ಜೈಲಿನಲ್ಲಿ ರಾಖಿ ಕಟ್ಟಿಸಿಕೊಳ್ಳದೇ ಧಿಮಾಕು ತೋರಿದ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ

ಪರಪ್ಪನ ಅಗ್ರಹಾರದಲ್ಲಿ ಇರುವ ಪವಿತ್ರಾ ಗೌಡ ಅವರು ಧಿಮಾಕಿನಿಂದ ನಡೆದುಕೊಂಡಿದ್ದಾರೆ. ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಜೈಲಿನಲ್ಲಿವವರಿಗೆ ರಾಖಿ ಕಟ್ಟಲು ತೆರಳಿದ್ದ ಮಹಿಳೆಯರ ಎದುರು ಪವಿತ್ರಾ ಗೌಡ ಧಿಮಾಕಿನ ವರ್ತನೆ ತೋರಿದ್ದಾರೆ. ದರ್ಶನ್​ ಸ್ನೇಹಿತೆಯಾದ ಪವಿತ್ರಾ ಗೌಡ ಅವರಿಗೆ ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನ ಮುಂದುವರಿದಿದೆ.

ಜೈಲಿನಲ್ಲಿ ರಾಖಿ ಕಟ್ಟಿಸಿಕೊಳ್ಳದೇ ಧಿಮಾಕು ತೋರಿದ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ
ಪವಿತ್ರಾ ಗೌಡ, ದರ್ಶನ್​
Follow us
ರಾಮು, ಆನೇಕಲ್​
| Updated By: ಮದನ್​ ಕುಮಾರ್​

Updated on: Aug 19, 2024 | 4:20 PM

ನಟ ದರ್ಶನ್​ ಹಾಗೂ ಅವರ ಸ್ನೇಹಿತೆ ಪವಿತ್ರಾ ಗೌಡ ಜೈಲು ವಾಸ ಅನುಭವಿಸುತ್ತಿದ್ದಾರೆ. ರೇಣುಕಾಸ್ವಾಮಿಯ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿಗಳಾಗಿರುವ ಇವರಿಗೆ ಸದ್ಯಕ್ಕಂತೂ ಜಾಮೀನು ಸಿಗುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಪವಿತ್ರಾ ಗೌಡ ಅವರು ಜೈಲಿನಲ್ಲಿ ಧಿಮಾಕು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಜೈಲಿನಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲು ತೆರಳಿದ್ದ ಮಹಿಳೆಯರ ಎದುರು ಪವಿತ್ರಾ ಗೌಡ ಧಿಮಾಕಿನಿಂದ ನಡೆದುಕೊಂಡಿದ್ದಾರೆ.

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಕೆಲವು ಮಹಿಳೆಯರು ಜೈಲುವಾಸಿಗಳಿಗೆ ರಾಖಿ ಕಟ್ಟಿದ್ದಾರೆ. ಜೈಲಿನಲ್ಲಿರುವ ಮಹಿಳೆಯರಿಗೂ ರಾಖಿ ಕಟ್ಟಿ, ಸಿಹಿ ಮತ್ತು ಟವಲ್ ಹಂಚಲಾಯಿತು. ಆದರೆ ಈ ವೇಳೆ ಪವಿತ್ರಾ ಗೌಡ ಅವರು ರಾಖಿ ಕಟ್ಟಿಸಿಕೊಂಡಿಲ್ಲ. ಎಷ್ಟೇ ಕರೆದರೂ ಅವರು ಕೊಠಡಿಯಿಂದ ಹೊರಗೆ ಬಂದಿಲ್ಲ. ಈ ಬಗ್ಗೆ ಮಹಿಳೆಯರು ಬೇಸರ ಹೊರಹಾಕಿದ್ದಾರೆ.

ಇದೆಲ್ಲದರ ನಡುವೆ ಇಂದು ದರ್ಶನ್​ ಅವರನ್ನು ನೋಡಲು ತೆರಳಿದ್ದ ಪತ್ನಿ ವಿಜಯಲಕ್ಷ್ಮಿ ಅವರು ವಿನಯವಂತಿಕೆಯಿಂದ ನಡೆದುಕೊಂಡರು ಎಂಬುದು ಕೂಡ ತಿಳಿದುಬಂದಿದೆ. ರಕ್ಷಾಬಂಧನ ಆಚರಣೆಗೆ ತೆರಳಿದ್ದ ಮಹಿಳೆಯರಿಂದ ವಿಜಯಲಕ್ಷ್ಮಿ ಅವರು ರಾಖಿ ಕಟ್ಟಿಸಿಕೊಂಡಿದ್ದಾರೆ. ಅಲ್ಲದೇ, ಸಿಹಿ ಪಡೆದು ಎಲ್ಲರನ್ನೂ ಅವರು ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಅವರ ಪುತ್ರ ವಿನೀಶ್​ ಕೂಡ ರಾಖಿ ಕಟ್ಟಿಸಿಕೊಂಡಿದ್ದಾರೆ. ಅವರ ಜೊತೆ ಮಾತನಾಡಿದ್ದು ಖುಷಿ ಆಯಿತು ಎಂದು ಮಹಿಳೆಯರು ಹೇಳಿದಾರೆ.

ಇದನ್ನೂ ಓದಿ: ‘ದರ್ಶನ್​ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ’: ಜಗ್ಗೇಶ್ ನೇರ ಮಾತು

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ಅವರು ಕಾಲ ಕಳೆಯುತ್ತಿದ್ದಾರೆ. ಇಂದು (ಆಗಸ್ಟ್​ 19) ಅವರನ್ನು ದಿನಕರ್ ತೂಗುದೀಪ, ವಿಜಯಲಕ್ಷ್ಮಿ ಮತ್ತು ವಿನೀಶ್​ ಅವರು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ದರ್ಶನ್​ ಅವರು ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಕಾನೂನಿನ ಹೋರಾಟದ ಬಗ್ಗೆ ಪತ್ನಿಯ ಜೊತೆ ಅವರು ಮಾತಕಥೆ ನಡೆಸಿದ್ದಾರೆ. ದಿನಕರ್​ ಅವರು ದರ್ಶನ್​ಗೆ ಧೈರ್ಯ ತುಂಬಿದ್ದಾರೆ. ಹಣ್ಣುಗಳನ್ನು ನೀಡಿ ವಾಪಸ್​ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ