‘ಭೀಮ’ ಚಿತ್ರ ಮಾಡಿದ ಗಳಿಕೆ ಎಷ್ಟು? ನಿರ್ಮಾಪಕರಿಗೆ ಭರ್ಜರಿ ಲಾಭ
ದುನಿಯಾ ವಿಜಯ್ ಅವರು ಸದ್ಯ ‘ಭೀಮ’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಒಳ್ಳೆಯ ಗಳಿಕೆ ಮಾಡಿ ಸಾಗುತ್ತಿದೆ. ಈ ಚಿತ್ರದಿಂದ ವಿಜಯ್ ಅವರಿಗೆ ನಿರ್ದೇಶನ ಹಾಗೂ ನಟನೆಯಲ್ಲಿ ಮತ್ತೊಂದು ಗೆಲುವು ಸಿಕ್ಕಿದೆ. ಅವರ ಸಿನಿಮಾ ಗಳಿಕೆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.
‘ಭೀಮ’ ಸಿನಿಮಾ ರಿಲೀಸ್ ಆಗಿ 10 ದಿನಗಳು ಕಳೆದಿದೆ. ಕಳೆದ ಶುಕ್ರವಾರ (ಆಗಸ್ಟ್ 19) ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದುನಿಯಾ ವಿಜಯ್ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ದುನಿಯಾ ವಿಜಯ್ ನಟನೆಯ ಈ ಚಿತ್ರದ ಗಳಿಕೆ 20 ಕೋಟಿ ರೂಪಾಯಿ ಸಮೀಪಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಂಡದ ಖುಷಿ ಹೆಚ್ಚಿಸಿದೆ.
ಇತ್ತೀಚೆಗೆ ಕನ್ನಡದ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡಿರಲಿಲ್ಲ. ಇದಕ್ಕೆ ಹಲವಾರು ಕಾರಣಗಳು ಇದ್ದವು. ಈಗ ದುನಿಯಾ ವಿಜಯ್ ನಟನೆಯ ‘ಭೀಮ’ ಚಿತ್ರದಿಂದ ಚಿತ್ರರಂಗಕ್ಕೆ ಮತ್ತೆ ಬಲ ಸಿಕ್ಕಿದೆ. ಈ ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಕಳೆದ ಬುಧವಾರದವರೆಗೆ ಈ ಸಿನಿಮಾ 15.2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಂತರ ಆಗಸ್ಟ್ 15, 16 ಹಾಗೂ 17ರಂದು ಈ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಈ ಮೂಲಕ ಸಿನಿಮಾ ಸುಮಾರು 20 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ.
ಅಕ್ಷಯ್ ಕುಮಾರ್ ಸಿನಿಮಾಗಳೇ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡುತ್ತಿವೆ. ಹೀಗಿರುವಾಗ ‘ಭೀಮ’ ಸಿನಿಮಾ 20 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಉತ್ತಮ ಕಲೆಕ್ಷನ್ ಎಂಬುದು ಅನೇಕರ ಅಭಿಪ್ರಾಯ. ‘ಭೀಮ’ ಚಿತ್ರದಿಂದ ದುನಿಯಾ ವಿಜಯ್ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: ದರ್ಶನ್ ಹೆಸರು ಹೇಳುತ್ತಿದ್ದಂತೆ ಹೇಗಿತ್ತು ನೋಡಿ ದುನಿಯಾ ವಿಜಯ್ ಪ್ರತಿಕ್ರಿಯೆ
ದುನಿಯಾ ವಿಜಯ್ ಅವರು ‘ಸಲಗ’ ಮೂಲಕ ಗೆಲುವು ಕಂಡಿದ್ದಾರೆ. ‘ಭೀಮ’ ಸಿನಿಮಾ ದೊಡ್ಡ ಮಟ್ಟದ ಗೆಲುವು ಕಂಡ ಬಳಿಕ ಅವರು ‘ಸಲಗ 2’ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಈ ಚಿತ್ರದ ಕೆಲಸ ಯಾವಾಗ ಆರಂಭ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.