AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಬೇಗ ರಿಲೀಸ್ ಮಾಡಲು ಹೊಸ ತಂತ್ರದ ಮೊರೆ ಹೋದ ರಾಜಮೌಳಿ

ಕೆಲವು ವರದಿಗಳ ಪ್ರಕಾರ ಸದ್ಯ ಈ ಚಿತ್ರಕ್ಕೆ ವರ್ಕ್​​ಶಾಪ್ ನಡೆಯುತ್ತಿದೆ. ರಾಜಮೌಳಿ ಅವರು ಸಿನಿಮಾದ ಪಾತ್ರವರ್ಗವನ್ನು ಬಹುತೇಕ ಫೈನಲ್ ಮಾಡಿದ್ದಾರೆ. ರಾಜಮೌಳಿ ಅವರು ಈ ಬಾರಿ ವಿಎಫ್​​ಎಕ್ಸ್​ಗೆ ಸಂಬಂಧಿಸಿದ ದೃಶ್ಯಗಳನ್ನು ಮೊದಲು ಶೂಟ್ ಮಾಡಲು ನಿರ್ಧರಿಸಿದ್ದಾರೆ.

ಸಿನಿಮಾ ಬೇಗ ರಿಲೀಸ್ ಮಾಡಲು ಹೊಸ ತಂತ್ರದ ಮೊರೆ ಹೋದ ರಾಜಮೌಳಿ
ಮಹೇಶ್​ ಬಾಬು-ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on: Sep 20, 2024 | 12:01 PM

Share

ಮಹೇಶ್ ಬಾಬು ಹಾಗೂ ಎಸ್​ಎಸ್ ರಾಜಮೌಳಿ ಸಿನಿಮಾ ಅಧಿಕೃತ ಮಾಡಿ ಬಹಳ ಸಮಯ ಕಳೆದಿದೆ. ಆದರೆ, ಈವರೆಗೆ ಸಿನಿಮಾ ಕಡೆಯಿಂದ ಯಾವುದೇ ಅಪ್​ಡೇಟ್ ಕೊಟ್ಟಿಲ್ಲ. ರಾಜಮೌಳಿ ಎಂದರೆ ಪರ್ಫೆಕ್ಷನಿಸ್ಟ್. ಏನೇ ಕೆಲಸ ಆರಂಭಿಸಿದರೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಪ್ರತಿ ಸಿನಿಮಾಗೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಈಗಾಗಲೇ ಅವರು ಚಿತ್ರಕ್ಕಾಗಿ ಎರಡು ವರ್ಷ ಮೀಸಲಿಟ್ಟಿದ್ದಾರೆ. ಈಗ ಅವರು ಸಿನಿಮಾನ ಬೇಗ ರಿಲೀಸ್ ಮಾಡಲು ಹೊಸ ತಂತ್ರ ಒಂದನ್ನು ಉಪಯೋಗಿಸಿದ್ದಾರೆ.

ಕೆಲವು ವರದಿಗಳ ಪ್ರಕಾರ ಸದ್ಯ ಈ ಚಿತ್ರಕ್ಕೆ ವರ್ಕ್​​ಶಾಪ್ ನಡೆಯುತ್ತಿದೆ. ರಾಜಮೌಳಿ ಅವರು ಸಿನಿಮಾದ ಪಾತ್ರವರ್ಗವನ್ನು ಬಹುತೇಕ ಫೈನಲ್ ಮಾಡಿದ್ದಾರೆ. ರಾಜಮೌಳಿ ಅವರು ಈ ಬಾರಿ ವಿಎಫ್​​ಎಕ್ಸ್​ಗೆ ಸಂಬಂಧಿಸಿದ ದೃಶ್ಯಗಳನ್ನು ಮೊದಲು ಶೂಟ್ ಮಾಡಲು ನಿರ್ಧರಿಸಿದ್ದಾರೆ. ಆ ಬಳಿಕ ಉಳಿದ ದೃಶ್ಯಗಳ ಶೂಟ್ ನಡೆಯಲಿದೆ.

ರಾಜಮೌಳಿ- ಮಹೇಶ್ ಬಾಬು ಸಿನಿಮಾ ಅಡ್ವೆಂಚರ್ ಡ್ರಾಮಾ ಶೈಲಿಯಲ್ಲಿ ಮೂಡಿ ಬರುತ್ತಿದೆ. ಇದರಲ್ಲಿ ವಿಎಫ್​ಎಕ್ಸ್ ಕೆಲಸ ಹೆಚ್ಚಿರಲಿದೆ. ಈ ಕಾರಣಕ್ಕೆ ರಾಜಮೌಳಿ ಹಾಲಿವುಡ್ ಸ್ಟುಡಿಯೋಗಳ ಜೊತೆ ಕೈ ಜೋಡಿಸಿದ್ದಾರೆ. ಅವರು ವಿಎಫ್​ಎಕ್ಸ್​​ ಕೆಲಸಗಳಿರುವ ದೃಶ್ಯಗಳನ್ನು ಮೊದಲು ಶೂಟ್ ಮಾಡಿ ಪೋಸ್ಟ್ ಪ್ರೊಡಕ್ಷನ್​ಗೆ ಚಾಲನೆ ನೀಡಲಿದ್ದಾರೆ. ಇದರಿಂದ ವಿಎಫ್​ಎಕ್ಸ್ ಕೆಲಸಗಳನ್ನು ಬೇಗ ಆರಂಭಿಸಲು ಸಹಕಾರಿ ಆಗಲಿದೆ. ಇದರಿಂದ ಸಿನಿಮಾದ ಕೆಲಸಗಳು ಕೂಡ ಬೇಗ ಪೂರ್ಣಗೊಳ್ಳಲಿವೆ.

ಶೀಘ್ರವೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಕೇವಲ ತೆಲುಗು ಮಾತ್ರವಲ್ಲದೆ ಪರಭಾಷೆಯಿಂದಲೂ ಕಲಾವಿದರನ್ನು ಕರೆತರುವ ಕೆಲಸ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಇದನ್ನೂ ಓದಿ: ಮಹೇಶ್ ಬಾಬು ಮಗಳು ಸಿತಾರಾ ಶಾಪಿಂಗ್ ಮಾಡೋದೆಲ್ಲಿ ಗೊತ್ತಾ?

ಮಹೇಶ್ ಬಾಬು ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಗುಂಟೂರು ಖಾರಂ’ ಚಿತ್ರದಲ್ಲಿ. ಈ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ಸಾಧಿಸಿಲ್ಲ. ಇದಾದ ಬಳಿಕ ಅವರು ಒಪ್ಪಿಕೊಂಡಿದ್ದು ರಾಜಮೌಳಿ ಚಿತ್ರ. ಈ ಸಿನಿಮಾ ಪೂರ್ಣಗೊಳ್ಳುವವರೆಗೆ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ರಾಜಮೌಳಿ ಅವರು ‘ಆರ್​ಆರ್​ಆರ್’ ಸಿನಿಮಾ ಬಳಿಕ ಒಪ್ಪಿಕೊಂಡ ಚಿತ್ರ ಇದು. ಅವರು ಸಂಪೂರ್ಣ ಸಮಯವನ್ನು ಸ್ಕ್ರಿಪ್ಟ್ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ