Coolie
ರಜನೀಕಾಂತ್ ನಟಿಸಿರುವ ‘ಕೂಲಿ’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ಲೋಕೇಶ್ ಕನಗರಾಜ್ ನಿರ್ದೇಶಿಸಿರುವ ಈ ಸಿನಿಮಾನಲ್ಲಿ ಬಹುದೊಡ್ಡ ತಾರಾಗಣ ಇದೆ. ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ಸೌಬಿನ್, ಶ್ರುತಿ ಹಾಸನ್, ಸತ್ಯರಾಜ್ ಇನ್ನೂ ಹಲವರಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಇವೆ. ಸಿನಿಮಾದ ಮೊದಲಾರ್ಧ (ಇಂಟರ್ವೆಲ್) ಈಗಷ್ಟೆ ಮುಗಿದಿದ್ದು, ಸಿನಿಮಾದ ಮೊದಲಾರ್ಧ ಹೇಗಿದೆ? ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆಯೇ? ಮೊದಲಾರ್ಧದಲ್ಲಿರುವ ಧನಾತ್ಮಕ ಅಂಶಗಳು ಯಾವುವು? ಋಣಾತ್ಮಕ ಅಂಶಗಳು ಯಾವುವು? ಇಲ್ಲಿದೆ ಮಾಹಿತಿ…
- ಟ್ವಿಸ್ಟುಗಳಿಂದಲೇ ತುಂಬಿರುವ ಮೊದಲಾರ್ಧ, ಒಂದರ ಹಿಂದೊಂದು ಟ್ವಿಸ್ಟುಗಳು.
- ರಜನೀಕಾಂತ್ ಎಂಟ್ರಿ ಸೂಪರ್ ಆದರೆ ವಿಲನ್ ಗಳ ಎಂಟ್ರಿ ಇನ್ನೂ ಸೂಪರ್.
- ನಾಗಾರ್ಜುನ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಷ್ ಹಾಗೂ ವಯಲೆಂಟ್ ವಿಲನ್.
- ಮೊದಲಾರ್ಧದಲ್ಲಿ ರಜನೀಕಾಂತ್, ನಾಗಾರ್ಜುನ, ಸೌಬಿನ್, ಸತ್ಯರಾಜ್, ಶ್ರುತಿ ಪಾತ್ರಗಳ ಸುತ್ತ ಕತೆ.
- ಮೊದಲಾರ್ಧದಲ್ಲಿ ಉಪೇಂದ್ರ ಎಂಟ್ರಿ ಆಗಿಲ್ಲ. ರಚಿತಾ ರಾಮ್ ಎರಡು ದೃಶ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
- ಮೋನಿಕಾ ಹಾಡು ಬೊಂಬಾಟ್, ಇನ್ನೂ ಎರಡು ಹಾಡು ಮೊದಲಾರ್ಧದಲ್ಲಿದ್ದು ಅವು ಸಹ ಚೆನ್ನಾಗಿದೆ. ನಾಗಾರ್ಜುನ ಎಂಟ್ರಿಯ ಹಿನ್ನೆಲೆ ಮ್ಯೂಸಿಕ್ ಸೂಪರ್.
- ರಜನೀಕಾಂತ್ ಆಕ್ಷನ್ ಮತ್ತು ಕಾಮಿಡಿ ಸೂಪರ್. ಇಂಟರ್ವೆಲ್ ವೇಳೆಗೆ ಫ್ಲಾಷ್ ಬ್ಯಾಕ್ ತೆರೆದು ಕೊಳ್ಳುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ