ನಟ ದರ್ಶನ್ಗೆ ಶಾಕ್; ಅತ್ಯುತ್ತಮ ಚಿತ್ರಕ್ಕೆ ಸಿಗಲೇ ಇಲ್ಲ ಅವಾರ್ಡ್
2023ರ ಕೊನೆಯಲ್ಲಿ ರಿಲೀಸ್ ಆದ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಲ್ಲಿ ದರ್ಶನ್ ಅತ್ಯುತ್ತಮ ನಟನೆ ತೋರಿದ್ದರು. ಆದಾಗ್ಯೂ ಈ ಚಿತ್ರಕ್ಕೆ ಅವಾರ್ಡ್ ಮಿಸ್ ಆಗಿದೆ. ‘ಫಿಲ್ಮ್ ಫೇರ್ ಸೌತ್’ ಪ್ರಶಸ್ತಿ ಈ ಚಿತ್ರಕ್ಕೆ ಸಿಕ್ಕಿಲ್ಲ.
ನಟ ದರ್ಶನ್ ಅವರು ‘ಕಾಟೇರ’ ಸಿನಿಮಾದಲ್ಲಿ ನಟಿಸಿ ಜನಮನ ಗೆದ್ದರು. ಅದು ಅವರು ಮಾಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈಗ ದರ್ಶನ್ ಅವರು ಜೈಲು ಸೇರಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಇದು ವೈಯಕ್ತಿಕ ಜೀವನದಲ್ಲಿ ಅವರಿಗೆ ಸಿಕ್ಕ ಶಾಕ್. ಈಗ ನಟನಾಗಿ ಅವರಿಗೆ ಬೇಸರ ಆಗುವಂಥ ಘಟನೆ ನಡೆದಿದೆ. 2024ನೇ ಸಾಲಿನ ‘ಫಿಲ್ಮ್ಫೇರ್ ಸೌತ್’ನಲ್ಲಿ ಅವರಿಗಾಗಲೀ, ಅವರ ಚಿತ್ರಕ್ಕಾಗಲಿ ಯಾವುದೇ ಅವಾರ್ಡ್ ಸಿಕ್ಕಿಲ್ಲ.
‘ಅತ್ಯುತ್ತಮ ನಟ’, ‘ಅತ್ಯುತ್ತಮ ಸಿನಿಮಾ’, ‘ಅತ್ಯುತ್ತಮ ನಿರ್ದೇಶನ’ ಸೇರಿ ಏಳು ವಿಭಾಗಗಳಲ್ಲಿ ‘ಕಾಟೇರ’ ನಾಮ ನಿರ್ದೇಶನಗೊಂಡಿತ್ತು. ಆದರೆ, ಅವರ ನಟನೆಯ ಸಿನಿಮಾಗಳಿಗೆ ಪ್ರಶಸ್ತಿ ಲಭ್ಯವಾಗಲೇ ಇಲ್ಲ. ಇದು ಅವರಿಗೆ ಹಾಗೂ ಅವರ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
‘ಕಾಟೇರ’ ಸಿನಿಮಾದಲ್ಲಿ ದರ್ಶನ್ ಅತ್ಯುತ್ತಮ ನಟನೆ ತೋರಿದ್ದರು. ಹೀಗಾಗಿ, ಅವರಿಗೆ ಅತ್ಯುತ್ತಮ ನಟ ಅವಾರ್ಡ್ ಪಕ್ಕಾ ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಅವಾರ್ಡ್ ನಟ ರಕ್ಷಿತ್ ಶೆಟ್ಟಿ ಪಾಲಾಗಿದೆ. ಇನ್ನು, ಅತ್ಯುತ್ತಮ ಸಿನಿಮಾ ಅವಾರ್ಡ್ ಬಗ್ಗೆಯೂ ಫ್ಯಾನ್ಸ್ಗೆ ನಿರೀಕ್ಷೆ ಇತ್ತು. ಈ ಪ್ರಶಸ್ತಿ ‘ಡೇರ್ ಡೆವಿಲ್ ಮುಸ್ತಫಾ’ ಪಾಲಾಗಿದೆ. ಭಾವೈಕ್ಯತೆ ಸಾರುವ ಕಥೆಯನ್ನು ಈ ಚಿತ್ರ ಹೊಂದಿದೆ. ಇನ್ನು, ಅತ್ಯುತ್ತಮ ನಿರ್ದೇಶನ ಅವಾರ್ಡ್ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಕೈ ಸೇರಿದೆ.
ಇದನ್ನೂ ಓದಿ: SIIMA 2024: ಅತ್ಯುತ್ತಮ ಸಿನಿಮಾ ರೇಸ್ನಲ್ಲಿ ಕಾಟೇರ-ಕ್ರಾಂತಿ, ಅತ್ಯುತ್ತಮ ನಟ ಲಿಸ್ಟ್ನಲ್ಲಿ ದರ್ಶನ್
ಈ ಮಧ್ಯೆ ದರ್ಶನ್ ಅವರು ಈ ಮೊದಲು ಅವಾರ್ಡ್ಗಳ ಬಗ್ಗೆ ಹೇಳಿದ್ದ ಡೈಲಾಗ್ ಕೂಡ ವೈರಲ್ ಆಗಿದೆ. ‘ಪ್ರಶಸ್ತಿಗಳು ಕೊಡೋದಲ್ಲ, ದುಡ್ಡು ಕೊಟ್ಟು ಖರೀದಿ ಮಾಡಬೇಕು’ ಎಂದು ಅವರು ಹೇಳಿದ್ದರು. ಈಗ ‘ಕಾಟೇರ’ ಚಿತ್ರಕ್ಕೆ ಯಾವುದೇ ಅವಾರ್ಡ್ ಸಿಗದ ಕಾರಣ ದರ್ಶನ್ ಫ್ಯಾನ್ಸ್ ಈ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.