ಬಿಗ್​ ಬಾಸ್​ ಮನೆಗೆ ದೆವ್ವದ ಕಾಟ? ರಾಜೀವ್​ ಬಿಚ್ಚಿಟ್ರು ಭಯಾನಕ ಅನುಭವ

ಶುಭಾ ಕನಸಿನ ಬಗ್ಗೆ ಹೇಳುತ್ತಾ, ಈಗ ನಮ್ಮ ಕನಸಲ್ಲಿ ನಾವೇ ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆಗ ರಾಜೀವ್​ ನಿನ್ನೆ ನಡೆದ ನೈಜ ಘಟನೆ ಬಗ್ಗೆ ಹೇಳುತ್ತೇವೆ ಎಂದು ವಿವರಿಸಲು ಆರಂಭಿಸಿದ್ದಾರೆ.

ಬಿಗ್​ ಬಾಸ್​ ಮನೆಗೆ ದೆವ್ವದ ಕಾಟ? ರಾಜೀವ್​ ಬಿಚ್ಚಿಟ್ರು ಭಯಾನಕ ಅನುಭವ
ರಾಜೀವ್​ - ಬಿಗ್​ ಬಾಸ್ ಕನ್ನಡ ಸೀಸನ್​ 8
Updated By: Praveen Sahu

Updated on: Mar 25, 2021 | 1:30 PM

ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ಈಗ ದೆವ್ವದ ಕಾಟ ಆರಂಭವಾಗಿದೆಯಂತೆ. ಇದನ್ನು ನಾವು ಹೇಳುತ್ತಿಲ್ಲ. ಮನೆ ಮಂದಿಯೇ ಹೇಳಿದ್ದಾರೆ. ಕರೆಂಟ್​ ಹೋದಾಗ ಮನೆಯಲ್ಲಿ ಆದ ಘಟನೆ ಬಗ್ಗೆ ರಾಜೀವ್ ಹೇಳಿಕೊಂಡಿದ್ದಾರೆ. ಆದರೆ, ಕೊನೆಯಲ್ಲಿ ಘಟನೆಯ ನಿಜಾಂಶವನ್ನು ಕೂಡ ಅವರು ಬಿಚ್ಚಿಟ್ಟಿದ್ದಾರೆ.

ಎಲ್ಲರೂ ಮನೆಯಲ್ಲಿ ಕೂತು ಮಾತನಾಡುತ್ತಿದ್ದರು. ಆಗ ಶುಭಾ ಕನಸಿನ ಬಗ್ಗೆ ಹೇಳುತ್ತಾ, ಈಗ ನಮ್ಮ ಕನಸಲ್ಲಿ ನಾವೇ ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆಗ ರಾಜೀವ್​ ನಿನ್ನೆ ನಡೆದ ನೈಜ ಘಟನೆ ಬಗ್ಗೆ ಹೇಳುತ್ತೇವೆ ಎಂದು ವಿವರಿಸಲು ಆರಂಭಿಸಿದ್ದಾರೆ. ಮನೆಯಲ್ಲಿ ರಾತ್ರಿ ಏನಾಯಿತು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

ನಿನ್ನೆ ನಾನು ದಿವ್ಯಾ, ವಿಶ್ವನಾಥ ಅಡುಗೆಮನೆಯಲ್ಲಿ ಕುಳಿತುಕೊಂಡಿದ್ದೆವು. ಆಗ ಏಕಾಏಕಿ ಲೈಟ್​ ಆಫ್​ ಆಯ್ತು. ಆಗ, ಟಕ್​ ಅಂತ ಶಬ್ದ ಬಂತು. ವಿಶ್ವ ಅಣ್ಣಾ.. ಎಂದ. ನೋಡಿದ್ರೆ, ಕುಕ್ಕರ್​ ಮುಚ್ಚಳ ನಿಂತಿತ್ತು. ಕರೆಂಟ್​ ಬಂದಿದ್ದೇ ನಿಂತಿದ್ದ ಕುಕ್ಕರ್​ ಮುಚ್ಚಳ ಮಲಗಿಕೊಂಡಿತ್ತು ಎಂದು ವಿವರಿಸಿದರು. ಆರಂಭದಲ್ಲಿ ರಾಜೀವ್​ ಏನೋ ಕಿಂಡಲ್​ ಮಾಡುತ್ತಿದ್ದಾರೆ ಎಂದು ಎಲ್ಲರೂ ಎಂದುಕೊಂಡಿದ್ದರು. ಆದರೆ, ಅವರ ಮಾತಿನ ಗಂಭೀರತೆ ನೋಡಿ ಎಲ್ಲರೂ ಒಮ್ಮೆ ಕಂಗಾಲಾದರು.

ಈ ವೇಳೆ ಭಯ ಬಿದ್ದ ಶುಭಾ ಪೂಂಜಾ, ಬಿಗ್​ ಬಾಸ್​ ಮನೆಯಲ್ಲಿ ಏನಿದೆ ಎಂದು ಕೇಳಿದರು. ಮನೆಯವರೆಲ್ಲರೂ ಮನೆಯಲ್ಲಿ ದೆವ್ವ ಇದೆ ಎಂದೇ ಭಾವಿಸಿದ್ದರು. ಆಗ, ಶುಭಾ ಪ್ರಶ್ನೆ ಒಂದನ್ನು ಕೇಳಿದ್ದರು. ಬಹುಶಃ ನೀವು ಅಲ್ಲಿ ತೊಳೆದು ಮೇಲಿಟ್ಟಿದ್ರೇನೋ. ಅದು ಜಾರಿ ಬಿದ್ದಿರಬಹುದು ಎಂದರು. ಇದನ್ನು ಕೇಳಿದ ಅರವಿಂದ್. ಹೌದು ನೀವು ಹೇಳಿದ್ದು ಸರಿ ಎಂದು ನಕ್ಕು ಬಿಟ್ಟರು.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!

Published On - 8:09 am, Thu, 25 March 21