SIIMA 2024: ಅತ್ಯುತ್ತಮ ಸಿನಿಮಾ ರೇಸ್ನಲ್ಲಿ ಕಾಟೇರ-ಕ್ರಾಂತಿ, ಅತ್ಯುತ್ತಮ ನಟ ಲಿಸ್ಟ್ನಲ್ಲಿ ದರ್ಶನ್
2024ನೇ ಸಾಲಿನ ಸೈಮಾ ಅವಾರ್ಡ್ಸ್ನ ನಾಮಿನೇಷನ್ ಪಟ್ಟಿ ಹೊರ ಬಿದ್ದಿದೆ. ‘ಕಾಟೇರ’ ಎಂಟು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ.
2024ನೇ ಸಾಲಿನ ಸೈಮಾ (SIIMA 2024) ಅವಾರ್ಡ್ಸ್ನ ನಾಮಿನೇಷನ್ ಪಟ್ಟಿ ಹೊರ ಬಿದ್ದಿದೆ. 2023ರಲ್ಲಿ ರಿಲೀಸ್ ಆದ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿ ಇವೆ. ದಕ್ಷಿಣ ಭಾರತದ ಸಿನಿಮಾಗಳಿಗಾಗಿ ವಿಶೇಷವಾಗಿ ಆರಂಭಿಸಿದ ಅವಾರ್ಡ್ ಕಾರ್ಯಕ್ರಮ ಇದಾಗಿದೆ. ಈ ಬಾರಿ ಸೈಮಾ ನಾಮಿನೇಷನ್ನಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸದ್ಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಮಾತ್ರ ಸೈಮಾದವರು ರಿಲೀಸ್ ಮಾಡಿದ್ದಾರೆ. ‘ಕಾಟೇರ’ ಎಂಟು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ಅತ್ಯುತ್ತಮ ನಟ
ದರ್ಶನ್- ಕಾಟೇರ
ಧನಂಜಯ- ಗುರುದೇವ ಹೊಯ್ಸಳ
ರಾಜ್ ಬಿ ಶೆಟ್ಟಿ-ಟೋಬಿ
ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2
ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
ಶಿವರಾಜ್ಕುಮಾರ್- ಘೋಸ್ಟ್
In Kannada, ‘Kaatera’ directed by Tharun Sudhir, starring Darshan and Aradhana Ram is leading with 8 nominations while ‘Sapta Saagaradaache Ello – Side A’, starring Rakshit Shetty and Rukmini Vasanth, follows closely with 7 Nominations. #NEXASIIMA #SIIMAinDubai #SIIMA2024 pic.twitter.com/IuLAppLSQT
— SIIMA (@siima) July 16, 2024
ಅತ್ಯುತ್ತಮ ಸಿನಿಮಾ
ಆಚಾರ್ ಆ್ಯಂಡ್ ಕೋ
ಕಾಟೇರ
ಕೌಸಲ್ಯ ಸುಪ್ರಜಾ ರಾಮ
ಕ್ರಾಂತಿ
ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ
ಇದನ್ನೂ ಓದಿ: ಜೈಲು ಊಟದಿಂದ ದರ್ಶನ್ಗೆ ಆಗಿದೆ ಹಲವು ಆರೋಗ್ಯ ಸಮಸ್ಯೆ; ಇಲ್ಲಿದೆ ವಿವರ
ಅವಾರ್ಡ್ ಎಲ್ಲಿ?
ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಕಾರ್ಯಕ್ರಮ ಜರುಗಲಿದೆ. ಕನ್ನಡದ ಬಹುತೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಅದೇ ರೀತಿ ತಮಿಳು, ಮಲಯಾಳಂ ಹಾಗೂ ತೆಲುಗು ಇಂಡಸ್ಟ್ರಿಯವರು ಕೂಡ ಬರಲಿದ್ದಾರೆ.