ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲು ರೆಡಿ ಆದ ರಜನಿಕಾಂತ್?

Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಅವರು ವಯಸ್ಸು ಮತ್ತು ಆರೋಗ್ಯ ಕಾರಣಗಳಿಂದ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲು ಚಿಂತಿಸುತ್ತಿದ್ದಾರೆ. 74ರ ಹರೆಯದಲ್ಲೂ ಆ್ಯಕ್ಟಿಂಗ್‌ನಲ್ಲಿ ಬ್ಯುಸಿ ಇರುವ ಥಲೈವಾ, 2027ರೊಳಗೆ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲು ರೆಡಿ ಆದ ರಜನಿಕಾಂತ್?
ರಜಿನಿಕಾಂತ್

Updated on: Nov 01, 2025 | 7:19 PM

ಸೂಪರ್​ ಸ್ಟಾರ್ ರಜನಿಕಾಂತ್ (Rajinikanth) ಅವರಿಗೆ ಈಗ 74 ವರ್ಷ. ಅವರು ಈ ವಯಸ್ಸಿನಲ್ಲೂ ಆ್ಯಕ್ಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ವರ್ಷಕ್ಕೆ ಒಂದು ಸಿನಿಮಾ ಆದರೂ ಕೊಡಬೇಕು ಎಂಬುದು ಅವರ ಟಾರ್ಗೆಟ್. ಈಗ ಅವರು ತಮ್ಮ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಚಿತ್ರರಂಗಕ್ಕೆ ಗುಡ್​ಬೈ ಹೇಳಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ರಜನಿಕಾಂತ್ ಅವರು ಮಾಸ್ ಆಗಿ ಹೆಚ್ಚು ಇಷ್ಟ ಆಗುತ್ತಾರೆ. ಅವರು ಮೊದಲಿನಿಂದಲೂ ಇದೇ ರೀತಿಯ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಈಗಲೂ ಇದನ್ನೇ ಅವರಿಂದ ನಿರೀಕ್ಷೆ ಮಾಡುತ್ತಾರೆ. ಆದರೆ, ರಜನಿಕಾಂತ್​ಗೆ ಮೊದಲಿನಷ್ಟು ಆ್ಯಕ್ಷನ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಲವು ಕಡೆಗಳಲ್ಲಿ ನಿರ್ದೇಶಕರು ಡ್ಯೂಪ್ ಬಳಕೆ ಮಾಡುತ್ತಾರೆ. ಆದರೆ, ರಜನಿಕಾಂತ್ ಅವರು ಇನ್ನುಮುಂದೆ ನಟನೆ ಮಾಡದೆ ಇರಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ.

ರಜನಿಕಾಂತ್ ಅವರ ನಟನೆಯ ‘ಕೂಲಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಧಾರಣ ಯಶಸ್ಸು ಕಂಡಿತು. ಆ ಬಳಿಕ ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಂತರ ಸುಂದರ್ ಸಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ರಜನಿ ನಟಿಸಲಿದ್ದಾರಂತೆ. ಅಲ್ಲದೆ, ಕಮಲ್ ಹಾಸನ್ ಜೊತೆಗೂ ಅವರು ಒಂದು ಸಿನಿಮಾ ಮಾಡಬೇಕಿದೆ. ಇದಾದ ಬಳಿಕ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಲಿದ್ದಾರಂತೆ.

ಇದನ್ನೂ ಓದಿ
ಬಿಗ್ ಬಾಸ್​ನಲ್ಲಿ ಕನ್ನಡದ ಕಂಪು; ವಿಶ್ ತಿಳಿಸಿದ ಸುದೀಪ್
ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಈ ಮೊದಲು ರಜನಿಕಾಂತ್ ಅವರು ರಾಜಕೀಯಕ್ಕೆ ಕಾಲಿಡುವ ಪ್ರಯತ್ನ ಮಾಡಿದ್ದರು. ಆದರೆ, ಆ ಸಮಯದಲ್ಲಿ ಅವರಿಗೆ ಅನಾರೋಗ್ಯ ಉಂಟಾಯಿತು. ಈ ಕಾರಣಕ್ಕೆ ಅವರು ಈ ನಿರ್ಧಾರದಿಂದ ಹಿಂದೆ ಬಂದರು. ಈಗ ಅವರು ಚಿತ್ರರಂಗದಿಂದ ದೂರ ಸರಿಯಲು ಕಾರಣವೂ ವಯಸ್ಸೇ ಎನ್ನಲಾಗುತ್ತಿದೆ. ಆಪ್ತರು ಹಾಗೂ ಕುಟುಂಬದವರ ಜೊತೆ ಚರ್ಚಿಸಿ ಈ ನಿರ್ಧಾರವನ್ನು ಅವರು ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಜನಿಕಾಂತ್-ಧನುಷ್ ಮನೆಯಲ್ಲಿ ಬಾಂಬ್ ಇಟ್ಟಿದ್ದಾಗಿ ಪೊಲೀಸರಿಗೆ ಬಂತು ಮೇಲ್

ರಜನಿಕಾಂತ್ ಅವರು ಬಾಡಿ ಡಬಲ್ ಬಳಕೆ ಮಾಡುವ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ. ಇದನ್ನು ಮಾಡಲು ರಜನಿಗೂ ಸಂಪೂರ್ಣ ಮನಸ್ಸಿಲ್ಲ. ಆದರೆ ಮಾಡದೆ ಬೇರೆ ದಾರಿ ಇಲ್ಲ.  2027ರ ಅಂತ್ಯದ ವೇಳೆಗೆ ರಜನಿಕಾಂತ್ ಅವರು ಸಿನಿಮಾ ರಂಗದಿಂದ ದೂರ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:19 pm, Sat, 1 November 25