ರಾಮ್ ಚರಣ್ ಅವರು ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದರು. ಈ ಕಾರಣದಿಂದಲೇ ಅವರ ಮನೆಯಲ್ಲಿ ಒಂದಲ್ಲ-ಎರಡಲ್ಲ ಬರೋಬ್ಬರಿ 15 ಕುದುರೆಗಳು ಇವೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.
ರಾಮ್ ಚರಣ್ ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಕುದುರೆಗಳನ್ನು ಓಡಿಸೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಶ್ವಾನ ಸಾಕಿದ್ದು, ಕುಟುಂಬದಲ್ಲಿ ಒಂದು ಎಂಬಂತೆ ಅದನ್ನು ನೊಡಿಕೊಳ್ಳುತ್ತಾ ಇದ್ದಾರೆ. ವಿದೇಶಿ ಟ್ರಿಪ್ಗೆ ಆ ಶ್ವಾನವನ್ನು ಕರೆದುಕೊಂಡೇ ಹೋಗುತ್ತಾರೆ. ಈಗ ಮಗಳಿಗೂ ಇದೇ ಬಾಂಡ್ ಬೆಳೆಯುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ.
‘ಮಗಧೀರ’ ಸಿನಿಮಾದಲ್ಲಿ ಕುದುರೆ ಒಂದು ಬರುತ್ತದೆ. ಈ ಕುದುರೆಯನ್ನು ರಾಮ್ ಚರಣ್ ಓಡಿಸುತ್ತಾರೆ. ಈ ಕುದುರೆಯನ್ನು ಅವರು ಮನೆಯಲ್ಲಿ ತೆಗೆದುಕೊಂಡು ಹೋಗಿ ಸಾಕಿದ್ದಾರೆ ಎಂಬ ವಿಚಾರ ಗೊತ್ತೇ! ಹೌದು, ರಾಮ್ ಚರಣ್ ಅವರು ಶೂಟ್ ಮುಗಿದ ಬಳಿಕ ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ರಾಮ್ ಚರಣ್ ಗೆ ಸಖತ್ ಇಷ್ಟ ಕನ್ನಡದ ಈ ಹಾಡು
‘ಮಗಧೀರ ಸಿನಿಮಾದಲ್ಲಿ ಬಾದ್ಶಾ ಕುದುರೆಯನ್ನು ಬಳಸಲಾಗಿತ್ತು. ಶೂಟಿಂಗ್ ಮುಗಿದ ಬಳಿಕ ಅದನ್ನು ನಾನು ಮನೆಗೆ ತೆಗೆದುಕೊಂಡು ಹೋದೆ. ಅದನ್ನು ಫಾರ್ಮ್ನಲ್ಲಿ ಇಟ್ಟಿದ್ದೇನೆ. ಅದಕ್ಕೆ ಇತ್ತೀಚೆಗೆ ಮರಿ ಹುಟ್ಟಿದೆ. ನಾನು ಅದನ್ನು ಮಗಳಿಗೆ ಗಿಫ್ಟ್ ಆಗಿ ನೀಡಿದ್ದೇನೆ. ಅವಳಿಗೂ ಈ ಬಗ್ಗೆ ಪ್ಯಾಷನ್ ಬೆಳೆಯಲಿ. ನನ್ನ ಫಾರ್ಮ್ನಲ್ಲಿ 15 ಕುದುರೆಗಳು ಇವೆ. ನನಗೆ ಪ್ರಾಣಿ ಪ್ರೀತಿ. ಅವುಗಳು ನನ್ನ ಹೃದಯಕ್ಕೆ ಹತ್ತಿರ’ ಎಂದಿದ್ದರು ಅವರು.
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿಲ್ಲ. ಒಟಿಟಿಯಲ್ಲೂ ಚಿತ್ರ ರಿಲೀಸ್ ಆಗಿದೆ ಸದ್ಯ ರಾಮ್ ಚರಣ್ ಅವರು ಬುಚ್ಚಿ ಬಾಬು ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟ್ ಶೀಘ್ರವೇ ಆರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ