ಯಾವುದೇ ಒಂದು ಸಿನಿಮಾ ಜನರ ಮೆಚ್ಚುಗೆ ಪಡೆಯಬೇಕಂದ್ರೆ, ಹಿಟ್ ಆಗಬೇಕಂದ್ರೆ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಪರಿಶ್ರಮ ಕೂಡ ಅತಿ ಮುಖ್ಯವಾಗಿರುತ್ತೆ. ಸಿನಿಮಾ ಸೂಪರ್ ಹಿಟ್ ಆಯ್ತು ಅಂದ್ರೆ ಸಾಕು ನಟ-ನಟಿಯರ ಜೀವನವೇ ಬದಲಾಗಿ ಬಿಡುತ್ತೆ. ಸಿನಿಮಾಗಳ ಆಫರ್ಗಳು ಹೆಚ್ಚಾಗುತ್ತವೆ. ಅವರ ಸಂಭಾವನೆ ಹೆಚ್ಚಾಗುತ್ತೆ. ಆದ್ರೆ ಅಂತಹ ಸೂಪರ್ ಹಿಟ್ ಸಿನಿಮಾ ಮಾಡಲು ನಟ, ನಟಿ, ನಿರ್ಮಾಪಕ ಹೊರತು ಪಡಿಸಿ ಸಿನಿಮಾ ಚನ್ನಾಗಿ ಮೂಡಿ ಬರಲು ಅದರ ಹಿಂದೆ ಕೆಲಸ ಮಾಡಿದವರ ಪರಿಶ್ರಮಕ್ಕೆ ತನ್ನ ಫಲ ಸಿಗೋದು ತುಂಬಾನೇ ಕಷ್ಟ. ಪರದೆ ಹಿಂದೆ ಕೆಲಸ ಮಾಡಿ ಸಿನಿಮಾ ಯಶಸ್ಸಿಗೆ ಕಾರಣರಾಗುವವರನ್ನೂ ಯಾರು ಗುರುತಿಸುವುದಿಲ್ಲ. ಆದ್ರೆ ತೆಲುಗು ನಟ ರಾಮ್ ಚರಣ್(Ram Charan) ತನ್ನ ಸಿನಿಮಾ ಯಶಸ್ಸು ಕಂಡ ಹಿನ್ನೆಲೆ ಚಿತ್ರ ತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ.
ತೆರೆಕಂಡ ಎರಡನೇ ವಾರದಲ್ಲಿ ರಾಜಮೌಳಿ ನಿರ್ದೇಶನದ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘RRR’ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. 1000 ಕೋಟಿ ಕ್ಲಬ್ಗೆ ಸಮೀಪದಲ್ಲಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮಿಂಚಿರುವ ನಟ ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ಸದ್ಯ ನಟ ರಾಮ್ ಚರಣ್ ತಮ್ಮ ಸಿನಿಮಾ ದಾಖಲೆಗಳನ್ನು ಬರೆದು ಯಶಸ್ಸು ಕಾಣುತ್ತಿರುವ ಹಿನ್ನೆಲೆ ಇಡೀ ಚಿತ್ರತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ. ತೆರೆ ಮರೆಯಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ಚಿತ್ರತಂಡದ ಸದಸ್ಯರಿಗೆ ಚಿನ್ನದ ನಾಣ್ಯ ನೀಡಿ ತಮ್ಮ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಚಿತ್ರ ತಂಡಕ್ಕೆ ಚಿನ್ನದ ನಾಣ್ಯ ನೀಡಿದ ರಾಮ್ ಚರಣ್
ರಾಮ್ ಚರಣ್ ಮೊದಲಿಗೆ ಸದಸ್ಯರನ್ನು ಹೈದರಾಬಾದ್ನ ಮನೆಗೆ ಊಟಕ್ಕೆ ಆಹ್ವಾನಿಸಿ, ಅವರಿಗೆ ಆತಿಥ್ಯ ನೀಡಿ ಸಿಹಿ ಮತ್ತು ಚಿನ್ನದ ನಾಣ್ಯಗಳನ್ನು ನೀಡಿದ್ದಾರೆ. ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುವ 11.6 ಗ್ರಾಂನ ಚಿನ್ನದ ನಾಣ್ಯ ನೀಡಿದ್ದಾರೆ. ಒಟ್ಟು 18 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
‘RRR’ ಸಿನಿಮಾ ರಾಮ್ ಚರಣ್ ವೃತ್ತಿ ಜೀವನದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಹಿಟ್ ಸಿನಿಮಾ ಎನಿಸಿಕೊಂಡಿದೆ. ಅಲ್ಲದೆ ರಾಮ್ ಚರಣ್ರ ನಟನೆಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರಶಂಸೆ ಕೇಳಿ ಬಂದಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಲು ಸಹಕರಿಸಿದ ಇಡೀ ಚಿತ್ರ ತಂಡಕ್ಕೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಸದ್ಯ ರಾಮ್ ಚರಣ್ ನೀಡಿರುವ ಚಿನ್ನದ ನಾಣ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಚಿನ್ನದ ನಾಣ್ಯದ ಒಂದು ಕಡೆ ರಾಮ್ ಚರಣ್ ಎಂದು ಬರೆದಿದ್ದು ಮತ್ತೊಂದೆಡೆ ‘RRR’ ಎಂದು ಬರೆಯಲಾಗಿದೆ. ಈ ಒಂದು ಚಿನ್ನದ ನಾಣ್ಯ 11.6 ಗ್ರಾಂ ಇದೆ ಎನ್ನಲಾಗುತ್ತಿದೆ. ಈ ಚಿನ್ನದ ನಾಣ್ಯ ಸಿನಿಮಾಕ್ಕೆ ಕೆಲಸ ಮಾಡಿದ ಕೆಳ ಹಂತದ ಸಿಬ್ಬಂದಿಗೆ ಮಾತ್ರವೇ ನೀಡಲಾಗುತ್ತಿದೆ. ಅಸಿಸ್ಟೆಂಟ್ ನಿರ್ದೇಶಕರಿಗೆ, ಲೈಟ್ ಬಾಯ್, ಸ್ಪಾಟ್ ಬಾಯ್, ಸೆಕ್ಯುರಿಟಿಗಳು, ಸೆಟ್ ಸ್ವಚ್ಛ ಮಾಡುವವರು ಸೇರಿದಂತೆ ಸಿನಿಮಾಗೆ ಕೆಲಸ ಮಾಡಿದ 35 ಜನರಿಗೆ ಈ ಚಿನ್ನದ ನಾಣ್ಯ ನೀಡಲಾಗಿದೆ.
ಇದನ್ನೂ ಓದಿ: ನವರಾತ್ರಿ ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಪತ್ರ ಬರೆದ ಮೇಯರ್
Published On - 9:26 pm, Mon, 4 April 22