ರಜನಿಕಾಂತ್ (Rajinikanth) ನಟನೆಯ ‘ಚಂದ್ರಮುಖಿ’ ಸಿನಿಮಾ ಯಶಸ್ಸು ಕಂಡಿತ್ತು. ‘ಆಪ್ತಮಿತ್ರ’ ಸಿನಿಮಾದ ರಿಮೇಕ್ ಇದಾಗಿದೆ. ಈಗ ‘ಚಂದ್ರಮುಖಿ 2’ ಸಿನಿಮಾ (Chandramukhi 2) ರಿಲೀಸ್ಗೆ ರೆಡಿ ಇದೆ. ಸೆಪ್ಟೆಂಬರ್ 28ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಎರಡನೇ ಪಾರ್ಟ್ನಲ್ಲಿ ರಜನಿಕಾಂತ್ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಅವರು ಈ ಸರಣಿಯ ಮೂರನೇ ಪಾರ್ಟ್ನಲ್ಲಿ ನಟಿಸೋಕೆ ರೆಡಿ ಆಗಿದ್ದಾರೆ. ಇದಕ್ಕೆ ಅವರು ಕೆಲವು ಷರತ್ತುಗಳನ್ನು ಕೂಡ ಹಾಕಿದ್ದಾರೆ. ಆ ಷರತ್ತುಗಳನ್ನು ತಂಡ ಪೂರೈಸಿದರೆ ಅವರು ಸಿನಿಮಾದಲ್ಲಿ ನಟಿಸಲಿದ್ದಾರೆ.
ಯಾವುದೇ ಸಿನಿಮಾ ಹಿಟ್ ಆದರೆ ಅದಕ್ಕೆ ಸೀಕ್ವೆಲ್ ಬರುತ್ತದೆ. ‘ಚಂದ್ರಮುಖಿ’ ಯಶಸ್ಸಿನ ಬಳಿಕ ‘ಚಂದ್ರಮುಖಿ 2’ ಸಿನಿಮಾ ಬರುತ್ತಿದೆ. ಇದಾದ ಬಳಿಕ ‘ಚಂದ್ರಮುಖಿ 3’ ಸಿದ್ಧಪಡಿಸಲು ಪಿ. ವಾಸು ಅವರು ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಅವರು ಮರಳಲಿದ್ದಾರೆ. ಇದಕ್ಕೆ ಅವರು ಹಲವು ಕಂಡೀಷನ್ ಹಾಕಿದ್ದಾರೆ ಎಂದು ವರದಿ ಆಗಿದೆ.
ರಜನಿಕಾಂತ್ಗೆ ಈಗ 72 ವರ್ಷ ವಯಸ್ಸು. ಅವರು ಈಗ ಸಿನಿಮಾ ಆಯ್ಕೆ ಮಾಡಿಕೊಂಡು ನಟಿಸುತ್ತಾರೆ ಎಂದರೆ ಅದು ಅಷ್ಟು ಒಳ್ಳೆಯ ಕಥೆಯನ್ನು ಹೊಂದಿರಬೇಕು. ‘ಚಂದ್ರಮುಖಿ 3’ ಮಾಡೋಕೆ ರಜನಿ ಹಾಕಿರುವ ಕಂಡಿಷನ್ ಸಿಂಪಲ್ ಆಗಿದೆ. ಮೊದಲನೆಯದು, ‘ಚಂದ್ರಮುಖಿ 2’ ಸಿನಿಮಾ ಗೆಲ್ಲಬೇಕು. ಎರಡನೆಯದು, ‘ಚಂದ್ರಮುಖಿ 3’ ಸಿನಿಮಾದ ಕಥೆ ಉತ್ತಮವಾಗಿರಬೇಕು. ಇದೆರಡು ಕಂಡೀಷನ್ ಪಾಸ್ ಆದರೆ ಅವರು ಮೂರನೇ ಪಾರ್ಟ್ನ ಭಾಗವಾಗಲಿದ್ದಾರೆ.
‘ಚಂದ್ರಮುಖಿ’ ಚಿತ್ರಕ್ಕೂ ‘ಚಂದ್ರಮುಖಿ 2’ ಚಿತ್ರಕ್ಕೂ ಸಣ್ಣ ಕನೆಕ್ಷನ್ ಇದೆ ಎಂದು ನಿರ್ದೇಶಕ ಪಿ. ವಾಸು ಅವರು ಹೇಳಿಕೊಂಡಿದ್ದರು. ಅದು ಯಾವ ರೀತಿಯ ಕನೆಕ್ಷನ್ ಎಂಬುದನ್ನು ಕಾದು ನೋಡಬೇಕಿದೆ. ‘ಚಂದ್ರಮುಖಿ 2’ ಚಿತ್ರದಲ್ಲಿ ಕಂಗನಾ ರಣಾವತ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: ‘ರಜನಿಕಾಂತ್ ತಮಿಳು ಪರ ಎಂದರೆ ರಾಜ್ಯಕ್ಕೆ ಕಾಲಿಡಕೂಡದು’; ವಾಟಾಳ್ ನಾಗರಾಜ್
ರಜನಿಕಾಂತ್ ಅವರು ಸದ್ಯ ‘ಜೈಲರ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ಒಟಿಟಿಯಲ್ಲಿ ರಿಲೀಸ್ ಆಗಿ ಚಿತ್ರ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನೂ ಮೀರಿ ಚಿತ್ರ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ