‘ಮಾರ್ಟಿನ್’ ಜೊತೆ ಕ್ಲ್ಯಾಶ್ ಮಾಡಿಕೊಂಡ ‘ವೆಟ್ಟೈಯನ್’ ಸಿನಿಮಾ; ರಿಲೀಸ್ ದಿನಾಂಕ ರಿವೀಲ್

|

Updated on: Aug 19, 2024 | 2:50 PM

‘ವೆಟ್ಟೈಯನ್’ ಸಿನಿಮಾ ಟಿಜಿ ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಮುಖ್ಯ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಸಿನಿಮಾದ ರಿಲೀಸ್ ದಿನಾಂಕ ರಿವೀಲ್ ಆಗಿದೆ. ಅಕ್ಟೋಬರ್ 10ರಂದು ಸಿನಿಮಾ ಬಿಡುಗಡೆ ಆಗಲಿದೆ.

‘ಮಾರ್ಟಿನ್’ ಜೊತೆ ಕ್ಲ್ಯಾಶ್ ಮಾಡಿಕೊಂಡ ‘ವೆಟ್ಟೈಯನ್’ ಸಿನಿಮಾ; ರಿಲೀಸ್ ದಿನಾಂಕ ರಿವೀಲ್
ರಜನಿ-ಮಾರ್ಟಿನ್
Follow us on

ರಜನಿಕಾಂತ್ ನಟನೆಯ ‘ವೆಟ್ಟೈಯನ್’ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಫ್ಯಾನ್ಸ್​ಗೆ ಕುತೂಹಲ ಇತ್ತು. ಈಗ ಈ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಅಕ್ಟೋಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ಮೂಲಕ ಕನ್ನಡದ ‘ಮಾರ್ಟಿನ್’ ಹಾಗೂ ತಮಿಳಿನ ‘ಕಂಗುವ’ ಜೊತೆ ಈ ಸಿನಿಮಾ ಸ್ಪರ್ಧೆಗೆ ಇಳಿಯುತ್ತಿದೆ.

ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ನವರಾತ್ರಿ ಇದೆ. ಈ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ‘ವೆಟ್ಟೈಯನ್’ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿದೆ. ‘ಟಾರ್ಗೆಟ್ ಲಾಕ್ ಆಗಿದೆ. ವೆಟ್ಟೈಯನ್ ಸಿನಿಮಾ ವಿಶ್ವಾದ್ಯಂತ ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ಸೂಪರ್​ಸ್ಟಾರ್​ ಅವರು ಸೂಪರ್​ ಕಾಪ್ ಆಗಿ ಬರುತ್ತಿದ್ದಾರೆ. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ’ ಎಂದು ಮಾಹಿತಿ ನೀಡಲಾಗಿದೆ. ರಜನಿಕಾಂತ್ ಅವರು ಪೊಲೀಸ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಮೊದಲು ರಜನಿಕಾಂತ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ‘ನಾನು ವೆಟ್ಟೈಯನ್ ಸಿನಿಮಾದ ಡಬ್ಬಿಂಗ್ ಪೂರ್ಣಗೊಳಿಸಿದ್ದೇನೆ. ದಸರಾದಂದು ಸಿನಿಮಾ ರಿಲೀಸ್ ಆಗಲಿದೆ’ ಎಂದು ರಜನಿಕಾಂತ್ ಹೇಳಿಕೊಂಡಿದ್ದರು. ಅಂತೆಯೇ ಈಗ ಅಕ್ಟೋಬರ್ 10ರಂದು ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಚೆನ್ನಾಗಿ ಕುಡಿದು ಕಮಲ್ ಹಾಸನ್​ಗೆ ಕಾಲ್ ಮಾಡಿದ್ದ ರಜನಿಕಾಂತ್ ಹೇಳಿದ್ದೇನು?

‘ವೆಟ್ಟೈಯನ್’ ಸಿನಿಮಾ ಟಿಜಿ ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಜೊತೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾನ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.