
‘ವಾರಣಾಸಿ’ ವಿಶ್ವದಾದ್ಯಂತ ಸಿನಿಮಾ ಅಭಿಮಾನಿಗಳು ನಿರೀಕ್ಷಿಸುತ್ತಿರುವ ಭಾರತೀಯ ಸಿನಿಮಾ. ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಫೃಥ್ವಿರಾಜ್ ಸುಕುಮಾರನ್ ನಟನೆ ಮಾಡಿರುವ ‘ವಾರಣಾಸಿ’ ವಿಶ್ವದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಇದೊಂದು ಭಾರಿ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ರಾಜಮೌಳಿ ಈಗಾಗಲೇ ಮುಗಿಸಿದ್ದಾರೆ. ಸಿನಿಮಾದ ಕತೆ ಹಲವು ದೇಶಗಳಲ್ಲಿ, ಪ್ರದೇಶಗಳಲ್ಲಿ ಮತ್ತು ಬೇರೆ ಬೇರೆ ಸಮಯಗಳಲ್ಲಿ ನಡೆಯುವ ಕತೆ ಹೊಂದಿರಲಿದೆ. ಅಸಲಿಗೆ ಈ ಒಂದು ಸಿನಿಮಾದ ಒಳಗೆ ಹಲವು ಸಿನಿಮಾಗಳು ಅಡಗಿವೆ ಎಂದು ರಾಜಮೌಳಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಇಂಗ್ಲೀಷ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಾಜಮೌಳಿ, ‘ವಾರಣಾಸಿ’ ಸಿನಿಮಾನಲ್ಲಿ ಹಲವು ಬೇರೆ ಬೇರೆ ಸನ್ನಿವೇಶಗಳಿವೆ. ಆ ಸನ್ನಿವೇಶಗಳು ಒಂದು ಪರಿಪೂರ್ಣ ಸಿನಿಮಾ ರೀತಿಯೇ ಇವೆ. ಅಂಟಾರ್ಟಿಕಾ, ಆಫ್ರಿಕಾ, ವಾರಣಾಸಿ, ಫ್ರಾನ್ಸ್ ಇನ್ನೂ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಿದ್ದು, ಪ್ರತಿ ಸನ್ನಿವೇಶಗಳು ಒಂದು ಪರಿಪೂರ್ಣ ಸಿನಿಮಾ ರೀತಿಯಾಗಿಯೇ ಇವೆ. ಆದರೆ ಆ ಎಲ್ಲ ಸನ್ನಿವೇಶಗಳು ಒಂದು ಮುಖ್ಯ ಕತೆಗೆ ಲಿಂಕ್ ಆಗಿವೆ’ ಎಂದಿದ್ದಾರೆ. ಸಿನಿಮಾನಲ್ಲಿ ಟೈಂ ಟ್ರಾವೆಲ್ ರೀತಿಯ ಕತೆಯೂ ಇದ್ದು, ಅದೂ ಸಹ ಒಂದು ಪರಿಪೂರ್ಣ ಸಿನಿಮಾ ಮಾದರಿಯ ರೀತಿಯೇ ಇದೆಯಂತೆ. ಪ್ರತಿ ಸನ್ನಿವೇಶಕ್ಕೆ ಆರಂಭ ಮತ್ತು ಕ್ಲೈಮ್ಯಾಕ್ಸ್ಗಳು ಇವೆಯಂತೆ ಹಾಗಾಗಿ ವೀಕ್ಷಕರು ಒಂದು ಸಿನಿಮಾದ ಒಳಗೆ ಹಲವು ಸಿನಿಮಾಗಳನ್ನು ನೋಡಿದ ಅನುಭವ ಪಡೆಯಲಿದ್ದಾರೆ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾದ ಪ್ರಚಾರ ಹೇಗಿರಲಿದೆ? ಮೀಸಲಿಟ್ಟಿರುವ ಬಜೆಟ್ ಎಷ್ಟು?
ರಾಜಮೌಳಿ ಅವರು ಈ ಹಿಂದೆ ಹೇಳಿದ್ದಂತೆ ಇದೊಂದು ಟೈ ಟ್ರಾವೆಲ್ ಜೊತೆಗೆ ಟ್ರಾವೆಲ್ ಅಡ್ವೇಂಚರ್ ಕತೆಯನ್ನು ಸಹ ಹೊಂದಿದೆ. ನಾಯಕ ಒಂದು ಗುರಿಯ ಸಾಧನೆಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿ ಸಾಹಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’, ‘ನ್ಯಾಷನಲ್ ಟ್ರೆಷರ್’ ಸಿನಿಮಾಗಳಿಂದ ಸ್ಪೂರ್ತಿ ಪಡೆದು ತಾವು ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಖುದ್ದು ರಾಜಮೌಳಿ ಬಹಳ ಹಿಂದೆ ಹೇಳಿಕೊಂಡಿದ್ದರು.
ಕೆಲ ಊಹೆಗಳ ಪ್ರಕಾರ ‘ವಾರಣಾಸಿ’ ಸಿನಿಮಾವು ಶ್ರೀರಾಮ ಮತ್ತು ಕುಂಭಕರ್ಣನ ನಡುವಿನ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಶ್ರೀರಾಮನ ವಂಶಸ್ಥನ ಪಾತ್ರದಲ್ಲಿ ನಟಿಸಿದ್ದರೆ ಪೃಥ್ವಿರಾಜ್ ಸುಕುಮಾರನ್ ಅವರು ಕುಂಭಕರ್ಣನ ವಂಶಸ್ಥನ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ