ಭಾರತದ ಯುವ ಜನತೆ ಬಗ್ಗೆ ರಜನಿಕಾಂತ್​ಗೆ ಶುರುವಾಗಿದೆ ಆತಂಕ; ಪಾಶ್ಚಿಮಾತ್ಯರನ್ನು ಹೊಗಳಿದ ನಟ

ರಜನಿಕಾಂತ್ ಅವರು ಇತ್ತೀಚೆಗೆ ಯುವ ಜನತೆಯು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ತೋರುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅವರು ಎತ್ತಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಭಾರತೀಯ ಆಧ್ಯಾತ್ಮದಲ್ಲಿ ಆಸಕ್ತಿ ತೋರುತ್ತಿರುವುದರ ಬಗ್ಗೆ ಹೇಳಿದ್ದಾರೆ. ಅವರ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ.

ಭಾರತದ ಯುವ ಜನತೆ ಬಗ್ಗೆ ರಜನಿಕಾಂತ್​ಗೆ ಶುರುವಾಗಿದೆ ಆತಂಕ; ಪಾಶ್ಚಿಮಾತ್ಯರನ್ನು ಹೊಗಳಿದ ನಟ
ರಜಿನಿಕಾಂತ್

Updated on: May 02, 2025 | 8:51 AM

ನಟ ರಜನಿಕಾಂತ್ (Rajinikanth) ಇತ್ತೀಚೆಗೆ ಸಂಪೂರ್ಣವಾಗಿ ಬದಲಾಗಿದ್ದಾರೆ. ಅಧ್ಯಾತ್ಮದ ಬಗ್ಗೆ ಅವರಿಗೆ ಸಾಕಷ್ಟು ಒಲವು ಬಂದಿದೆ. ಅವರು ಪ್ರತಿ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ಹಿಮಾಲಯಕ್ಕೆ ತೆರಳಿ ಧ್ಯಾನ ಮಾಡುತ್ತಾರೆ. ಅವರು ರಾಜಕೀಯ ಪಕ್ಷವನ್ನು ಆರಂಭಿಸಿ, ಚುನಾವಣೆಗೆ ಸ್ಪರ್ಧಿಸುವ ಕನಸನ್ನೂ ಕಂಡಿದ್ದರು. ಆದರೆ, ಈಗ ಅದನ್ನು ಕೈ ಬಿಟ್ಟಿದ್ದಾರೆ. ಈ ಮಧ್ಯೆ ರಜನಿಕಾಂತ್ ಅವರು ಯುವ ಜನತೆಗೆ ಬಗ್ಗೆ ಆತಂಕ ಹೊರಹಾಕಿದ್ದಾರೆ. ಆ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ.

ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದೆ. ಆದರೆ, ಕೆಲವರು ಇದರಿಂದ ದೂರ ಆಗುತ್ತಿರುವ ಭಯ ರಜನಿಕಾಂತ್​ಗೆ ಕಾಣಿಸಿದೆ. ಪತ್ನಿ ಲತಾ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದಕ್ಕೆ ರಜನಿಕಾಂತ್ ಅವರು ವಿಡಿಯೋ ಸಂದೇಶ ನೀಡಿದ್ದಾರೆ.  ‘ನಾವು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮುಳುಗಿದ್ದೇವೆ. ಆದರೆ, ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿ ಮತ್ತು ಧ್ಯಾನದಲ್ಲಿ ಶಾಂತಿಯನ್ನು ಕಂಡುಕೊಳ್ಳುತ್ತಾ ಇದ್ದಾರೆ’ ಎಂದು ರಜನಿಕಾಂತ್ ಹೇಳಿದ್ದಾರೆ.

‘ಈ ಮೊಬೈಲ್ ಫೋನ್ ಯುಗದಲ್ಲಿ, ಯುವಕರು ಮತ್ತು ಕೆಲವು ವಯಸ್ಕರಿಗೆ ನಮ್ಮ ದೇಶದ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ತಿಳಿದಿಲ್ಲ. ಅವರು ನಮ್ಮ ದೇಶದ ವೈಭವ ಮತ್ತು ಶ್ರೇಷ್ಠತೆಯ ಬಗ್ಗೆ ತಿಳಿಯದೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ’ ಎಂದು ರಜನಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?
ಇಲ್ಲಿಗೆ ಬರಲು ನಾನೊಬ್ಬನೇ ಕಾರಣವಲ್ಲ; ಹಲವರಿಗೆ ಕ್ರೆಡಿಟ್ ಕೊಟ್ಟ ಅಲ್ಲು
ಅಜಿತ್​ಗೆ ಸಾವಿನ ಬಗ್ಗೆ ಶುರುವಾಗಿದೆ ಭಯ? ವಿಚಿತ್ರವಾಗಿ ಮಾತನಾಡಿದ ನಟ

‘ಪಾಶ್ಚಿಮಾತ್ಯರು ತಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಂಡುಕೊಳ್ಳಲಾಗದ ಕಾರಣ ಭಾರತದತ್ತ ಮುಖ ಮಾಡುತ್ತಾ ಇದ್ದಾರೆ. ಭಾರತವು ಅವರಿಗೆ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳುವ ಸ್ಥಳವಾಗಿದೆ. ಧ್ಯಾನ ಮತ್ತು ಯೋಗವನ್ನು ಅವರು ಅಭ್ಯಾಸ ಮಾಡುತ್ತಾ ಇದ್ದಾರೆ. ಲತಾ ಈಗ ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದೇವರು ಅವರ ಪ್ರಯತ್ನಗಳನ್ನು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ರಜನಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಎಷ್ಟು ಮಾನವೀಯತೆ ಮೆರೆಯುತ್ತಾರೆ ನೋಡಿ; ಈ ವಿಡಿಯೋನೇ ಸಾಕ್ಷಿ

ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಅಲ್ಲದೆ, ನೆಲ್ಸನ್ ದಿಲೀಪ್ ಕುಮಾರ್ ನಟನೆಯ ‘ಜೈಲರ್ 2’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ‘ಕೂಲಿ’ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ‘ಜೈಲರ್ 2’ ರಿಲೀಸ್ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.