‘ಒಡ್ರೋ.. ಒಡ್ರೋ’ ಹಾಡು ಹೇಳಿದ್ದ ಅಭಿಮಾನಿ ಬಳಿ ‘ಬಿಟ್ಬಿಡು ಸಾಕು’ ಎಂದು ಮನವಿ ಮಾಡಿದ್ದ ಧ್ರುವ ಸರ್ಜಾ

ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ವೇಳೆ ಫ್ಯಾನ್ಸ್ ಡೈಲಾಗ್ ಹೇಳುತ್ತಾರೆ. ಇದನ್ನು ನೋಡಿದ ಅನೇಕರು ಧ್ರುವ ಸರ್ಜಾ ಅವರಿಗೆ ಸಾಕಷ್ಟು ತಾಳ್ಮೆ ಇದೆ ಎಂದೆಲ್ಲ ಕಮೆಂಟ್ ಮಾಡಿದ್ದೂ ಇದೆ. ಈಗ ಧ್ರುವ ಸರ್ಜಾ ಅವರು ಆ ವಿಶೇಷ ಅಭಿಮಾನಿ ಬಗ್ಗೆ ಹಾಗೂ ಅವರ ಬಳಿಕ ಮಾಡಿಕೊಂಡಿದ್ದ ಮನವಿ ಬಗ್ಗೆ ಮಾತನಾಡಿದ್ದಾರೆ

‘ಒಡ್ರೋ.. ಒಡ್ರೋ’ ಹಾಡು ಹೇಳಿದ್ದ ಅಭಿಮಾನಿ ಬಳಿ ‘ಬಿಟ್ಬಿಡು ಸಾಕು’ ಎಂದು ಮನವಿ ಮಾಡಿದ್ದ ಧ್ರುವ ಸರ್ಜಾ
ಧ್ರುವ ಸರ್ಜಾ
Follow us
|

Updated on: Aug 14, 2024 | 11:40 AM

ಧ್ರುವ ಸರ್ಜಾ ಅವರ ಅಭಿಮಾನಿ ಹೇಳಿದ್ದ ‘ಒಡ್ರೋ ಒಡ್ರೋ..’ ಸಾಂಗ್ ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡನ್ನು ಟ್ರೋಲ್ ಪೇಜ್​ಗಳು ಬಳಕೆ ಮಾಡಿಕೊಳ್ಳುತ್ತಿವೆ. ಕೆಲವರು ಧ್ರುವ ಸರ್ಜಾ ಅವರಿಗೆ ಸಾಕಷ್ಟು ತಾಳ್ಮೆ ಇದೆ ಎಂದೆಲ್ಲ ಕಮೆಂಟ್ ಮಾಡಿದ್ದೂ ಇದೆ. ಈಗ ಧ್ರುವ ಸರ್ಜಾ ಅವರು ಆ ವಿಶೇಷ ಅಭಿಮಾನಿ ಬಗ್ಗೆ ಹಾಗೂ ಅವರ ಬಳಿಕ ಮಾಡಿಕೊಂಡಿದ್ದ ಮನವಿ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಟ್ರೋಲ್​ ಪೇಜ್​ಗಳಲ್ಲಿ ಧ್ರುವ ಸರ್ಜಾ ಹೇಳಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ಮನೆ ಸಮೀಪ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅನೇಕರು ಬಂದು ಸೆಲ್ಫಿ ತೆಗೆಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಹಾಡು ಹೇಳುತ್ತಾರೆ, ಡೈಲಾಗ್ ಹೊಡೆಯುತ್ತಾರೆ. ಅದೇ ರೀತಿ ಅಭಿಮಾನಿಯೋರ್ವ ಬಂದು ಸಖತ್ ಆಗಿ ಹಾಡು ಹೇಳಿದ್ದ. ಇದಕ್ಕೆ ಕೆಲವರು ರಿಮಿಕ್ಸ್ ಕೂಡ ಮಾಡಿದ್ದರು. ಅವರ ಬಳಿ ಧ್ರುವ ಸರ್ಜಾ ಅವರು ‘ಈ ಬಾರಿ ಬಿಟ್ಬಿಡು’ ಎಂಬ ಕೋರಿಕೆ ಇಟ್ಟಿದ್ದರು.

‘ಒಡ್ರೋ ಒಡ್ರೋ ಇದು ಸರ್ಜಾ ಅಡ್ಡ.. ಸರ್ಜಾ ಬಂದ್ರು ಸರ್ಜಾ ಆ್ಯಕ್ಷನ್ ಪ್ರಿನ್ಸ್ ಸರ್ಜಾ. ಹೊಡಿರಿ ನಗಾರಿ, ಊದಿರಿ ತುತ್ತೂರಿ.. ಎರಡೇ ಎರಡು ಸ್ಟೆಪ್ ಹಾಕಿ ಬಿಡೋಣ. ಜೈ ಜೈ ಶ್ರೀರಾಮ್.. ಶ್ರೀರಾಮ ಧೂತ ಹನುಮಾನ’ ಎಂಬ ಸಾಲುಗಳನ್ನು ಈ ಹಾಡು ಒಳಗೊಂಡಿತ್ತು.

ಇದನ್ನೂ ಓದಿ: ಮಾರ್ಟಿನ್ ಟ್ರೇಲರ್​ ಬಿಡುಗಡೆ: ಮುಂಬೈನಲ್ಲಿ ಧ್ರುವ ಸರ್ಜಾ ಅಬ್ಬರ; ಹೆಚ್ಚಾಯಿತು ಸಿನಿಮಾ ಹೈಪ್​ ಈ ವ್ಯಕ್ತಿ ಬಗ್ಗೆ ಧ್ರುವ ಮಾತನಾಡಿದ್ದಾರೆ. ‘ಆತ ಬಂದು ಒಂದು ಹಾಡು ಹೇಳ್ತೀನಿ ಎಂದು ಹೇಳಿದ. ಹಾಡು ಹೇಳಬೇಡ, ಸಾಕಷ್ಟು ಜನರಿದ್ದಾರೆ, ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಆದಾಗ್ಯೂ ಹಾಡು ಹೇಳಲೇ ಬೇಕು ಎಂದ. 2-3 ನಿಮಿಷ ಹಾಡು ಹೇಳಿದ. ನಾನು ನಿಲ್ಲಿಸು ಎಂದಿಲ್ಲ. ನಂತರ ಹೋದವನು 3-4 ಗಂಟೆ ಬಿಟ್ಟು ಮತ್ತೆ ಬಂದ. ಇನ್ನೊಂದು ಹಾಡು ಹೇಳಲಾ ಎಂದು ಕೇಳಿದ. ಈ ಭಾನುವಾರ ಸಾಕು ಬಿಟ್ಬಿಡು ಎಂದೆ’ ಎಂಬುದು ಧ್ರುವ ಸರ್ಜಾ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?