Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್​; ಅವರ ಕೊನೆಯ ಚಿತ್ರ ಯಾವುದು?

|

Updated on: May 27, 2021 | 5:13 PM

ರಜನಿಕಾಂತ್​ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಹಲವು ವರ್ಷಗಳಿಂದ ಪ್ರಚಲಿತದಲ್ಲಿತ್ತು. ಈ ವರ್ಷ ಅದು ಕೊನೆಗೂ ಸಂಪೂರ್ಣಗೊಳ್ಳುವುದರಲ್ಲಿತ್ತು. ಆದರೆ, ಆ ಸಮಯದಲ್ಲಿ ಅವರು ಆಸ್ಪತ್ರೆಗೆ ದಾಖಲಾದರು.

Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್​; ಅವರ ಕೊನೆಯ ಚಿತ್ರ ಯಾವುದು?
ರಜನೀಕಾಂತ್
Follow us on

ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಗಣನೀಯ ಸೇವೆ ನೀಡಿದ ನಟ ರಜನಿಕಾಂತ್​ ಅವರಿಗೆ ಈಗ ಆರೋಗ್ಯ ಕೈಕೊಟ್ಟಿದೆ. ಮೊದಲಿನಷ್ಟು ಜೋಶ್​ ಈಗ ಅವರಲ್ಲಿ ಉಳಿದಿಲ್ಲ. ಕೆಲ ಆ್ಯಕ್ಷನ್​ ದೃಶ್ಯಗಳನ್ನು ಶೂಟ್​ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ. ಈಗ ರಜನಿಕಾಂತ್​ ಚಿತ್ರರಂಗದಿಂದ ನಿವೃತ್ತಿ ಹೊಂದುವ ಬಗ್ಗೆ ಮೌನ ಮುರಿದಿದ್ದಾರೆ.

ರಜನಿಕಾಂತ್​ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಹಲವು ವರ್ಷಗಳಿಂದ ಪ್ರಚಲಿತದಲ್ಲಿತ್ತು. ಈ ವರ್ಷ ಅದು ಕೊನೆಗೂ ಸಂಪೂರ್ಣಗೊಳ್ಳುವುದರಲ್ಲಿತ್ತು. ಆದರೆ, ಆ ಸಮಯದಲ್ಲಿ ಅವರು ಆಸ್ಪತ್ರೆಗೆ ದಾಖಲಾದರು. ಈ ಮೂಲಕ ಪಕ್ಷ ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿದರು. ಈಗ ಅವರು ಚಿತ್ರರಂಗದಿಂದಲೂ ದೂರ ಸರಿಯುತ್ತಾರೆ ಎನ್ನಲಾಗಿದೆ.

‘ಅಣ್ಣಾಥೆ’ ಸಿನಿಮಾದ ಶೂಟಿಂಗ್​ಗಾಗಿ ರಜನಿಕಾಂತ್​ ಹೈದರಾಬಾದ್​ಗೆ ತೆರಳಿದ್ದರು. ಒಂದು ತಿಂಗಳ ಕಾಲ ಅಲ್ಲಿಯೇ ಇದ್ದು, ಶೂಟ್​ ಪೂರ್ಣಗೊಳಿಸಿದ್ದಾರೆ. ಕುಂಬಳಕಾಯಿ ಒಡೆಯುವ ದಿನ ಅಣ್ಣಾಥೆ ತಂಡದ ಕೆಲವರ ಜತೆ ರಜನಿಕಾಂತ್​ ತುಂಬಾನೇ ಭಾವುಕರಾಗಿ ಮಾತನಾಡಿದ್ದರಂತೆ.

ಆರೋಗ್ಯ ಪದೇ ಪದೇ ಕೈಕೊಡುತ್ತಿರುವುದು ರಜನಿಕಾಂತ್​ ಆತಂಕಕ್ಕೆ ಕಾರಣವಾಗಿದೆ. ಹಾಗಂತ ಅವರಿಗೆ ಅಭಿಮಾನಿಗಳಿಗೆ ನಿರಾಸೆ ಮಾಡುವ ಉದ್ದೇಶ ಇಲ್ಲ. ಹೀಗಾಗಿ, ದೇಹ ಸ್ಪಂದಿಸಿದರೆ ಶೀಘ್ರವೇ ಒಂದೆರಡು ಚಿತ್ರಗಳ ಶೂಟಿಂಗ್​ ಮುಗಿಸುವ ಆಲೋಚನೆ ಅವರದ್ದು. ಒಂದೊಮ್ಮೆ ಆರೋಗ್ಯ ಹದಗೆಟ್ಟರೆ ‘ಅಣ್ಣಾಥೆ’ ಅವರ ಕೊನೆಯ ಚಿತ್ರವಾಗಲಿದೆ.

ಐದು ದಶಕಗಳ ಕಾಲ ಸಿನಿಮಾರಂಗದಲ್ಲಿ ಶ್ರಮಿಸಿದ ರಜನಿಕಾಂತ್​ 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಸಾಕಷ್ಟು ಚಿತ್ರಗಳು ಸೂಪರ್​ ಹಿಟ್​ ಆಗಿವೆ. ಈಗಲೂ ರಜನಿಕಾಂತ್​ ಫ್ಯಾನ್ಸ್​ ಬಳಗ ತುಂಬಾನೇ ದೊಡ್ಡದಿದೆ. ಹೀಗಾಗಿ, ಅವರ ಆರೋಗ್ಯ ಉತ್ತಮವಾಗಿರಲಿ ಎಂಬುದು ಅಭಿಮಾನಿಗಳ ಆಶಯ.

ಅಣ್ಣಾಥೆ ಸಿನಿಮಾಗೆ ವಿಶ್ವಾಸಮ್​ ಖ್ಯಾತಿ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಪ್ರಕಾಶ್​ ರಾಜ್​ ಮತ್ತು ಖುಷ್ಬೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್