ಉಲ್ಟಾಪಲ್ಟಾ ಆಯ್ತು ರಾಜಮೌಳಿ ಲೆಕ್ಕಾಚಾರ; ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ

ಅಕ್ಟೋಬರ್​ 13ರಂದು ಚಿತ್ರ ತೆರೆಗೆ ತರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಖತ್​ ಖುಷಿಯಾಗಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್ ಒಂದು ಸಿಕ್ಕಿದೆ.

ಉಲ್ಟಾಪಲ್ಟಾ ಆಯ್ತು ರಾಜಮೌಳಿ ಲೆಕ್ಕಾಚಾರ; ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ
ರಾಜಮೌಳಿ
Edited By:

Updated on: Apr 30, 2021 | 10:31 AM

ಕೊರೊನಾ ವೈರಸ್ ಎರಡನೇ ಅಲೆ​ಗೆ ಭಾರತದ ಚಿತ್ರರಂಗ ಮತ್ತೆ ತತ್ತರಿಸಿದೆ. ಅನೇಕ ಹೀರೋಗಳಿಗೆ ಕೊರೊನಾ ಪಾಸಿಟಿವ್​ ಆಗಿದ್ದು ಮಾತ್ರವಲ್ಲ, ಚಿತ್ರದ ಶೂಟಿಂಗ್​ ಕೂಡ ನಿಂತಿದೆ. ಇದರಿಂದ ಸಹಜವಾಗಿಯೇ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿದೆ. ಕೊರೊನಾ ಕಾರಣದಿಂದ ಕೆಜಿಎಫ್​-2 ರಿಲೀಸ್​ ತಡವಾಗಲಿದೆ ಎನ್ನಲಾಗುತ್ತಿದೆ. ಈಗ ಎಸ್​.ಎಸ್​. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರದ ಸರದಿ.

ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್​ 13ರಂದು ಚಿತ್ರ ತೆರೆಗೆ ತರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಖತ್​ ಖುಷಿಯಾಗಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್ ಒಂದು ಸಿಕ್ಕಿದೆ. ಆರ್​ಆರ್​ಆರ್​ ಸಿನಿಮಾ ರಿಲೀಸ್​ ದಿನಾಂಕ 2022ಕ್ಕೆ ಮುಂದೂಡಲ್ಪಟ್ಟಿದೆಯಂತೆ.

ಮೊದಲಿನ ಲೆಕ್ಕಾಚಾರದಂತೆ ನಡೆದಿದ್ದರೆ ಆರ್​ಆರ್​ಆರ್​ ಚಿತ್ರತಂಡ ಈಗಾಗಲೇ ಶೂಟಿಂಗ್​ ಪೂರ್ಣ ಮಾಡಿರುತ್ತಿತ್ತು. ಆದರೆ, ಆಲಿಯಾ ಭಟ್​ಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಇನ್ನು, ರಾಮ್​​ ಚರಣ್​ ಮನೆಯ ಸಿಬ್ಬಂದಿಗೆ ಕೊವಿಡ್​ ತಗುಲಿತ್ತು. ಹೀಗಾಗಿ, ರಾಮ್​ ಚರಣ್​ ಹೋಂ ಕ್ವಾರಂಟೈನ್​ ಆಗುವ ಪರಿಸ್ಥಿತಿ ಬಂದೊದಗಿತ್ತು. ಇದರ ಜತೆ ಜತೆಗೆ ಎರಡನೇ ಅಲೆ ಅಬ್ಬರ ಜೋರಾಗಿದೆ. ಹೀಗಾಗಿ, ಸಿನಿಮಾ ಶೂಟಿಂಗ್​ ನಿಲ್ಲಿಸಲಾಗಿದೆ. ಇದರಿಂದ ರಾಜಮೌಳಿ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

ತಜ್ಞರ ಪ್ರಕಾರ ಮೇ ತಿಂಗಳಲ್ಲಿ ಕೊರೊನಾ ಮಿತಿಮೀರಿ ಏರಿಕೆ ಕಾಣಲಿದ್ದು, ಮೇ ಅಂತ್ಯಕ್ಕೆ ಅಬ್ಬರ ಕೊಂಚ ಕಡಿಮೆ ಆಗಲಿದೆಯಂತೆ. ಕೊರೊನಾ ಹರಡುತ್ತಿರುವ ವೇಗ ನೋಡಿದರೆ, ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಒಂದೊಮ್ಮೆ ಜೂನ್​, ಜುಲೈ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳು ಮತ್ತೆ ತೆರೆದುಕೊಂಡರೂ ಜನರು ಒಮ್ಮೆಲೇ ಸಿನಿಮಾ ನೋಡೋಕೆ ಆಸಕ್ತಿ ತೋರುವುದು ಅನುಮಾನವೇ. ಇದರ ಜತೆಗೆ ಆರ್​ಆರ್​ಆರ್​ ಚಿತ್ರದ ಸಾಕಷ್ಟು ಶೂಟಿಂಗ್​ ಬಾಕಿ ಇವೆ. ಹೀಗಾಗಿ ಸಿನಿಮಾ ರಿಲೀಸ್​ ದಿನಾಂಕ ವಿಳಂಬವಾಗುತ್ತಿದೆ.

ಆರ್​ಆರ್​ಆರ್​​ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. 2015ರಲ್ಲಿ ಬಾಹುಬಲಿ ಸಿನಿಮಾ ತೆರೆಕಂಡಿತ್ತು. ಇದಾದ ಎರಡೇ ವರ್ಷಕ್ಕೆ ಬಾಹುಬಲಿ 2 ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ತೆರೆಕಂಡು ನಾಲ್ಕು ವರ್ಷಗಳೇ ಕಳೆದಿವೆ. ಈಗ ರಾಜಮೌಳಿ ಅವರ ಮುಂದಿನ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ, ಪದೇಪದೇ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟಾಗುತ್ತಿದೆ.

ಇದನ್ನೂ ಓದಿ: KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us