ಮಾರ್ಟಿನ್ ಟ್ರೇಲರ್​ ಬಿಡುಗಡೆ: ಮುಂಬೈನಲ್ಲಿ ಧ್ರುವ ಸರ್ಜಾ ಅಬ್ಬರ; ಹೆಚ್ಚಾಯಿತು ಸಿನಿಮಾ ಹೈಪ್​

ಅಭಿಮಾನಿಗಳ ಬೇಡಿಕೆಯಂತೆ ಬಹುನಿರೀಕ್ಷಿತ ಮಾರ್ಟಿನ್​ ಸಿನಿಮಾ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಅಭಿನಯಿಸಿರುವ ಈ ಚಿತ್ರ ಬರೋಬ್ಬರಿ 13 ಭಾಷೆಯಲ್ಲಿ ರಿಲೀಸ್​ ಆಗಲಿದೆ. ರವಿ ಬಸ್ರೂರು, ಸತ್ಯ ಹೆಗಡೆ, ರವಿ ವರ್ಮಾ ಅವರಂತಹ ಅತ್ಯುತ್ತಮ ತಂತ್ರಜ್ಞರು ಈ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಟ್ರೇಲರ್​ನಲ್ಲಿ ಎಲ್ಲರ ಕೆಲಸ ಎದ್ದು ಕಾಣುತ್ತಿದೆ.

ಮಾರ್ಟಿನ್ ಟ್ರೇಲರ್​ ಬಿಡುಗಡೆ: ಮುಂಬೈನಲ್ಲಿ ಧ್ರುವ ಸರ್ಜಾ ಅಬ್ಬರ; ಹೆಚ್ಚಾಯಿತು ಸಿನಿಮಾ ಹೈಪ್​
ಧ್ರುವ ಸರ್ಜಾ
Follow us
ಮದನ್​ ಕುಮಾರ್​
|

Updated on:Aug 05, 2024 | 6:16 PM

ಬಹುನಿರೀಕ್ಷಿತ ‘ಮಾರ್ಟಿನ್​’ ಸಿನಿಮಾದ ಟ್ರೇಲರ್​ ಇಂದು (ಆಗಸ್ಟ್​ 5) ಬಿಡುಗಡೆ ಆಗಿದೆ. ಇದಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದರು. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಕಳೆದ ವರ್ಷ ಟೀಸರ್​ ಮೂಲಕ ಗಮನ ಸೆಳೆದಿದ್ದ ಮಾರ್ಟಿನ್ ಚಿತ್ರತಂಡ ಈಗ ಟ್ರೇಲರ್​ ಮೂಲಕ ಹೈಪ್​ ಹೆಚ್ಚಿಸಿದೆ. ಎ.ಪಿ. ಅರ್ಜುನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಉದಯ್​ ಕೆ. ಮೆಹ್ತಾ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಲವು ಕಾರಣಗಳಿಂದ ಸದ್ದು ಮಾಡುತ್ತಾ ಬಂದಿರುವ ‘ಮಾರ್ಟಿನ್​’ ಬಳಗದವರು ಹಲವು ಭಾಷೆಯಲ್ಲಿ ಟ್ರೇಲರ್​ ಅನಾವರಣ ಮಾಡಿದ್ದಾರೆ.

21 ದೇಶಗಳ ಪತ್ರಕರ್ತರು ಮುಂಬೈಗೆ ಬಂದಿದ್ದಾರೆ. ಅವರೆಲ್ಲರ ಸಮ್ಮುಖದಲ್ಲಿ ‘ಮಾರ್ಟಿನ್​’ ಟ್ರೇಲರ್​ ಅನಾವರಣ ಆಗಿದೆ. ಇಡೀ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ತೋರಿಸುವ ರೀತಿಯಲ್ಲಿ ಟ್ರೇಲರ್​ ಸಿದ್ಧವಾಗಿದೆ. ಮೇಕಿಂಗ್​ ನೋಡಿ ಧ್ರುವ ಸರ್ಜಾ ಫ್ಯಾನ್ಸ್​ ವಾವ್​ ಎಂದಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಈ ಟ್ರೇಲರ್​ ಬಿಡುಗಡೆ ಆಗಿದ್ದು, ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

‘ಮಾರ್ಟಿನ್​’ ಸಿನಿಮಾ ಟ್ರೇಲರ್:

‘ಮಾರ್ಟಿನ್​’ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ವೈಭವಿ ಶಾಂಡಲ್ಯ ನಟಿಸಿದ್ದಾರೆ. ಖ್ಯಾತ ನಟಿ ಅನ್ವೇಶಿ ಜೈನ್​ ಕೂಡ ಅಭಿನಯಿಸಿದ್ದಾರೆ. ಹಲವು ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರವಿ ವರ್ಮಾ ಅವರು ‘ಮಾರ್ಟಿನ್​’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಇಮ್ರಾನ್​ ಸರ್ದಾರಿಯಾ, ಮುರಳಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಮುಂಬೈನಿಂದ ‘ಮಾರ್ಟಿನ್​’ ಸಿನಿಮಾದ ಟ್ರೇಲರ್​ ರಿಲೀಸ್​ ಕಾರ್ಯಕ್ರಮದ ಲೈವ್​ ವಿಡಿಯೋ ಇಲ್ಲಿದೆ ನೋಡಿ..

ಕಾರಣಾಂತರಗಳಿಂದ ‘ಮಾರ್ಟಿನ್​’ ಸಿನಿಮಾ ತಡವಾಯಿತು. ಲೇಟ್​ ಆದ್ರೂ ಲೇಟೆಸ್ಟ್​ ಎಂಬ ರೀತಿಯಲ್ಲಿ ಈ ಟ್ರೇಲರ್​ ಬಿಡುಗಡೆ ಆಗಿದೆ. ಅಕ್ಟೋಬರ್​ 11ರಂದು ಪ್ರಪಂಚದಾದ್ಯಂತ ಈ ಸಿನಿಮಾ ತೆರೆಕಾಣಲಿದೆ. ಟ್ರೇಲರ್​ ನೋಡಿದ ಬಳಿಕ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ. ಕನ್ನಡ, ಇಂಗ್ಲಿಷ್​, ಹಿಂದಿ, ಮಲಯಾಳಂ, ತೆಲುಗು, ತಮಿಳು, ಬೆಂಗಾಲಿ, ಅರೇಬಿಕ್​, ಜಪಾನೀಸ್​, ಚೈನೀಸ್​, ಕೊರಿಯನ್​, ಸ್ಪ್ಯಾನಿಶ್​, ರಷ್ಯನ್​ ಭಾಷೆಗಳಲ್ಲಿ ‘ಮಾರ್ಟಿನ್​’ ಬಿಡುಗಡೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:06 pm, Mon, 5 August 24