ಮತ್ತೆ ಬರ್ತಿದೆ ‘ಜೈಲರ್’, ಎಂಟ್ರಿ ಕೊಡಲಿದ್ದಾರಾ ಶಿವಣ್ಣ?

Jailer 2: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ರಜನೀಕಾಂತ್​ರ ‘ಜೈಲರ್’ ಸಿನಿಮಾದ ಎರಡನೇ ಭಾಗ ಸಿದ್ಧವಾಗುತ್ತಿದೆ. ಈ ಬಾರಿಯೂ ಶಿವಣ್ಣ ಇರಲಿದ್ದಾರಾ?

ಮತ್ತೆ ಬರ್ತಿದೆ ‘ಜೈಲರ್’, ಎಂಟ್ರಿ ಕೊಡಲಿದ್ದಾರಾ ಶಿವಣ್ಣ?

Updated on: Feb 23, 2024 | 3:20 PM

ರಜನೀಕಾಂತ್ (Rajinikanth) ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಜೈಲರ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಭಾರಿ ಹಿಟ್ ಆಗಿತ್ತು. ರಜನೀಕಾಂತ್ ಜೊತೆಗೆ ಸಿನಿಮಾದಲ್ಲಿ ನಟಿಸಿದ್ದ ಶಿವಣ್ಣ ಅವರ ಅತಿಥಿ ಪಾತ್ರಕ್ಕೂ ಭಾರಿ ಜನಪ್ರಿಯತೆ ಧಕ್ಕಿತ್ತು, ‘ಜೈಲರ್’ ಸಿನಿಮಾದ ಶಿವಣ್ಣನ ಪಾತ್ರವನ್ನೇ ಪ್ರಧಾನವಾಗಿರಿಸಿಕೊಂಡು ಪ್ರತ್ಯೇಕ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣದ ಚರ್ಚೆ ಆಗುತ್ತಿದೆ. ಈ ಸಿನಿಮಾದಲ್ಲಿಯೂ ಸಹ ಶಿವಣ್ಣ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿ, ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದರು. ಇದೀಗ ನೆಲ್ಸನ್ ‘ಜೈಲರ್ 2’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಸೊಸೆಯ ಪಾತ್ರದಲ್ಲಿ ನಟಿಸಿದ್ದ ಮಿಲನಾ ತಮ್ಮ ಹೊಸ ಸಿನಿಮಾ ‘ಬರ್ತ್​ಮಾರ್ಕ್​’ನಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರದ ವೇಳೆ ಈ ವಿಷಯ ಬಹಿರಂಗಪಡಿಸಿದ್ದಾರೆ.

ನೆಲ್ಸನ್ ‘ಜೈಲರ್ 2’ ಸಿನಿಮಾದ ಚಿತ್ರಕತೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಕ್ರಗಳು ಪ್ರಾರಂಭವಾಗಲಿವೆ ಎಂದಿದ್ದಾರೆ. ಆ ಮೂಲಕ ತಾವೂ ಸಹ ಆ ಸಿನಿಮಾದಲ್ಲಿ ನಟಿಸುತ್ತಿರುವುದಾಗಿಯೂ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ನಟಿಸಿದ್ದ ಬಹುತೇಕರು ‘ಜೈಲರ್ 2’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನನ್ನ ತಂದೆ ‘ಸಂಘಿ’ ಅಲ್ಲ: ಅಪ್ಪನ ಟೀಕಿಸಿದವರಗೆ ರಜನೀಕಾಂತ್ ಪುತ್ರಿ ತಿರುಗೇಟು

ಕಳೆದ ವರ್ಷ ಆಗಸ್ಟ್ 10ರಂದು ‘ಜೈಲರ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. 200 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ‘ಜೈಲರ್’ ಸಿನಿಮಾ ಸುಮಾರು 700 ಕೋಟಿ ಕಲೆಕ್ಷನ್ ಮಾಡಿತ್ತು. ಸಿನಿಮಾದ ಗೆಲುವಿನಿಂದ ಖುಷಿಯಾಗಿದ್ದ ನಿರ್ಮಾಪಕ ಕಲಾನಿಧಿ ಮಾರನ್, ಸಿನಿಮಾದ ನಾಯಕ ರಜನೀಕಾಂತ್, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರುಗಳಿಗೆ ಐಶಾರಾಮಿ ಕಾರುಗಳನ್ನು ಹಾಗೂ ನಗದು ಹಣವನ್ನು ಉಡುಗೊರೆಯಾಗಿ ನೀಡಿದ್ದರು.

‘ಜೈಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಶಿವಣ್ಣನ ಪಾತ್ರ ಸಿನಿಮಾದ ಪ್ರಮುಖ ಹೈಲೈಟ್​ಗಳಲ್ಲಿ ಒಂದಾಗಿತ್ತು. ಶಿವಣ್ಣ ಮಾತ್ರವೇ ಅಲ್ಲದೆ ಮೋಹನ್​ಲಾಲ್, ಜಾಕಿಶ್ರಾಫ್, ಸುನಿಲ್, ತಮನ್ನಾ ಭಾಟಿಯಾ ಅವರುಗಳು ಸಹ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us