ರಜನಿಕಾಂತ್ ಕುರಿತ ಈ ಅಪರೂಪದ ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
Rajinikanth: ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರಲ್ಲಿ ಅರ್ಧ ಹಣವನ್ನು ಅವರು ಸಾಮಾಜಿಕ ಸೇವೆಗೆ ಬಳಸುತ್ತಾರೆ. ಈ ರೀತಿಯ ಹಲವು ಅಪರೂದ ವಿಚಾರಗಳು ಅವರ ಬಗ್ಗೆ ಇವೆ.

ರಜನಿ
ರಜನಿಕಾಂತ್ (Rajinikanth) ಅವರು ತಮ್ಮದೇ ಆದ ಮ್ಯಾನರಿಸಂ ಹೊಂದಿದ್ದಾರೆ. ಅವರು ದೊಡ್ಡಪರದೆಮೇಲೆ ಬಂದರೆ ಸಾಕು ಅಭಿಮಾನಿಗಳು ಎದ್ದುನಿಂತು ಶಿಳ್ಳೆ ಹೊಡೆಯುತ್ತಾರೆ. ವಿಲನ್ಗಳ ಜೊತೆ ರಜನಿ ಫೈಟ್ ಮಾಡುವಾಗ ಅಭಿಮಾನಿಗಳಲ್ಲಿ ರೋಮಾಂಚನ ಆಗುತ್ತದೆ. ನಟನಾಗಿ ಅವರು ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಭಾರತದ ಟಾಪ್ ಹೀರೋಗಳಲ್ಲಿ ಅವರೂ ಒಬ್ಬರು. ಇಂದು (ಡಿಸೆಂಬರ್ 12) ರಜನಿಕಾಂತ್ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
- ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಎಂದಾಗಿತ್ತು. ಬೆಂಗಳೂರಿನಲ್ಲಿ ಅವರು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕಂಡಕ್ಟರ್ ಆಗುವುದಕ್ಕೂ ಮುನ್ನ ಕೂಲಿ ಕೆಲಸ ಹಾಗೂ ಬಡಗಿ ಕೆಲಸ ಮಾಡಿದ್ದರು. ಈಗ ಅವರು ಸೂಪರ್ ಸ್ಟಾರ್ ಆಗಿದ್ದಾರೆ.
- ರಜನಿಕಾಂತ್ ಅವರ ಮೊದಲ ಸಿನಿಮಾ ‘ಅಪೂರ್ವ ರಾಗಂಗಳ್’. ಈ ಸಿನಿಮಾ 1975ರಲ್ಲಿ ರಿಲೀಸ್ ಆಯಿತು. ಇದು ತಮಿಳು ಸಿನಿಮಾ. 1976ರ ‘ಕಥಾ ಸಂಗಮ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ಹಲವು ಕನ್ನಡ ಚಿತ್ರಗಳಲ್ಲಿ ರಜನಿಕಾಂತ್ ನಟಿಸಿದ್ದಾರೆ. ‘ಭೈರವಿ’ ಯಶಸ್ಸಿನ ನಂತರ ರಜನಿಕಾಂತ್ ಹೆಸರಿಗೆ ‘ಸೂಪರ್ ಸ್ಟಾರ್’ ಪಟ್ಟ ಸೇರ್ಪಡೆ ಆಯಿತು.
- ಬೆಂಗಳೂರಿನ ದೇವಸ್ಥಾನವೊಂದರಲ್ಲಿ ರಜನಿಕಾಂತ್ ಕುಳಿತಿದ್ದಾಗ ಅಲ್ಲಿದ್ದ ಭಿಕ್ಷುಕರು ರಜನಿ ಕೈಯಲ್ಲಿ ಹಣ ಇಟ್ಟಿದ್ದರಂತೆ. ಈ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.
- ಸಿನಿಮಾ ಒಂದರ ಶೂಟಿಂಗ್ನಲ್ಲಿ ಅರವಿಂದಸ್ವಾಮಿ ಅವರು ರಜನಿಕಾಂತ್ ಅವರ ರೂಂಗೆ ಗೊತ್ತಿಲ್ಲದೆ ಬಂದಿದ್ದರು. ಅಲ್ಲಿದ್ದ ಹಾಸಿಗೆಯ ಮೇಲೆ ಅರವಿಂದಸ್ವಾಮಿ ಮಲಗಿದ್ದರು. ಇದನ್ನು ರಜನಿ ನೋಡಿದರು. ಅರವಿಂದಸ್ವಾಮಿಯನ್ನು ಎಬ್ಬಿಸಲು ರಜನಿಗೆ ಮನಸ್ಸೇ ಬರಲಿಲ್ಲ. ಹೀಗಾಗಿ, ರಜನಿ ನೆಲದಮೇಲೆ ನಿದ್ರಿಸಿದರು.
- ಸಿಬಿಎಸ್‌ಇ ಪಠ್ಯಪುಸ್ತಕದಲ್ಲಿ ರಜನಿ ಬಗ್ಗೆ ಪಾಠ ಇದೆ. ಸಿಬಿಎಸ್‌ಇ 6ನೇ ತರಗತಿ ವಿದ್ಯಾರ್ಥಿಗಳಿಗೆ ರಜನಿಕಾಂತ್ ಕುರಿತು ಪಠ್ಯ ಇದೆ.
- ರಜನಿ ಅವರಿಂದ ನಟಿ ಮನೋರಮಾ ಅವರಿಗೆ ಅವಕಾಶಗಳು ಸಿಕ್ಕಿರಲಿಲ್ಲ. ಇದು ರಜನಿಕಾಂತ್ ಗಮನಕ್ಕೆ ಬಂದ ಬಳಿಕ ‘ಅರುಣಾಚಲಂ’ ಸಿನಿಮಾದಲ್ಲಿ ನಟಿಸಲು ಮನೋರಮಾಗೆ ಅವಕಾಶ ಕೊಡಿಸಿದರು ರಜನಿ.
- ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರಲ್ಲಿ ಅರ್ಧ ಹಣವನ್ನು ಅವರು ಸಾಮಾಜಿಕ ಸೇವೆಗೆ ಬಳಸುತ್ತಾರೆ.
- 2007ರಲ್ಲಿ ರಜನಿಕಾಂತ್ ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಆದರು. ಈ ಸಾಲಿನಲ್ಲಿ ಜಾಕಿ ಚಾನ್ ಮೊದಲಿದ್ದರು.
- ರಜನಿಕಾಂತ್ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಪದ್ಮಭೂಷಣ (2000), ಪದ್ಮ ವಿಭೂಷಣ (2016), ದಾದಾ ಫಾಲ್ಕೆ (2019) ಪ್ರಶಸ್ತಿಗೆ ರಜನಿ ಪಾತ್ರರಾಗಿದ್ದಾರೆ.
- ಸಿನಿಮಾದಲ್ಲಿ ಗೆದ್ದ ಬಳಿಕ ರಾಜಕೀಯ ಎಲ್ಲರನ್ನೂ ಆಕರ್ಷಿಸುತ್ತದೆ. ಇದಕ್ಕೆ ರಜನಿಕಾಂತ್ ಕೂಡ ಹೊರತಾಗಿಲ್ಲ. ಅವರು ಒಂದು ಕಾಲದಲ್ಲಿ ರಾಜಕೀಯಕ್ಕೆ ಬರಲು ಆಸಕ್ತಿ ತೋರಿದರು. ಪಕ್ಷ ಘೋಷಿಸುವುದಾಗಿಯೂ ಹೇಳಿದರು. ನಂತರ ಅವರಿಗೆ ಅನಾರೋಗ್ಯ ಉಂಟಾಯಿತು. ಹೀಗಾಗಿ, ಅವರು ರಾಜಕೀಯಕ್ಕೆ ಬರಲೇ ಇಲ್ಲ. ಸಿನಿಮಾ ರಂಗದಲ್ಲಿ ಅವರು ಮುಂದುವರಿದಿದ್ದಾರೆ.
- ರಜನಿ ಗಾಯಕರೂ ಹೌದು. ಕೆಲವು ಸಿನಿಮಾಗಳ ಸಾಂಗ್ನ ರಜನಿ ಹಾಡಿದ್ದಾರೆ. ಕೆಲವು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ. ಅವರು ನಿರ್ಮಾಪಕರೂ ಹೌದು. ತಾವು ನಟಿಸಿದ ಸಿನಿಮಾ ಸೋತಾಗ ವಿತರಕರಿಗೆ ಹಣ ಹಿಂದಿರುಗಿಸಿದ್ದರು.
- ‘ಬಾಬಾ’ ಚಿತ್ರ ದೊಡ್ಡ ಸೋಲು ಕಂಡಿತ್ತು. ಆ ಬಳಿಕ ರಜನಿ ಬಣ್ಣದ ಬದುಕು ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ‘ಚಂದ್ರಮುಖಿ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡರು. ‘ಶಿವಾಜಿ’ ಮತ್ತು ‘ರೋಬೋ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. ಇತ್ತೀಚೆಗೆ ರಿಲೀಸ್ ಆದ ‘ಜೈಲರ್’ ಗೆಲುವು ಕಂಡಿದೆ.
- ‘ಬಾಳು ಜೇನು’, ‘ಒಂದು ಪ್ರೇಮದ ಕಥೆ’, ‘ಕುಂಕುಮ ರಕ್ಷೆ’, ‘ಕಿಲಾಡಿ ಕಿಟ್ಟು’, ‘ಗಲಾಟೆ ಸಂಸಾರ’, ‘ಮಾತು ತಪ್ಪದ ಮಗ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
- ರಜನಿಕಾಂತ್ ನಟನೆಯ 170ನೇ ಸಿನಿಮಾ ಸೆಟ್ಟೇರಿದೆ. ಅವರು ಮತ್ತಷ್ಟು ಸಿನಿಮಾ ಮಾಡಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Tue, 12 December 23
Follow Us




