ಬಿಗ್ ಬಾಸ್ ಮನೆಯಲ್ಲಿ ರಾಜೀವ್ ಬೆಳಗ್ಗೆ ಬೇಗ ಏಳುತ್ತಾರೆ. ಅಷ್ಟೇ ಅಲ್ಲ, ಫಿಟ್ನೆಸ್ಗೆ ಅವರು ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಬೆಳಗೆದ್ದು ಡಂಬೆಲ್ಸ್ ಎತ್ತುತ್ತಾರೆ. ಬಿಗ್ ಬಾಸ್ ಮನೆಯಲ್ಲೇ ಸಣ್ಣ ಜಿಮ್ ಓಪನ್ ಮಾಡಿಕೊಂಡಿದ್ದಾರೆ. ಹೀಗಿರುವಾಗಲೇ ಅವರ ವಿರುದ್ಧ ಒಂದು ದೊಡ್ಡ ಆರೋಪ ಒಂದು ಕೇಳಿ ಬಂದಿದೆ! ಬಿಗ್ ಬಾಸ್ ಮನೆಯಲ್ಲಿ ರಾಜೀವ್ ಬಾಡಿ ತೋರಿಸಿಕೊಂಡು ಓಡಾಡುತ್ತಾರಂತೆ.
ಬಿಗ್ ಬಾಸ್ನಲ್ಲಿ ವೀಕೆಂಡ್ ವೇಳೆ ಒಂದು ಚರ್ಚೆ ನಡೆದಿತ್ತು. ರಾಜೀವ್ ಶೋ ಆಫ್ ಮಾಡೋಕೆ ಶರ್ಟ್ಲೆಸ್ ಆಗಿ ಓಡಾಡುತ್ತಾರೆ ಎಂದು ಮನೆ ಮಂದಿಯೆಲ್ಲ ಆರೋಪ ಮಾಡಿದರು. ಇದನ್ನು ರಾಜೀವ್ ಮಾತ್ರ ಒಪ್ಪಿಕೊಂಡಿಲ್ಲ! ಆದರೆ, ಮನೆ ಮಂದಿಯೆಲ್ಲ ಹೌದು ಎಂದರು!
ಮೊನ್ನೆ ಟಾಸ್ಕ್ ನಡೆಯುತ್ತಿತ್ತು. ಈ ವೇಳೆ ರಾಜೀವ್ ಶರ್ಟ್ ತೆಗೆದು ಸ್ಲೀವ್ಲೆಸ್ ಡ್ರೆಸ್ ಹಾಕಿಕೊಂಡು ಬಂದಿದ್ದರು. ಇವರೇಕೆ ಡ್ರೆಸ್ ಬದಲಾಯಿಸಿಕೊಂಡು ಬಂದರು ಎಂಬುದು ನಂಗೆ ಗೊತ್ತಾಗಿಲ್ಲ. ಆಮೇಲೆ ಗೊತ್ತಾಗಿದ್ದು ಅವರಿಗೆ ಬೈಸೆಪ್ಸ್ ತೋರಿಸಬೇಕು ಎಂದಿತ್ತು! ಈ ಕಾರಣಕ್ಕೆ ಅವರು ಡ್ರೆಸ್ ಬದಲಾಯಿಸಿಕೊಂಡು ಬಂದಿದ್ದರು ಎಂದರು ನಿಧಿ.
ಇಷ್ಟೇ ಅಲ್ಲ, ರಘು ಕೂಡ ಇದೇ ರೀತಿಯ ಆರೋಪ ಮಾಡಿದರು. ರಾಜೀವ್ ನೀರು ಕುಡಿಯುವಾಗ ಕೈಯನ್ನು ಎತ್ತಿ ತೋರಿಸುತ್ತಾರೆ. ಈ ಮೂಲಕ ಅವರು ಬೈಸೆಪ್ಸ್ ಇದೆ ಎಂದು ತೋರಿಸೋ ಪ್ರಯತ್ನ ಮಾಡುತ್ತಾರೆ ಎಂದರು. ಅಷ್ಟೇ ಅಲ್ಲ, ಪಪ್ಪಾಯ ಕಟ್ ಮಾಡುವಾಗಲೂ ಹೀಗೆ ಮಾಡಲಾಗುತ್ತದೆ ಎನ್ನುವ ಆರೋಪ ಕೇಳಿ ಬಂತು.
ಇನ್ನು, ಮಂಜು ಕೂಡ ಇದೇ ಆರೋಪ ಮಾಡಿದರು. ಅವರು ನಿತ್ಯ ನನ್ನ ಬಳಿ ಬಂದು ಅವರ ತೊಡೆಯ ಮಸಲ್ಸ್ ಬಗ್ಗೆ ಮಾತನಾಡುತ್ತಾರೆ. ತಮ್ಮ ತೊಡೆ ಹಾಗಾಗಿದೆ ಹೀಗಾಗಿದೆ ಎನ್ನುತ್ತಿರುತ್ತಾರೆ ಎಂದರು. ಈ ಎಲ್ಲಾ ವಿಚಾರಗಳನ್ನು ಕೇಳಿಸಿಕೊಂಡ ಕಿಚ್ಚ ಸುದೀಪ್, ‘ನಾನು ಕೂಡ ಒಪ್ಪಿಕೊಳ್ಳುತ್ತೇನೆ’ ಎಂದರು.
ಇದನ್ನೂ ಓದಿ: BBK8 Elimination: ಬಿಗ್ ಬಾಸ್ ಮನೆಯಿಂದ ಚಂದ್ರಕಲಾ ಮೋಹನ್ ಎಲಿಮಿನೇಟ್
ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್ ಹೊಸ ಕಂಡೀಷನ್!
Published On - 7:19 am, Mon, 29 March 21