‘ಧರ್ಮನ್’ ಚಿತ್ರದಲ್ಲಿ ನಿರ್ದೇಶಕರಿಗೆ ಅಸಿಸ್ಟಂಟ್ ಆದ ರಜನಿಕಾಂತ್

ತಮಿಳು ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರ 'ಧರ್ಮನ್' ಚಿತ್ರಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ನೀಡಿದ ವಿನಮ್ರ ಬೆಂಬಲ ಅಭಿಮಾನಿಗಳ ಮನ ಗೆದ್ದಿದೆ. ಭಾರತೀಯ ಚಿತ್ರರಂಗದ ದೈತ್ಯ ತಾರೆಯಾದರೂ, ರಜನಿ ಅವರು ಅಶ್ವತ್ಥ್ ಅವರಿಗೆ ಸಹಾಯಕನಂತೆ ಸಲಹೆ ನೀಡಿದ್ದು, ಅವರ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿ ಭಾರೀ ನಿರೀಕ್ಷೆ ಮೂಡಿಸಿದೆ.

‘ಧರ್ಮನ್’ ಚಿತ್ರದಲ್ಲಿ ನಿರ್ದೇಶಕರಿಗೆ ಅಸಿಸ್ಟಂಟ್ ಆದ ರಜನಿಕಾಂತ್
ರಜಿನಿ
Edited By:

Updated on: Jun 25, 2026 | 11:48 AM

ಮುಖ್ಯಾಂಶಗಳು

  • ಸೂಪರ್‌ಸ್ಟಾರ್ ಆಗಿದ್ದರೂ ನಿರ್ದೇಶಕ ಅಶ್ವತ್ಥ್ ಎದುರು ಅತ್ಯಂತ ವಿನಮ್ರವಾಗಿ ನಡೆದುಕೊಂಡ ರಜನೀಕಾಂತ್
  • ಕಮಲ್ ಹಾಸನ್ ಬ್ಯಾನರ್‌ನ ಚಿತ್ರವಾದ್ದರಿಂದ ನನ್ನನ್ನು ನಿಮ್ಮ ಅಸಿಸ್ಟೆಂಟ್ ಎಂದುಕೊಳ್ಳಿ ಎಂದ ರಜನಿ
  • ಸಿಮ್ರಾನ್ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರದ ಪೋಸ್ಟರ್ ರಿಲೀಸ್

ತಮಿಳು ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ‘ಧರ್ಮನ್’ ಚಿತ್ರದ ಕುರಿತು ರಜನಿ ಹೇಳಿದ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ. ಈ ಚಿತ್ರದ ಪೋಸ್ಟರ್ ಜೂನ್ 24ರಂದು ರಿಲೀಸ್ ಆಗಿ ಗಮನ ಸೆಳೆದಿದೆ.

ರಜನಿಕಾಂತ್ ಸರಳತೆ

ಅಶ್ವತ್ಥ್ ಪ್ರಕಾರ ರಜನಿಕಾಂತ್ ಅವರು ಭಾರತೀಯ ಚಿತ್ರರಂಗದ ಇಷ್ಟು ದೊಡ್ಡ ತಾರೆಯಾಗಿದ್ದರೂ ಅತ್ಯಂತ ವಿನಮ್ರವಾಗಿ ನಡೆದುಕೊಂಡಿದ್ದಾರಂತೆ. ಅವರು ಈ ಪ್ರಾಜೆಕ್ಟ್‌ಗೆ ತಾವೇ ಮುಂದೆ ಬಂದು ಬೆಂಬಲ ಸೂಚಿಸಿದ್ದಾರೆ ಎಂದು ಅಶ್ವತ್ಥ್ ವಿವರಿಸಿದ್ದಾರೆ.

‘ನಾವು ಯಾವುದೇ ಪರಿಸ್ಥಿತಿಯಲ್ಲೂ ಗೆಲ್ಲಲೇಬೇಕು. ನಾವು ಈ ಸಿನಿಮಾವನ್ನು ಕಮಲ್ ಹಾಸನ್ ಅವರ ಆರ್‌ಕೆಎಫ್‌ಐ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದೇವೆ. ಆದ್ದರಿಂದ ನನ್ನನ್ನು ನಿಮ್ಮ ಅಸಿಸ್ಟೆಂಟ್ ಎಂದು ಅಂದುಕೊಳ್ಳಿ. ನಾನು ಕೆಲವು ಸಲಹೆಗಳನ್ನು ನೀಡುತ್ತೇನೆ. ಅವುಗಳನ್ನು ಸ್ವೀಕರಿಸುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು’ ಎಂದು ರಜನಿ ಸಲಹೆ ನೀಡಿದ್ದಾಗಿ ಅಶ್ವತ್ಥ್​ ವಿವರಿಸಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ರಜನಿಕಾಂತ್ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿವೆ. ಅವರ ಡೌನ್ ಟು ಅರ್ಥ್ ಸ್ವಭಾವಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಯುವ ನಿರ್ದೇಶಕನ ಕಲ್ಪನೆಗೆ ರಜನಿ ನೀಡಿದ ಗೌರವವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಚಿತ್ರದ ಹಿನ್ನೆಲೆ ‘ಧರ್ಮನ್’ ಚಿತ್ರವನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸದ್ಯ ಭಾರೀ ನಿರೀಕ್ಷೆ ಮೂಡಿಸಿದೆ. ನಟಿಯರಾದ ಸಿಮ್ರಾನ್ ಮತ್ತು ರಾಶಿ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us