರುವ ತೆಲುಗು ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಂತಾ, ರಾಜ್ ಹಾಗೂ ಇತರರು ತೆರಳಿದ್ದಾರೆ. ಈ ವೇಳೆ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಸಮಂತಾ ಅವರು ಹಂಚಿಕೊಂಡಿದ್ದಾರೆ. ಹಲವು ಕಡೆಗಳಲ್ಲಿ ನೀವು ರಾಜ್ ನಿಧಿಮೋರು ಅವರನ್ನು ಕಾಣಬಹುದು. ಇದರಿಂದ ಇವರ ಸಂಬಂಧ ಬಹುತೇಕ ಖಚಿತವಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ
Image
PHOTOS: ನಟ ವಿಷ್ಣು ವಿಶಾಲ್-ಜ್ವಾಲಾ ದಂಪತಿ ಮಗಳಿಗೆ ಹೆಸರಿಟ್ಟ ಆಮಿರ್
Image
ರಿಲೀಸ್​ಗೆ ಒಂದು ತಿಂಗಳಿರುವಾಗ ಶೂಟ್ ಮುಗಿಸಿದ ‘ವಾರ್ 2’

ಸಮಂತಾ ಹಾಗೂ ರಾಜ್ ಮೊದಲ ಬಾರಿಗೆ ಭೇಟಿ ಆಗಿದ್ದು, ‘ದಿ ಫ್ಯಾಮಿಲಿ ಮ್ಯಾನ್ 2’ ಶೂಟ್ ವೇಳೆ. ಆ ಬಳಿಕ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈಗಾಗಲೇ ರಾಜ್​​ಗೆ ವಿವಾಹ ಆಗಿದೆ. ಪತ್ನಿ ಜೊತೆ ಅವರು ಇನ್ನೂ ವಿಚ್ಛೇದನ ಕೂಡ ಪಡೆದಿಲ್ಲ. ಆದಾಗ್ಯೂ ಅವರು ಸಮಂತಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಮದುವೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: ಸಮಂತಾ ಅವರನ್ನು ರೆಡಿ ಮಾಡಲು ಒಂದೀಡಿ ತಂಡವೇ ಬೇಕು, ವಿಡಿಯೋ ನೋಡಿ

ಸಮಂತಾ ಮೊದಲ ಪತಿ ನಾಗ ಚೈತನ್ಯ ಅವರು ಜೀವನದಲ್ಲಿ ಮುಂದೆ ಸಾಗಿಯಾಗಿದೆ. ಅವರು ನಟಿ ಶೋಭಿತಾ ಅವರನ್ನು ವಿವಾಹ ಆಗಿದ್ದಾರೆ. ಸಮಂತಾ ಕೂಡ ಈಗ ಬೇರೆ ಜೀವನವನ್ನು ಕಟ್ಟಿಕೊಳ್ಳುವುದರಲ್ಲಿ ಇದ್ದಾರೆ. ಹೋದಲ್ಲಿ ಬಂದಲ್ಲಿ ರಾಜ್ ಜೊತೆ ಸುತ್ತಾಡುತ್ತಿದ್ದು, ರಾಜಾರೋಶವಾಗಿ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈ ಫೋಟೋ ನೋಡಿದ ಫ್ಯಾನ್ಸ್, ‘ಸಮಂತಾ ಎಲ್ಲವನ್ನೂ ಖಚಿತಪಡಿಸಿಯಾಗಿದೆ. ಹೇಳೋಕೆ ಇನ್ನೇನು ಇದೆ. ಇಷ್ಟು ಆಪ್ತವಾಗಿದ್ದರೆ ಲವರ್ ಅಲ್ಲದೆ ಇನ್ನೇನು’ ಎಂದು ಪ್ರಶ್ನೆ ಮಾಡಿದ್ದಾರೆ. ಸಮಂತಾ ಅವರು ಈ ಬಗ್ಗೆ ಇನ್ನೂ ಮೌನ ಮುರಿದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!