AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದರ್ಶನ್​ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ’: ಜಗ್ಗೇಶ್ ನೇರ ಮಾತು

ಕಲಾವಿದರ ಸಂಘದ ಕಟ್ಟಡದಲ್ಲಿ ಹಲವು ಬಗೆಯ ಪೂಜೆ ಮಾಡಲಾಗಿದೆ. ಇದರಲ್ಲಿ ಅನೇಕ ಕಲಾವಿದರು ಭಾಗಿ ಆಗಿದ್ದಾರೆ. ನಟ ಜಗ್ಗೇಶ್​ ಕೂಡ ಆಗಮಿಸಿ ಈ ಪೂಜೆಯ ಬಗ್ಗೆ ಮಾತನಾಡಿದ್ದಾರೆ. ಇಂದು (ಆ.14) ನಡೆದ ಪೂಜೆ ದರ್ಶನ್​ ಸಲುವಾಗಿ ಮಾಡಿದ್ದು ಎಂಬ ಗುಮಾನಿ ಕೂಡ ಇದೆ. ಆ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಜಗ್ಗೇಶ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ.

‘ದರ್ಶನ್​ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ’: ಜಗ್ಗೇಶ್ ನೇರ ಮಾತು
ಜಗ್ಗೇಶ್​, ದರ್ಶನ್​
ಮದನ್​ ಕುಮಾರ್​
|

Updated on: Aug 14, 2024 | 2:36 PM

Share

ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಸೇರಿಕೊಂಡು ಇಂದು (ಆಗಸ್ಟ್​ 14) ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಪೂಜೆ, ಹೋಮ ಮುಂತಾದ್ದನ್ನು ಮಾಡಿದ್ದಾರೆ. ನವರಸ ನಾಯಕ ಜಗ್ಗೇಶ್​ ಅವರು ಈ ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಇದೇ ವೇಳೆ ನಟ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಬೇಸರದ ಸಂಗತಿ. ಅವರಿಗೆ ಕಾನೂನಿನ ಕಂಟಕ ಎದುರಾಗಿದೆ. ಆ ಸಲುವಾಗಿಯೇ ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಅನುಮಾನ ಕೆಲವರಿಗೆ ಇದೆ. ಆ ಪ್ರಶ್ನೆಗೆ ನಟ ಜಗ್ಗೇಶ್​ ಅವರು ಉತ್ತರಿಸಿದ್ದಾರೆ.

‘ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್​ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ. ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಹಾಗಾಗಿ ಅಪಾರ್ಥ ಮಾಡಿಕೊಂಡಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್​ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

‘ನಾಗದೇವರು ಸಲಹೆ ನೀಡಿದೆ. ತಂದೆ-ತಾಯಿ ಮುಂದಿನ ಪೀಳಿಗೆಗೆ ಬುದ್ಧಿ ಹೇಳುವ ರೀತಿ ಒಗ್ಗಟ್ಟಾಗಿ ಹೋಗಿ ಎಂದಿದೆ. ನಾನು ಆಧ್ಯಾತ್ಮಿಕವಾಗಿ ಇರುವವನು. ಹಾಗಾಗಿ ನಿರ್ಮಾಪಕರ ಸಂಘಕ್ಕೆ ಸಲಹೆ ನೀಡಿದ್ದೆ. ಕೆಲವರಿಗೆ ದೇವರು ಅಂದ್ರೆ ಆಗಲ್ಲ. ಅಂಥವರಿಗೆ ನಾವು ಏನೂ ಮಾಡೋಕೆ ಆಗಲ್ಲ. ದೇವರನ್ನು ನಂಬುವವರ ಮತ್ತು ನಂಬದವರ ಬೆಳವಣಿಗೆ ಹೇಗಿದೆ ಅಂತ ನೀವೇ ನೋಡಿ’ ಎಂದಿದ್ದಾರೆ ಜಗ್ಗೇಶ್​.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಪರಿಸ್ಥಿತಿ, ಹಿರಿಯ ನಟ ಜಗ್ಗೇಶ್ ಕಣ್ಣೀರು

‘ನಾನು ಮತ್ತು ರಾಕ್​ಲೈನ್​ ಅವರು ದೂರವಾಣಿಯಲ್ಲಿ ಮಾತನಾಡುವ ಈ ಪೂಜೆಯ ವಿಚಾರ ಬಂತು. ಮುಂದಿನ ಪೀಳಿಗೆ ಸಲುವಾಗಿ ನಾವು ಬಿಟ್ಟುಕೊಡಬೇಕು. ಇದಕ್ಕೆ ಚಾಲನೆ ಸಿಕ್ಕಿದೆ. ಕಲಾವಿದರಿಗೆ ಇದು ಮಾತೃಸಂಸ್ಥೆ ಆಗಬೇಕು. ಬೇರೆ ರಾಜ್ಯಗಳಲ್ಲಿ ಇದೆ. ಎಲ್ಲ ಕಲಾವಿದರ ಸದಸ್ಯತ್ವ ನೋಂದಣಿ ಮಾಡಿಸುವ ಕೆಲಸ ಆಗಬೇಕು. ಆಗ ಹಬ್ಬದ ವಾತಾವರಣ ಸೃಷ್ಟಿ ಆಗಲಿ’ ಎಂದು ಜಗ್ಗೇಶ್​ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​